ಕೊರೋನ ಭೀತಿ ಇನ್ನೂ ಮುಗಿದಿಲ್ಲ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಹೊಸ ಕೋವಿಡ್ ಪ್ರಕರಣಗಳಲ್ಲಿ ಗಮನಾರ್ಹ ಇಳಿಕೆಯಾಗಿದ್ದರೂ ಸೋಂಕಿನ ಮೇಲೆ ನಿಗಾ, ಸೋಂಕಿತರ ಪತ್ತೆಗೆ ಪರೀಕ್ಷೆ, ಹೊಸ ತಳಿಗಳ ಪತ್ತೆಗೆ ಸ್ವೀಕ್ಸೆನ್ಸಿಂಗ್, ಲಸಿಕೆ ನಿರ್ಲಕ್ಷ್ಯವು ಹೊಸ ಕುಲಾಂತರಿ ಉಗಮಕ್ಕೆ ಕಾರಣವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನೋಮ್ ಎಚ್ಚರಿಕೆ ನೀಡಿದ್ದಾರೆ.
ನಾವು ಕೋವಿಡ್ ಸಾಂಕ್ರಾಮಿಕದ ಅಂತ್ಯದ ಹತ್ತಿರದಲ್ಲಿದ್ದೇವೆ, ಸಾಂಕ್ರಾಮಿಕ ಇನ್ನೂ ಅಂತ್ಯಗೊಂಡಿಲ್ಲ. ಹೀಗಾಗಿ ಎಚ್ಚರಿಕೆ ಅಗತ್ಯ ಎಂದು ಹೇಳಿದ್ದಾರೆ. ಚೀನಾ ಮತ್ತು ಬ್ರಿಟನ್‌ನ ಕೆಲವು ಭಾಗಗಳಲ್ಲಿ ಮತ್ತೆ ಹೊಸ ಕೋವಿಡ್ ಪ್ರಕರಣಗಳ ಹೆಚ್ಚಳದ ಬೆನ್ನಲ್ಲೇ ಟೆಡ್ರೋಸ್ ಈ ಹೇಳಿಕೆ ನೀಡಿದ್ದಾರೆ.ಒಮಿಕ್ರೋನ್‌ನ 500ಕ್ಕೂ ಹೆಚ್ಚು ಉಪತಳಿಗಳು ವಿಶ್ವದಾದ್ಯಂತ ಪ್ರಸರಣದಲ್ಲಿವೆ.
ಅವು ತೀವ್ರವಾಗಿ ಹಬ್ಬಬಲ್ಲವು. ಹಿಂದಿನ ರೂಪಾಂತರಿಗಳಿಗೆ ಹೋಲಿಸಿದರೆ ಶ್ವಾಸಕೋಶ ವ್ಯವಸ್ಥೆಗೆ ಹೆಚ್ಚು ವೇಗವಾಗಿ ಹಬ್ಬಿ ಗಂಭೀರ ಹಾನಿ ಮಾಡಬಲ್ಲವು. ಇವುಗಳಲ್ಲಿನ ರೂಪಾಂತರಿಗಳು ದೇಹದ ಜೀವ ನಿರೋಧಕ ವ್ಯವಸ್ಥೆಯನ್ನೂ ಸುಲಭವಾಗಿ ದಾಟಬಲ್ಲ ಶಕ್ತಿ ಹೊಂದಿವೆ.
ಹೀಗಾಗಿ ಎಚ್ಚರ ಅಗತ್ಯ ಎಂದು ಟೆಡ್ರೋಸ್ ಹೇಳಿದ್ದಾರೆ.ವಿಶ್ವವನ್ನೇ ಮಾರಣಾಂತಿಕವಾಗಿ ಕಾಡಿದ, ಲಕ್ಷಾಂತರ ಜನರ ಜೀವ ಬಲಿಪಡೆದ ಕೊರೋನಾ ಸಾಂಕ್ರಾಮಿಕ ಪ್ರಕೃತಿಯಿಂದ ಬಂದಿದ್ದಲ್ಲ, ಮಾನವ ನಿರ್ಮಿತ ವೈರಸ್ ಎಂದು ಚೀನಾದ ವುಹಾನ್‌ನಲ್ಲಿರುವ ಸಂಶೋಧನಾ ಪ್ರಯೋಗಾಲಯದಲ್ಲಿ ಕೆಲಸ ಮಾಡಿದ ಅಮೆರಿಕಾ ಮೂಲದ ವಿಜ್ಞಾನಿ ಹೇಳಿದ್ದಾರೆ.