ಕೈಗೆ ಚುನಾವಣೆ ಮತದಾರರ ಪಟ್ಟಿ ಬಿಡುಗಡೆಗೆ ಶಶಿ ಆಗ್ರಹ

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿರುವ ಸಂಸದ ಶಶಿ ತರೂರ್ ಅವರು, ಮತದಾರರ ಪಟ್ಟಿ ಬಿಡುಗಡೆ ಮಾಡುವಂತೆ ಕಾಂಗ್ರೆಸ್ ಪಕ್ಷವನ್ನು ಆಗ್ರಹಿಸಿದ್ದಾರೆ.
ಜಿ – ೨೩ ಸಹೋದ್ಯೋಗಿ ಮತ್ತು ಸಂಸದ ಮನೀಶ್ ತಿವಾರಿ ಅವರ ಬೇಡಿಕೆ ಅನುಮೋದಿಸಿದ್ದು, ಪಕ್ಷದಲ್ಲಿನ ೯ ಸಾವಿರ ಮತದಾರರ ಪಟ್ಟಿ ಬಿಡುಗಡೆ ಮಾಡಿ ಚುನಾವಣೆ ಪಾರದರ್ಶಕವಾಗಿ ನಡೆಸಲು ಅವಕಾಶ ಮಾಡಿಕೊಡಿ ಎಂದು ಅಸ್ಸಾಂನ ಸಂಸದ ಪ್ರದ್ಯುತ್ ಬೊರ್ಡೊಲೊಯ್ ಅವರ ಜೊತೆಗೆ ಕೇಂದ್ರ ಚುನಾವಣಾ ಪ್ರಾಧಿಕಾರದ ಮುಖ್ಯಸ್ಥ ಮಧುಸೂದನ್ ಮಿಸ್ತ್ರಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಪತ್ರ ಬರೆದಿರುವುದು ನಿಜ:ಚುನಾವಣೆ ಪಾರದರ್ಶಕವಾಗಿ ನಡೆಯಬೇಕು ಎನ್ನುವ ಉದ್ದೇಶದಿಂದ ಮತದಾರರ ಪಟ್ಟಿ ಬಿಡುಗಡೆ ಮಾಡುವಂತೆ ಬರೆದಿರುವುದು ನಿಜ ಎಂದು ಅಸ್ಸಾಂ ಸಂಸದ ಪ್ರದ್ಯುತ್ ಹೇಳಿದ್ದಾರೆ.ಚುನಾವಣಾ ಪ್ರಕ್ರಿಯೆ ಸಾರ್ವಜನಿಕಗೊಳಿಸದ ಹೊರತು ಆಯ್ಕೆ ಪ್ರಕ್ರಿಯೆ ಹೇಗೆ ನ್ಯಾಯಯುತವಾಗಿರುತ್ತದೆ ಎಂದು ಮನೀಶ್ ತಿವಾರಿ ಪ್ರಶ್ನಿಸಿದ್ದರು.
ಅದಕ್ಕೆ ಸಂಸದ ಕಾರ್ತಿ ಚಿದಂಬರಂ ಮತ್ತು ಶಶಿ ತರೂರ್ ಅವರ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿದ್ದರು.ಕಾರ್ತಿ ಚಿದಂಬರಮ್ ಮತ್ತು ಪ್ರದ್ಯುತ್ ಬೊರ್ಡೊಲೊಯ್ ಜಿ ೨೩ ಗುಂಪಿನ ಸದಸ್ಯರಲ್ಲ ಆದರೂ ಅವರು ಕಾಂಗ್ರೆಸ್ ವೆಬ್‌ಸೈಟ್‌ನಲ್ಲಿ ರಾಜ್ಯವಾರು ಮತದಾರರ ಪಟ್ಟಿಯನ್ನು ಅಪ್‌ಲೋಡ್ ಮಾಡುವಂತೆ ಬೊರ್ಡೊಲೊಯ್ ಚುನಾವಣಾ ಪ್ರಾಧಿಕಾರವನ್ನು ಕೇಳಿದ್ದಾರೆ.
ಐದು ವರ್ಷಗಳ ಹಿಂದೆ ಪಕ್ಷದ ಚುನಾವಣೆಗಳು ನಡೆದಾಗ, ೯,೫೩೧ ಪಿಸಿಸಿ ಪ್ರತಿನಿಧಿಗಳನ್ನು ಒಳಗೊಂಡಿತ್ತು. ಈ ಬಾರಿಯ ಮತದಾರರ ನಿಖರ ಸಂಖ್ಯೆಯ ಕುರಿತು ಬಹಿರಂಗಪಡಿಸಿಲ್ಲ. ೨೦೧೭ರಲ್ಲಿ ರಾಹುಲ್ ಗಾಂಧಿ ಅವಿರೋಧವಾಗಿ ಆಯ್ಕೆಯಾದರು.
ಈ ಬಾರಿ ಸ್ಪರ್ಧೆ ಏರ್ಪಡುವ ಸೂಚನೆಗಳಿವೆ.,ತಿರುವನಂತಪುರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಶಿ ತರೂರ್, ಮತದಾರರ ಪಟ್ಟಿಯಲ್ಲಿ ಪಾರದರ್ಶಕತೆ ಹೊಂದಿರುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ.
ಮನೀಷ್ ತಿವಾರಿ ಅವರು ಕೇಳಿದ್ದು ಅದನ್ನೇ, ಎಲ್ಲರೂ ಒಪ್ಪುವ ತತ್ವವಾಗಿದೆ ಎಂದು ನನಗೆ ಖಾತ್ರಿಯಿದೆ ಎಂದಿದ್ದಾರೆ..