ರಾಜ್ಯ

ಕೋಟಿ ಕಂಠ ಗಾಯನ’ ಯಶಸ್ವಿ: ರಾಜ್ಯಾದ್ಯಂತ ಜನರ ದನಿಯಲ್ಲಿ ಮೊಳಗಿದ ಕನ್ನಡ ಕಂಪು ಸಾರುವ ಹಾಡುಗಳು

ಕನ್ನಡ ರಾಜ್ಯೋತ್ಸವದ ಹೊಸ್ತಿಲಲ್ಲಿರುವ ರಾಜ್ಯದಲ್ಲಿ ಸರ್ಕಾರ ಆಯೋಜಿಸಿರುವ ‘ಕೋಟಿ ಕಂಠ ಗಾಯನ’ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು,ರಾಜ್ಯಾದ್ಯಂತ ವಿದ್ಯಾರ್ಥಿಗಳು,ಜನಪ್ರತಿನಿಧಿಗಳು, ಅಧಿಕಾರಿಗಳು ಜನಸಾಮಾನ್ಯರು ಕನ್ನಡ ಕಂಪು ಸಾರುವ ಗಾಯನಕ್ಕೆ ದನಿಗೂಡಿಸಿದರು.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ 50 ಸಾವಿರ ಜನರು ಆಯ್ದ 6 ಹಾಡುಗಳನ್ನು ಸಾಮೂಹಿಕವಾಗಿ ಹಾಡಲಾಯಿತು. ಜಯಭಾರತ ಜನನೀಯ ತನುಜಾತೆ, ಹುಟ್ಟಿದರೇ ಕನ್ನಡನಾಡಿನಲ್ಲಿ ಹುಟ್ಟಬೇಕು, ಹಚ್ಚೇವು ಕನ್ನಡದ ದೀಪ, ಭಾರಿಸು ಕನ್ನಡ ಡಿಂಡಿಮವಾ ,ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಸೇರಿ 6 ಕನ್ನಡ ಹಾಡುಗಳಿಗೆ ಕೋಟಿ ಕಂಠಗಳು ದನಿಯಾದವು.

ಹಾಗೆಯೇ ಬೆಂಗಳೂರಿನ ವಿಧಾನಸೌಧ ಮೆಟ್ಟಿಲು, ಎಲ್ಲ ಮೆಟ್ರೋ ನಿಲ್ದಾಣ, ವಿಮಾನ ನಿಲ್ದಾಣ, ಬಸ್ ನಿಲ್ದಾಣಗಳು, ಆಟೊ ತಂಗುದಾಣಗಳು, ಕಾರಾಗೃಹ, ಐಟಿಬಿಟಿ ಸಂಸ್ಥೆಗಳು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಲಾಲ್​ ಬಾಗ್ ​ಗಳಲ್ಲಿ ಗೀತ ಗಾಯನ ಕಾರ್ಯಕ್ರಮಕ್ಕೆ ಆಯೋಜಿಸಲಾಗಿತ್ತು.ವಿಧಾನಸೌಧದ ಮೆಟ್ಟಿಲಿನಲ್ಲಿ ಆಯೋಜಿಸಿದ್ಧ ಕೋಟಿಕಂಠ ಗಾಯನ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಚಿವರಾದ ಆರ್.

ಅಶೋಕ್, ಸುನೀಲ್ ಕುಮಾರ್, ರಾಜ್ಯಸಭೆ ಸದಸ್ಯ ಜಗ್ಗೇಶ್ ಸಂಸದರಾದ ಸದಾನಂದಗೌಡ, ತೇಜಸ್ವಿಸೂರ್ಯ ಭಾಗವಹಿಸಿದ್ದರು.ಕೋಟಿ ಕಂಠ ಗಾಯನದಲ್ಲಿ 1.5 ಕೋಟಿ ಜನರು ಭಾಗಿಯಾಗಿದ್ದು, ರಾಜ್ಯದ 30 ಜಿಲ್ಲೆಗಳಲ್ಲಿ ಮೊಳಗಿದ ಗಾಯನಕ್ಕೆ ಶಾಲಾ ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ದನಿಗೂಡಿಸಿದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button