ಕ್ರೀಡೆ
ಕ್ರಿಕೆಟ್ : ಚೆಂಡಿಗೆ ಎಂಜಲು ಐಸಿಸಿ ನಿಷೇಧ

ಕ್ರಿಕೆಟ್‌ನಲ್ಲಿ ಆಟಗಾರರು ಚೆಂಡಿಗೆ ಎಂಜಲು ಸವರಿ ಪಾಲಿಶ್ ಮಾಡುವುದಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಲಗಾಮು ಹಾಕಿದೆ. ಈ ರೀತಿ ಎಂಜಲು ಸವರುವುದನ್ನು ಶಾಶ್ವತವಾಗಿ ನಿಷೇಧಿಸಿದೆ.
ಆಟದಲ್ಲಿ ಹೊಸ ಬದಲಾವಣೆಗಳನ್ನು ಪರಿಚಯಿಸುವುದಾಗಿ ಐಸಿಸಿ ತಿಳಿಸಿದೆ. ಬಿಸಿಸಿಐ ಅಧ್ಯಕ್ಷ ಸೌರವ್‌ಗಂಗೂಲಿ ನೇತೃತ್ವದ ಪುರುಷರ ಕ್ರಿಕೆಟ್ಸಮಿತಿ ಶಿಫಾರಸ್ಸುಗಳಿಗೆ ಮುಖ್ಯ ಕಾರ್ಯನಿರ್ವಾಹಕ ಸಮಿತಿ ಅನುಮೋದಿಸಿದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ತನ್ನ ಆಟದಲ್ಲಿ ಹಲವಾರು ಬದಲಾವಣೆಗಳನ್ನು ಘೋಷಿಸಿದೆ.
ಅ. ೧ ರಿಂದ ಈ ಹೊಸ ನಿಯಮಗಳು ಜಾರಿಗೆ ಬರಲಿದೆ ಎಂದು ಐಸಿಸಿ ತಿಳಿಸಿದೆ.ಸಾಮಾನ್ಯವಾಗಿ ಕ್ರಿಕೆಟ್ ಆಟಗಾರರು ಚೆಂಡಿಗೆ ಎಂಜಲು ಹಾಕಿ ಅದನ್ನು ಉಜ್ಜುತ್ತಿದ್ದರು. ಈಗ ಅದಕ್ಕೆ ಐಸಿಸಿ ಅಂಕುಶ ಹಾಕಿದೆ.