ಕೊಟ್ಟಿದ್ದು ಕೋಟಿ ಕೋಟಿ ವರದಕ್ಷಿಣೆ : ಅನುಭವಿಸಿದ್ದು ನರಕಯಾತನೆ!

ಬೆಂಗಳೂರು : ಕೆಜಿಗಟ್ಟಲೇ ಚಿನ್ನಾಭರಣ, ಕೋಟಿಗಟ್ಟಲೇ ವರದಕ್ಷಿಣೆ ಕೊಟ್ರು ಈ ಪಾಪಿಗಳ ಧನದಾಹ ಮಾತ್ರ ತೀರಿರಲಿಲ್ಲ. 6 ಕೋಟಿ ಖರ್ಚು ಮಾಡಿ ಅದ್ದೂರಿಯಾಗಿ ಮದುವೆ ಮಾಡಿದ್ರು ಮಗಳು ಮಾತ್ರ ಸುಖವಾಗಿರಲಿಲ್ಲ.
4 ಕೆಜಿ ಚಿನ್ನ, 200 ಕೆಜಿ ಬೆಳ್ಳಿ, 55 ಲಕ್ಷದ ಕೂಪರ್ ಕಾರು, ರಾಮೋಜಿ ಫಿಲ್ಮ್ ಸಿಟಿಲಿ ಅದ್ಧೂರಿ ಮದುವೆ ಮಾಡಿದ್ರು. ಆದ್ರೆ, ಪದೇ ಪದೇ ವರದಕ್ಷಿಣೆ ತಗೊಂಡು ಬಾ ಎಂದು ಯುವತಿಗೆ ಪೀಡಿಸುತ್ತಿದ್ದರು.
ಬೆಂಗಳೂರಿನ ಬಸವನಗುಡಿ ನಿವಾಸಿ ಸಂದೀಪ್ ಎಂಬಾತ 2021ರ ಜನವರಿಯಲ್ಲಿ ಹೈದರಾಬಾದ್’ನ ಖ್ಯಾತ ಬಟ್ಟೆ ತಯಾರಿಕಾ ಕಂಪನಿ ಮಾಲೀಕನ ಮಗಳ ವರಿಸಿದ್ದ. ಯುವತಿಯ ತಂದೆ ಹೈದರಾಬಾದ್ ನಲ್ಲಿ ಕಳೆದ 30 ವರ್ಷಗಳಿಂದ ಖ್ಯಾತ ಬ್ರಾಂಡ್ ನ ಬಟ್ಟೆ ತಯಾರಿಕಾ ಕಂಪನಿ ಹೊಂದಿದ್ದಾರೆ.
ಅಲ್ಲದೆ ಇವರು, ಹೈದರಾಬಾದ್ ಬೆಂಗಳೂರು ಸೇರಿ ಹಲವು ಮಹಾನಗರದಲ್ಲಿ ಇವರ ಮಾಲೀಕತ್ವದ ಬಟ್ಟೆ ಶೋ ರೂಂಗಳಿವೆ. ಹೀಗಾಗಿ ಮದುವೆಯ ನಂತರ ಅಳಿಯನಿಗೆ ಇಷ್ಟೆಲ್ಲ ವರದಕ್ಷಿಣೆ ಜೊತೆ ಎರಡು ಶೋ ರೂಂನ ಲಾಭಾಂಶವನ್ನು ಕೂಡ ಕೊಟ್ಟಿದ್ರು.
ಆದ್ರೆ ಸಂದೀಪ್ ಪ್ರತಿನಿತ್ಯ ಕುಡಿದು ಪತ್ನಿಗೆ ದೈಹಿಕ ಹಲ್ಲೆ ನಡೆಸಿರೋ ಆರೋಪಿ ಕೇಳಿ ಬಂದಿದೆ. ಈತ ಮನೆಯಲ್ಲಿ ಗೆಳೆಯರ ಜೊತೆ ಡ್ರಗ್ಸ್ ಪಾರ್ಟಿ ಮಾಡಿ ಪತ್ನಿಗೆ ಅಶ್ಲೀಲ ಬೈಗುಳ ಬೈಯುತ್ತಿದ್ದ, ಅಲ್ಲದೆ, ನಶೆ ಮತ್ತಲ್ಲಿ ಪತ್ನಿಯ ತಲೆಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೇರಿಯುತ್ತಿದ್ದ ಎಂದು ನೊಂದ ಯುವತಿಯಿಂದ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸಧ್ಯ ಪೊಲೀಸರು ಯುವತಿ ನೀಡಿದ ದೂರಿನನ್ವಯ ವರದಕ್ಷಿಣೆ ಕಿರುಕುಳ ಹಾಗೂ ಜೀವಬೆದರಿಕೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.