ರಾಜ್ಯ
ಕೊಡಗಿನಲ್ಲಿ ಧಾರಾಕಾರ ಮಳೆ; KRS ಡ್ಯಾಂ ಭರ್ತಿಗೆ 13 ಅಡಿ ಬಾಕಿ

ಬೆಂಗಳೂರು: ರಾಜ್ಯದಲ್ಲಿ ಕೆಲಕಾಲ ವಿರಾಮ ನೀಡಿದ್ದ ಮಳೆರಾಯ ಮತ್ತೆ ಪ್ರತ್ಯಕ್ಷನಾಗಿದ್ದಾನೆ.
ಕೊಡಗಿನಲ್ಲಿ ಧಾರಾಕಾರ ಮಳೆಯಾಗಿರುವ ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ KRS ಡ್ಯಾಂನ ನೀರಿನ ಪ್ರಮಾಣದಲ್ಲಿ ಗಮನಾರ್ಹ ಏರಿಕೆ ಕಂಡಿದೆ.
ಮಳೆ ನೀರಿಂದ ಇಂದಿನ ಜಲಾಶಯದ ನೀರಿನಮಟ್ಟ 112.64 ಅಡಿಗೆ ಏರಿಕೆಯಾಗಿದ್ದು, ಡ್ಯಾಂ ಭರ್ತಿಗೆ ಇನ್ನು ಕೇವಲ 13 ಅಡಿ ಬಾಕಿ ಇದೆ. ಜಲಾಶಯದ ಒಳ ಹರಿವಿನ ಮಟ್ಟದಲ್ಲಿ ಭಾರೀ ಏರಿಕೆ ಕಂಡಿದ್ದು, 26,695 ಸಾವಿರ ಕ್ಯೂಸೆಕ್‍ಗೆ ಏರಿಕೆಯಾಗಿದೆ.
ಒಂದೇ ದಿನದಲ್ಲಿ ಜಲಾಶಯಕ್ಕೆ 3 ಅಡಿ ನೀರು ಹರಿದು ಬಂದಿದೆ. ಇದೇ ರೀತಿಯ ಒಳ ಹರಿವು ಬಂದರೇ ಒಂದೇ ವಾರದಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ.ರಾಜ್ಯದ ವಿವಿಧೆಡೆ ಮಳೆಯಾಗಿರುವ ಪರಿಣಾಮ ಕೆಆರ್‍ಎಸ್ ಮಾತ್ರಲ್ಲದೇ ಹಲವು ಜಲಾಶಯಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.
ರಾಜ್ಯದ ವಿವಿಧ ಜಲಾಶಯಗಳ ಇಂದಿನ ನೀರಿ ಮಟ್ಟ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.