ಅಂತಾರಾಷ್ಟ್ರೀಯ
ಕೊಲಂಬಿಯಾದ ಕ್ಯಾರಿಬೀನ್ ಕಡಲ ತೀರದಲ್ಲಿ ಬಂಗಾರ ತುಂಬಿದ ಹಡಗುಗಳು ಪತ್ತೆ!

ಬೊಗೋಟಾ: ಕೊಲಂಬಿಯಾದ ಕ್ಯಾರಿಬೀನ್ ಕಡಲ ತೀರದಲ್ಲಿ 1708ರಲ್ಲಿ ಮುಳುಗಿದ್ದ ಸ್ಯಾನ್ ಜೋಸ್ ಹಡಗಿನ ಅವಶೇಷಗಳ ಬಳಿ ಎರಡು ಬಂಗಾರ ತುಂಬಿರುವ ಹಡಗುಗಳು ಪತ್ತೆಯಾಗಿವೆ. ಈ ಹಡಗುಗಳಲ್ಲಿ ಬರೋಬ್ಬರಿ 1.32 ಲಕ್ಷ ಕೋಟಿ ರೂ.(17 ಶತಕೋಟಿ ಅಮೆರಿಕನ್ ಡಾಲರ್) ಮೌಲ್ಯದ ಚಿನ್ನವಿರುವುದಾಗಿ ವರದಿಯಾಗಿದೆ. ಬಂಗಾರದಿಂದ ತುಂಬಿರುವ ಈ ಹಡಗುಗಳು ಸುಮಾರು 300 ವರ್ಷಗಳಷ್ಟು ಹಳೆಯದ್ದಾಗಿದೆ ಎಂದು ತಿಳಿದುಬಂದಿದೆ.
ರಿಮೋಟ್ ಕಂಟ್ರೋಲ್ಡ್ ವಾಹನದಿಂದ ವಿಡಿಯೋವನ್ನು ಸೆರೆಹಿಡಿಯಲಾಗಿದ್ದು, ಮುಖ್ಯ ಹಡಗು ಅಪಘಾತದ ಬಳಿ ದೋಣಿ ಮತ್ತು ಸ್ಕೂನರ್ ಅನ್ನು ತೋರಿಸುತ್ತದೆ. ಈ ರಿಮೋಟ್ ಚಾಲಿತ ವಾಹನವನ್ನು ದೇಶದ ಕೆರಿಬಿಯನ್ ಕರಾವಳಿಯಿಂದ 3,100 ಅಡಿ ಆಳಕ್ಕೆ ಕಳುಹಿಸಿ ಚಿತ್ರೀಕರಿಸಲಾಗಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.