ರಾಜ್ಯ

ಕೊರೊನಾ ಉಪತಳಿ ಕ್ರಾಕೆನ್‍ ಕುರಿತು ಇಸ್ರೆಲ್‍ ತಜ್ಞ ವೈದ್ಯರ ಎಚ್ಚರಿಕೆ

ಒಮ್ಮೆ ಕೋವಿಡ್ ಸೋಂಕು ತಗುಲಿ ಗುಣಮುಖರಾಗಿದ್ದೇವೆ ಎಂದ ಮಾತ್ರಕ್ಕೆ ಮತ್ತೆ ಸೋಂಕು ಬರುವುದಿಲ್ಲ ಎಂಬ ನಂಬಿಕೆ ಬೇಡ, ರೂಪಾಂತರಿ ಓಮಿಕ್ರಾನ್‍ನ ಉಪತಳಿ ಕ್ರಾಕೆನ್ ಕುರಿತಾಗಿ ಹೆಚ್ಚು ಜಾಗೃತರಾಗಿರುವಂತೆ ಇಸ್ರೆಲ್‍ನ ತಜ್ಞ ವೈದ್ಯರು ಎಚ್ಚರಿಸಿದ್ದಾರೆ.

ಕ್ರಾಕೆನ್ ಉಪನಾಮದಿಂದ ಜನಪ್ರಿಯತೆ ಪಡೆದಿರುವ ಎಕ್ಸ್‍ಬಿಬಿ.1.5 ರೂಪಾಂತರಿ ಸೋಂಕು, ಅತ್ಯಂತ ವೇಗವಾಗಿ ಹರಡುವ ಸಾಮಾಥ್ರ್ಯ ಹೊಂದಿದೆ ಎಂದು ಇಸ್ರೆಲ್‍ನ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ಡಾ.ನಡ್ವಾ ಸೋರೆಕ್ ಸ್ಪಷ್ಟಪಡಿಸಿದ್ದಾರೆ.ಅಮೆರಿಕಾದಲ್ಲಿ ಹಬ್ಬುತ್ತಿರುವ ಈ ಉಪತಳಿ, ಇಸ್ರೆಲ್‍ಗೂ ಬರಲಿದೆ.

ಆದರೆ ಈಗಲ್ಲ ಎಂದರೆ ಯಾವಾಗ ಎಂಬ ಪ್ರಶ್ನೆ ನಮ್ಮ ಮುಂದಿದೆ. ಆರಂಭದಲ್ಲೇ ಚೀನಾವನ್ನು ಕಾಡಿದ್ದ ಕ್ರಾಕೆನ್, ಈಗ ಅಮೆರಿಕದಲ್ಲಿ ಹರಡಲಾರಂಭಿಸಿದೆ. ವೇಗವಾಗಿ ಹರಡುವ ಶಕ್ತಿ ಇರುವ ಈ ಸೋಂಕು ಆಲಾ, ಡೆಲ್ಟಾದಷ್ಟು ಅಪಾಯಕಾರಿ ಎನಿಸುವುದಿಲ್ಲ.

ಆದರೆ ಮತ್ತಷ್ಟು ರೂಪಾಂತರಕ್ಕೆ ಈ ಉಪತಳಿ ಕಾರಣವಾಗಬಹುದು ಎಂಬ ಎಚ್ಚರಿಕೆ ನೀಡಲಾಗಿದೆ.ಮುಂದಿನ ಕೆಲವು ವಾರಗಳು ಅಥವಾ ತಿಂಗಳಲ್ಲಿ ಉಪತಳಿಯಿಂದ ಇಸ್ರೆಲ್ ಮತ್ತೊಂದು ಅಲೆಯ ಅನುಭವವನ್ನು ಎದುರಿಸಲಿದೆ. ಕೆಲವು ತಿಂಗಳ ಹಿಂದೆ ಕೋವಿಡ್ ಸೋಂಕು ತಗುಲಿತ್ತು ಎಂದ ಮಾತ್ರಕ್ಕೆ ಹೊಸ ರೂಪಾಂತರಿಯಿಂದ ಸುರಕ್ಷಿರವಾಗಿದ್ದೇವೆಂದು ಭಾವಿಸಬೇಕಿಲ್ಲ ಎಂದು ವೈದ್ಯರು ಹೇಳಿದ್ದಾರೆ.ಕ್ರಾಕೆನ್ ಸದಸ್ಯಕ್ಕೆ ಅಮೆರಿಕಾದಲ್ಲಿ ಹೆಚ್ಚು ವ್ಯಾಪಕವಾಗಿರುವ ಸೋಂಕಾಗಿದೆ.

ಅಲ್ಲಿನ ಆಡಳಿತದ ಮಾಹಿತಿಯ ಪ್ರಕಾರ ಡಿಸೆಂಬರ್ ಕೊನೆಯ ವೇಳೆಗೆ ಶೇ.40.5ರಷ್ಟು ಪ್ರಕರಣಗಳಲ್ಲಿ ಎಕ್ಸ್‍ಬಿಬಿ.1.5 ಇರುವುದು ಖಚಿತವಾಗಿದೆ ಎಂದು ರೋಗ ನಿಯಂತ್ರಣ ಮತ್ತು ತಡೆ ಹಿಡಿಯುವಿಕೆ ಕೇಂದ್ರ ಸ್ಪಷ್ಟ ಪಡಿಸಿದೆ.ಏಷ್ಯಾ ಭಾಗದಲ್ಲಿ ಮೊದಲು ಕಾಣಿಸಿಕೊಂಡ ಉಪತಳಿ, ಚೀನಾದಲ್ಲಿ ಭಾರಿ ಅಪಾಯಕಾರಿ ಸನ್ನಿವೇಶಗಳಿಗೆ ಕಾರಣವಾಗಿತ್ತು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button