ಅಪರಾಧ

ಕೇವಲ 50 ರೂಪಾಯಿಗೆ ಬಿತ್ತು ಸ್ನೇಹಿತನ ಹೆಣ..!

friend murder bangalore

ಕೇವಲ 50 ರೂ.ಗಾಗಿ ಇಬ್ಬರು ಸ್ನೇಹಿತರ ನಡುವೆ ಆರಂಭವಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ದಾರುಣ ಘಟನೆ ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಲಗ್ಗೆರೆಯ ಮುನೇಶ್ವರ ಲೇಔಟ್ 5ನೇ ಕ್ರಾಸ್ ನಿವಾಸಿ ಶಿವಮಾಧು(24) ಕೊಲೆಯಾದ ಆಟೋ ಚಾಲಕ.

ಆರೋಪಿ, ಫುಡ್ ಡೆಲಿವರಿ ಬಾಯ್ ಶಾಂತಕುಮಾರ್ ಪರಾರಿಯಾಗಿದ್ದು, ಆತನಿಗಾಗಿ ಶೋಧ ಕೈಗೊಳ್ಳಲಾಗಿದೆ.ಶಿವಮಾಧು ಹಾಗೂ ಶಾಂತಕುಮಾರ್ ಬಾಲ್ಯದಿಂದಲೂ ಸ್ನೇಹಿತರು. ರಾತ್ರಿ ಕುರುಬರಹಳ್ಳಿ ಸರ್ಕಲ್ ಬಳಿ ಶಿವಮಾಧು ತನ್ನ ಸ್ನೇಹಿತರಾದ ಶರಣ್, ಪ್ರವೀಣ್ ಜೊತೆ ಬಂದಾಗ ಶಾಂತಕುಮಾರ್ ಸಹ ಅಲ್ಲಿಗೆ ಬಂದಿದ್ದಾನೆ.

ರಾತ್ರಿ 7.15ರ ಸುಮಾರಿನಲ್ಲಿ ಕುರುಬರಹಳ್ಳಿ ಸರ್ಕಲ್ ಬಳಿಯ ಸೈಬರ್ ಸೆಂಟರ್‍ವೊಂದಕ್ಕೆ ಹೋಗಿದ್ದಾಗ ಶಿವಮಾಧು ಜೇಬಿನಿಂದ ಶಾಂತಕುಮಾರ್ 50 ರೂ. ತೆಗೆದುಕೊಂಡಿದ್ದಾನೆ. ತಕ್ಷಣ ಶಿವಮಾಧು ಹಣ ಏಕೆ ತೆಗೆದುಕೊಂಡೆ ಕೊಡು ಎಂದು ಸಲುಗೆಯಿಂದಲೇ ಕೇಳಿದಾಗ, ನಾನ ಕೊಡಲ್ಲ ಎಂದು ಹೇಳುತ್ತಿದ್ದಂತೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಜಗಳ ನಡೆದು ವಿಕೋಪಕ್ಕೆ ತಿರುಗಿದೆ.

ಆ ಸಂದರ್ಭದಲ್ಲಿ ಶಿವಮಾಧು ಮೇಲೆ ಕೋಪ ಮಾಡಿಕೊಂಡ ಶಾಂತಕುಮಾರ್ ತನ್ನ ಬಳಿಯಿದ್ದ ಚಾಕುವಿನಿಂದ ಆತನ ಎಡಭಾಗದ ಎದೆಗೆ ಚುಚ್ಚಿದ್ದರಿಂದ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ತಕ್ಷಣ ಸ್ಥಳದಲ್ಲಿದ್ದವರು ಶಿವಮಾಧುನನ್ನು ಸಮೀಪದ ಕಾರ್ಡ್‍ರೋಡ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಪರೀಕ್ಷಿಸಿ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಬಸವೇಶ್ವರನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೃತನ ಸಹೋದರ ಸಿದ್ದರಾಜು ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button