ಕೋವಿಡ್ ಮಾನವ ನಿರ್ಮಿತ ವೈರಸ್: ಚೀನಾದ ವುಹಾನ್ ಲ್ಯಾಬ್ ವಿಜ್ಞಾನಿ ಬಹಿರಂಗ

ಜಗತ್ತನ್ನು ಕಾಡಿದ ಮಾಹಮಾರಿ ಕೊರೊನಾ ವೈರಸ್ ಮಾನವ ನಿರ್ಮಿತ ವೈರಸ್ ಎಂದು ಚೀನಾದ ವುಹಾನ್ ಲ್ಯಾಬ್ ವಿಜ್ಞಾನಿ ತಮ್ಮ ನೂತನ ಪುಸ್ತಕದಲ್ಲಿ ಬಹಿರಂಗಪಡಿಸಿದ್ದಾರೆ.
ಮಾನವ ನಿರ್ಮಿತ ಕೋವಿಡ್ ವೈರಲ್ ಲ್ಯಾಬ್ ನಿಂದ ಸೋರಿಕೆ ಆಗಿದ್ದೇ ಜಗತ್ತಿನಲ್ಲೆಡೆ ಹರಡಲು ಕಾರಣ ಎಂದು ವುಹಾನ್ ಲ್ಯಾಬ್ ನಲ್ಲಿ ಕಾರ್ಯ ನಿರ್ಗಹಿಸುತ್ತಿರುವ ಅಮೆರಿಕ ಮೂಲದ ವಿಜ್ಞಾನಿ ಬರೆದ ದಿ ಟ್ರುತ್ ಬಿಹೈಂಡ್ ವುಹಾನ್ (The Truth About Wuhan) ಕುರಿತ ಬರೆದ ಪುಸ್ತಕವನ್ನು ಉಲ್ಲೇಖಿಸಿ ಬ್ರಿಟನ್ ಪತ್ರಿಕೆ ದಿ ಸನ್ ವರದಿ ಮಾಡಿವೆ.
ಸರಕಾರದಿಂದ ನಡೆಸಲಾಗುತ್ತಿರುವ ವುಹಾನ್ ಇನ್ಸಿಟಿಟ್ಯೂಟ್ ಆಫ್ ವಿರೊಜಲಿ ಎಂಬ ಲ್ಯಾಬ್ ನಿಂದ ಕೋವಿಡ್ ವೈರಸ್ ಸೋರಿಕೆ ಆಗಿದೆ.
ಸೋಂಕು ತಜ್ಞ ಹಫ್ ಎಂಬ ವಿಜ್ಞಾನಿ ನ್ಯೂಯಾರ್ಕ್ ಮೂಲದ ಸ್ವಯಂ ಸೇವಾ ಸಂಘಟನೆ ಎಕೊ ಹೆಲ್ತ್ ಅಲಯೆನ್ಸ್ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ದೇಶದ ಭದ್ರತೆ ದೃಷ್ಟಿಯಿಂದ ಕೊರೊನಾದಂತಹ ವೈರಸ್ ಗಳನ್ನು ಚೀನಾ ನಿರ್ಮಿಸಿದ್ದು, 2 ವರ್ಷಗಳ ಹಿಂದೆ ಕೊರೊನಾ ಸೋಂಕು ಲ್ಯಾಬ್ ನಿಂದ ಸೋರಿಕೆ ಆಗಿದೆ ಎಂದು ಅವರು ಹೇಳಿದ್ದಾರೆ.