ಕೌನ್ ಬನೇಗಾ ಕರೋಡ್‌ಪತಿ’ ಸೆಟ್‌ನಲ್ಲಿ ಅಮಿತಾಭ್ ಬಚ್ಚನ್ ಕಾಲಿಗೆ ಗಾಯ

ಕೌನ್ ಬನೇಗಾ ಕರೋಡ್‌ಪತಿ 14′ ( Kaun Banega Crorepati 14 ) ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾಗ ಅಮಿತಾಭ್ ಬಚ್ಚನ್ ಅವರ ( Amitabh Bachchan ) ಎಡ ಕಾಲಿಗೆ ಮೆಟಲ್ ಪೀಸ್ ತಗುಲಿ ರಕ್ತನಾಳ ಕಟ್ ಆಗಿದೆ, ಇದರ ಪರಿಣಾಮ ತೀವ್ರ ರಕ್ತಸ್ರಾವವಾಗಿದೆ.
ಇತ್ತೀಚೆಗೆ 80ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಅಮಿತಾಭ್ ಅವರಿಗೆ ವೈದ್ಯರು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.ಬ್ಲಾಗ್ ಮೂಲಕ ಮಾಹಿತಿ ನೀಡಿದ ಅಮಿತಾಭ್ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಅಮಿತಾಭ್ ಬಚ್ಚನ್ ಅವರು ಬ್ಲಾಗ್ ಬರೆಯೋದನ್ನು ತಪ್ಪಿಸೋದಿಲ್ಲ.
ಈಗ ಕಾಲಿಗೆ ಆಗುವ ಗಾಯದ ಬಗ್ಗೆಯೂ ಅವರು ಬ್ಲಾಗ್‌ನಲ್ಲಿ ಮಾಹಿತಿ ನೀಡಿದ್ದಾರೆ. ಅದನ್ನು ನೋಡಿ ಸಾಕಷ್ಟು ಜನರು ಬಿಗ್ ಬಿಗೆ ಬೇಗ ಚೇತರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.ಅಮಿತಾಭ್‌ಗೆ ವಿಶ್ರಾಂತಿ ಪಡೆಯುವಂತೆ ಸಲಹೆಕಾಲಿಗೆ ಗಾಯ ಆದಾಗ ಅಮಿತಾಭ್ ಅವರು ಸಿಬ್ಬಂದಿಗೆ ಸಹಾಯ ಮಾಡುವಂತೆ ಹೇಳಿ, ಆಸ್ಪತ್ರೆಗೆ ತೆರಳಿದ್ದಾರೆ.
ಅಲ್ಲಿ ಅಮಿತಾಭ್ ಕಾಲಿಗೆ ಹೊಲಿಗೆ ಹಾಕಿದ್ದು, ಕಾಲಿನ ಮೇಲೆ ಒತ್ತಡ ಹೇರಬೇಡಿ, ಕಡಿಮೆ ಆಗುವವರೆಗೆ ನಡೆಯಬೇಡಿ ಎಂದು ವೈದ್ಯರು ಸಲಹೆ ನೀಡಿದ್ದಾರಂತೆ.’ಗುಡ್‌ಬೈ’ ರಿಲೀಸ್ಇತ್ತೀಚೆಗಷ್ಟೇ ಅಮಿತಾಭ್ ಬಚ್ಚನ್ ನಟನೆಯ ‘ಗುಡ್‌ಬೈ’ ಸಿನಿಮಾ ರಿಲೀಸ್ ಆಗಿತ್ತು.
ಈ ಚಿತ್ರದಲ್ಲಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ನಟಿಸಿದ್ದರು ಅನ್ನೋದು ವಿಶೇಷವಾಗಿದೆ.ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಾ. ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ‘ಪುನೀತ ಪರ್ವ’ ಕಾರ್ಯಕ್ರಮ ನಡೆದಿತ್ತು. ‘ಗಂಧದ ಗುಡಿ’ ಪ್ರಿ ರಿಲೀಸ್ ಇವೆಂಟ್‌ಗೆ ದಕ್ಷಿಣ ಭಾರತದ ತಾರೆಯರು ಆಗಮಿಸಿದ್ದರು.
ಈ ವೇಳೆ ವಿಡಿಯೋ ಮೂಲಕ ಅಮಿತಾಭ್ ಬಚ್ಚನ್ ಅವರು ‘ಪುನೀತ್‌ರನ್ನು ನಾವೆಲ್ಲಾ ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತೇವೆ. ನಾವು ತುಂಬಾ ಚಿಕ್ಕ ವಯಸ್ಸಿನಲ್ಲಿ ಅವರನ್ನು ಕಳೆದುಕೊಂಡಿದ್ದೇವೆ. ಸಾವಿನ ಸುದ್ದಿಯನ್ನು ತಿಳಿದಕೂಡಲೇ ವೈಯಕ್ತಿಕವಾಗಿ ಏನು ಹೇಳಬೇಕು ಎಂದು ತೋಚಲಿಲ್ಲ. ಅಪ್ಪು ಅಗಲಿ 1 ವರ್ಷ ಉರುಳಿದೆ, ಅದನ್ನು ಇಂದಿಗೂ ನನಗೆ ನಂಬಲಿಕ್ಕಾಗದು.
ಚಿತ್ರರಂಗದ ದಿಗ್ಗಜ ಡಾ ರಾಜ್‌ಕುಮಾರ್ ಅವರು ನಮ್ಮ ಕುಟುಂಬಕ್ಕೆ ಹತ್ತಿರದ ಸ್ನೇಹಿತರಾಗಿದ್ದರು. ಅವರ ಕುಟುಂಬ ಹಾಗೂ ನಮ್ಮ ಕುಟುಂಬದ ನಡುವೆ ಪರಸ್ಪರ ಆತ್ಮೀಯತೆ, ಗೌರವ ಇತ್ತು.
1982ರಲ್ಲಿ ನನಗೆ ಅಪಘಾತವಾದಾಗ ಅವರು ನನಗಾಗಿ ಪ್ರಾರ್ಥನೆ ಮಾಡಿದ್ದರು. ಅದನ್ನೆಂದು ನಾನು ಮರೆಯುವುದಿಲ್ಲ. ಅಪ್ಪು ಯಾವಾಗಲೂ ನಗುತ್ತಿದ್ದರು, ಪ್ರತಿಯೊಂದು ಸಂದರ್ಭದಲ್ಲಿ, ಅವರ ಮುಖದ ಮೇಲೆ ವಿಶಿಷ್ಟ ಮಂದಹಾಸ ಇರುತ್ತಿತ್ತು’ ಎಂದು ಹೇಳಿದ್ದರು.