
ಬೆಂಗಳೂರಿನ ತಲಘಟ್ಟಪುರ ಪೊಲೀಸ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಕೈ-ಕಾಲು ಸ್ವಾಧೀನ ಕಳೆದುಕೊಂಡು ಬಳಲುತ್ತಿದ್ದ ಹೆಂಡತಿಯನ್ನು ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಸಂಪ್‌ಗೆ ತಳ್ಳಿ ಕೊಲೆ ಮಾಡಿದ ಘಟನೆ ನಡೆದಿದೆ.
ಶಿವಮ್ಮ (50) ಕೊಲೆಯಾದವರು. ಗಂಡ ಶಂಕರಪ್ಪನಿಗೆ 60 ವರ್ಷವಾಗಿದ್ದು ವಾಚ್‌ಮ್ಯಾನ್ ಕೆಲಸ ಮಾಡುತ್ತಿದ್ದಾರೆ.
ಹೆಂಡತಿ ಎರಡು ವರ್ಷದ ಹಿಂದೆ ಕೈ-ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದು, ಊಟ ಮಾಡಿಸುವುದು, ಎಲ್ಲ ದಿನನಿತ್ಯ ಕಾರ್ಯಗಳನ್ನು ಅವರೇ ಮಾಡುತ್ತಿದ್ದರು.
ಪ್ರತಿನಿತ್ಯ ದುಡಿಮೆಯ ಜೊತೆಗೆ ಪತ್ನಿಯನ್ನು ನೋಡಿಕೊಳ್ಳುವ ಜವಾಬ್ದಾರಿಯಿಂದ ಶಂಕರಪ್ಪನಿಗೆ ಬೇಸರ ಉಂಟಾಗಿತ್ತು. ಭಾನುವಾರ ಮಧ್ಯಾಹ್ನ ಪತ್ನಿಯನ್ನು ಕೊಲೆ ಮಾಡಿದ್ದಾರೆ.
ಕಟ್ಟಡ ನಿರ್ಮಾಣ ಕಾರ್ಮಿಕರು ಬಂದು ನೋಡಿದಾಗ ಸಂಪ್‌ನಲ್ಲಿ ಶಂಕರಪ್ಪನ ಪತ್ನಿಯ ಮೃತದೇಹ ಪತ್ತೆಯಾಗಿದೆ. ವಿಚಾರವನ್ನು ಪೊಲೀಸರಿಗೆ ತಿಳಿಸಲಾಗಿದ್ದು,ವಿಚಾರಣೆ ನಡೆಸಿದಾಗ ಪತ್ನಿಯನ್ನು ತಾನೇ ಸಂಪ್‌ಗೆ ತಳ್ಳಿರುವುದಾಗಿ ಶಂಕರಪ್ಪ ಹೇಳಿದ್ದಾನೆ.