ರಾಜ್ಯ

ಕೇವಲ 3 ದಿನಗಳಲ್ಲಿ 42.78 ಲಕ್ಷ ರೂ ಸಂಗ್ರಹ ; ಹಾಸನಾಂಬ ದರ್ಶನ

ಪ್ರಸಿದ್ಧ ಹಾಸನಾಂಬ ದೇವಿಯ ವಿಶೇಷ ದರ್ಶನದಿಂದ ಕೇವಲ ಮೂರು ದಿನಗಳಲ್ಲಿ 42.78 ಲಕ್ಷ ರೂ. ಸಂಗ್ರಹವಾಗಿದ್ದು, ಕಾಣಿಕೆ ಹುಂಡಿಗೂ ಭಕ್ತರು ಶಕ್ತ್ಯಾನುಸಾರ ಕಾಣಿಕೆ ಅರ್ಪಿಸುತ್ತಿದ್ದಾರೆ.

ಸಾಮಾನ್ಯ ಸರತಿ ಸಾಲಿನಲ್ಲಿ ಹೆಚ್ಚುಕಾಲ ನಿಲ್ಲಲು ಆಗಲ್ಲ ಎಂಬುವರಿಗಾಗಿ ತಲಾ ಒಂದು ಸಾವಿರ ರೂ. ಶುಲ್ಕ ವಿಧಿಸಿ ವಿಶೇಷ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಕಳೆದ ಮೂರು ದಿನದಲ್ಲಿ ಅ.14ರಂದು 4.99 ಲಕ್ಷ ರೂ., ಅ.15 ರಂದು 3.31 ಲಕ್ಷ ರೂ.,ಅ.16 ರಂದು 8.35 ಲಕ್ಷ ರೂ. ಸಂಗ್ರಹವಾಗಿದೆ.

ಅದೇ ರೀತಿ ತಲಾ 300 ರೂ. ವಿಶೇಷ ದರ್ಶನದಿಂದ ಅ.14 ರಂದು 4.30 ಲಕ್ಷ ರೂ., ಅ.15 ರಂದು 4.49 ಲಕ್ಷ ರೂ., ಅ.16 ರಂದು 1.20 ಲಕ್ಷ ರೂ. ಸಂಗ್ರಹವಾಗಿದೆ.ಈ ಬಾರಿ ವಿಶೇಷವಾಗಿ ಕೇವಲ ಮೂರು ದಿನದಲ್ಲಿ 30.50 ಲಕ್ಷ ಬೆಲೆಯ ಪ್ರಸಾದ ರೂಪದ ಲಡ್ಡು ಮಾರಾಟವಾಗಿದೆ. ಅ.14 ರಂದು 58 ಸಾವಿರ ರೂ.ಗಳ ಲಡ್ಡು ಮಾರಾಟವಾಗಿದ್ದರೆ, ಅ.15 ರಂದು 1.21ಲಕ್ಷ ಬೆಲೆಯ ಲಡ್ಡು, ಅ.16 ರವರೆಗೆ 30.50 ಲಕ್ಷ ರೂ.ಲಡ್ಡು ಮಾರಾಟವಾಗಿದೆ.

ಒಟ್ಟಾರೆ ಅ.14 ರಂದು 9.88 ಲಕ್ಷ ರೂ., ಅ.15 ರಂದು 9 ಲಕ್ಷ, ಅ.16ರ ವರೆಗೆ 42.78 ಲಕ್ಷ ರೂ. ಸಂಗ್ರಹವಾಗಿದೆ.ಎರಡು ವರ್ಷದ ಕೊರೊನಾ ಹಿನ್ನೆಲೆಯಲ್ಲಿ ಹೆಚ್ಚು ಭಕ್ತರು ವಿಶೇಷವಾಗಿ ಹೊರಗಿನ ಊರಿನ ಭಕ್ತರು ದೇವಿದರ್ಶನಕ್ಕೆ ಬರಲು ಸಾಧ್ಯವಾಗಿ ರಲಿಲ್ಲ.

ಆದರೆ ಈ ಬಾರಿ ಹೆಚ್ಚುದಿನ ಇರುವ ಕಾರಣ ಹೆಚ್ಚು, ಹೆಚ್ಚು ಭಕ್ತರು ಬೆಂಗಳೂರು, ಮೈಸೂರು ಮತ್ತಿತರ ಕಡೆಯಿಂದ ಆಗಮಿಸು ತ್ತಿದ್ದು, ನಿತ್ಯ ಕನಿಷ್ಠ 30 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ.

ರಜೆ ದಿನದಲ್ಲಿಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದು, ಸಮಯ ಹೆಚ್ಚಿಸಬೇಕೆ ಎಂಬ ಕುರಿತು ಒಂದು ದಿನದ ಬಳಿಕ ನಿರ್ಧರಿಸಲಾಗುವುದು’ ಎಂದು ಶಾಸಕ ಪ್ರೀತಂ ಜೆ.ಗೌಡ ತಿಳಿಸಿದ್ದಾರೆ.ಹಾಸನಾಂಬ ದರ್ಶನಕ್ಕೆ ಸಚಿವೆ ಶಶಿಕಲಾ ಜೊಲ್ಲೆ, ಸಾಲು ಮರದ ತಿಮ್ಮಕ್ಕ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಮತ್ತು ಕುಟುಂಬ ವರ್ಗ, ಮಾಜಿ ಶಾಸಕ ಎ.ಮಂಜು, ನ್ಯಾಯಾಧೀಶರುಗಳು, ಮಂಗಳವಾರ ಒಂದೇ ದಿನ ರಾಜ್ಯದ ಒಂಬತ್ತಕ್ಕೂ ಹೆಚ್ಚು ಮಠಾಧೀಶರು ವಿಶೇಷ ದರ್ಶನ ಪಡೆದರು.

ಗಣ್ಯರು, ತಮ್ಮ ಕುಟುಂಬ ಪ್ರತಿವರ್ಷ ಆಗಮಿಸುತ್ತಿದ್ದು ಅದೇ ರೀತಿ ಈ ಬಾರಿಯೂ ಬಂದಿದ್ದೇವೆ ಎಂದರು.

ಶಾಸಕರು, ಸಚಿವರು, ನ್ಯಾಯಾಧೀಶರು, ವಿಧಾನಸಭೆಯ ಹಿರಿಯ ಅಧಿಕಾರಿಗಳು ಹಾಸನಾಂಬ ದರ್ಶನಕ್ಕೆ ಬರುತ್ತಿದ್ದು, ಗಣ್ಯರ ಭೇಟಿ ವೇಳೆ ಸಾಮಾನ್ಯ ಭಕ್ತರ ದರ್ಶನಕ್ಕೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಿದ್ದ ಕಾರಣ ಗಲಾಟೆ, ನೂಕು ನುಗ್ಗಲಿಗೆ ಆಸ್ಪದವಿಲ್ಲದಂತೆ ಎಷ್ಟೇ ಮುನ್ನೆಚ್ಚರಿಕೆ ವಹಿಸಿದ್ದರೂ, ಸೋಮವಾರ ಸಂಜೆಯಿಂದ ಮಂಗಳವಾರವೂ ನಾಡಿನೆಲ್ಲೆಡೆಯಿಂದ ಭಕ್ತರು ಪ್ರವಾಹದಂತೆ ಬಂದು ನಾಲ್ಕರಿಂದ ಐದು ಗಂಟೆ ಕಾಲ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.

ಗಣ್ಯರು ತಂಡೋಪ ತಂಡವಾಗಿ ಆಗಮಿಸಿದ್ದನ್ನು ಕಂಡ ಸಾಮಾನ್ಯ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದು ಕಂಡುಬಂತು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button