ಕೋವಿಡ್ ಪ್ರಕರಣಗಳ ಏರಿಕೆ, ಮುಂಬೈನಲ್ಲಿ ಮತ್ತೆ ಲಾಕ್‍ಡೌನ್..?

ಕೋವಿಡ್ ಪ್ರಕರಣಗಳು ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಏರಿಕೆಯಾಗುತ್ತಲೇ ಇದ್ದರೆ ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್‍ಡೌನ್ ಜಾರಿ ಮಾಡಬೇಕಾಗುತ್ತದೆ ಎಂದು ಮುಂಬೈ ನಗರ ರಕ್ಷಕ ಸಚಿವ ಅಸ್ಲಾಂ ಶೇಖ್ ಹೇಳಿದ್ದಾರೆ.
ಎರಡು ತಿಂಗಳಿನಿಂದ ಇಳಿಮುಖವಾಗಿದ್ದ ಕೊರೊನಾ ಕೇಸ್‍ಗಳಲ್ಲಿ ಏರಿಕೆ ಕಾಣಲಾರಂಭಿಸಿದೆ. ಏಪ್ರಿಲ್‍ಗೆ ಹೋಲಿಸಿದರೆ ಮುಂಬೈನಲ್ಲಿ ಕೊರೊನಾದಿಂದ ಆಸ್ಪತ್ರೆಗಳಿಗೆ ದಾಖಲಾಗುತ್ತಿವಿಕೆಯು ಮೇನಲ್ಲಿ ಹೆಚ್ಚಾಗಿದೆ.
ಕೋವಿಡ್-19 ಕಾರಣದಿಂದಾಗಿ ಕಳೆದೆರಡು ದಿನಗಳಲ್ಲಿ ನಗರದಲ್ಲಿ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ 215 ಆಗಿತ್ತು. ಆದಾಗ್ಯೂ ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಓಮಿಕ್ರಾನ್ ಅಲೆ ಸಂದರ್ಭದಲ್ಲಿ 19,200 ರೋಗಿಗಳನ್ನು ದಾಖಲಿಸಲಾಗಿತ್ತು.
ಬಹಳ ಸಮಯದ ನಂತರ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಸಾವಿರ ಸಂಖ್ಯೆ ದಾಟಿದರೆ ಲಾಕ್‍ಡೌನ್ ಜಾರಿಮಾಡಬೇಕಾಗುತ್ತದೆ ಎಂಬ ಸುಳಿವನ್ನು ನೀಡಿದ್ದಾರೆ.
ಕೋವಿಡ್ ಕಾರಣದಿಂದ 60 ವರ್ಷ ಮೇಲ್ಪಟ್ಟವರೇ ಹೆಚ್ಚಾಗಿ ದಾಖಲಾಗುತ್ತಿದ್ದರೆ 60 ರೋಗಿಗಳಲ್ಲಿ 8 ಮಂದಿ 60 ವರ್ಷಕ್ಕಿಂತ ಮೇಲ್ಪಟ್ಟವರು ಇದ್ದಾರೆ.
ಕೋವಿಡ್ ಪ್ರಕರಣಗಳು ಉಲ್ಬಣಗೊಳ್ಳುವುದು ಸಾವಿರ ಗಡಿ ದಾಟಿದರೆ ಅನಿವಾರ್ಯವಾಗಿ ಲಾಕ್‍ಡೌನ್ ವಿಸಬೇಕಾಗುತ್ತದೆ ಎಂದು ಹೇಳಿದರು.ಪ್ರಕರಣಗಳು ಬೆಳೆಯುತ್ತಿರುವ ವೇಗವನ್ನು ಗಮನಿಸಿದರೆ ನಿರ್ಬಂಧಗಳನ್ನು ಹಾಕಬೇಕಾಗುತ್ತದೆ.
ವಿಮಾನಯಾನ ಸಂಸ್ಥೆಗಳ ಮೇಲಿನ ನಿರ್ಬಂಧಗಳು ಇನ್ನೂ ಜಾರಿಯಲ್ಲಿವೆ. ಜನರು ಕಾಳಜಿ ವಹಿಸಿದರೆ ನಿರ್ಬಂಧಗಳನ್ನು ಕಠಿಣಗೊಳಿಸುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು ಎಂದು ಅವರು ತಿಳಿಸಿದ್ದಾರೆ.
ಸತತ ಐದನೆ ದಿನವೂ ಪ್ರಕರಣಗಳ ಸಂಖ್ಯೆ 300ಕ್ಕೆ ಹೆಚ್ಚಿದೆ. ಬೃಹನ್ ಮುಂಬೈ ಮುನ್ಸಿಪಲ್ ಕಾಪೆರ್Çರೇಷನ್‍ನಲ್ಲಿ 318 ಹೊಸ ಪ್ರಕರಣಗಳು ಪತ್ತೆಯಾಗಿವೆ. ಆದರೆ, ಆಸ್ಪತ್ರೆಗೆ 20 ಮಂದಿ ದಾಖಲಾಗಿದ್ದಾರೆ.