ರಾಜ್ಯ

ಕೇಂದ್ರದ ನೂತನ GST ನೀತಿ: ಈ ಎಲ್ಲಾ ವಸ್ತುಗಳು ಇನ್ಮುಂದೆ ದುಬಾರಿ!

ಕೇಂದ್ರ ಸರ್ಕಾರ ನೂತನ ಜಿಎಸ್‌ಟಿ ನೀತಿ ಇಂದಿನಿಂದ ಅಧಿಕೃತವಾಗಿ ಜಾರಿಗೊಳ್ಳಲಿದೆ. ಈ ನೀತಿಯು ಸಾರ್ವಜನಿಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ದಿನಬಳಕೆಯ ಹಾಗೂ ಆಹಾರ ವಸ್ತುಗಳ ಮೇಲೆ ಭಾರೀ ಪರಿಣಾಮ ಬೀರಿದೆ.

ಜಿಎಸ್‌ಟಿ ಕೌನ್ಸಿಲ್‌ ಅದಾಗಲೇ ಹೊಸ ದರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಜನರಿಗೆ ಗಾಯದ ಮೇಲೆ ಬರೆ ಬೀಳುವುದು ಗ್ಯಾರೆಂಟಿಯಾಗಿದೆ.

ಯಾವುದೆಲ್ಲಾ ದುಬಾರಿ..?* ಪ್ಯಾಕ್ ಮಾಡಿದ ಆಹಾರ ವಸ್ತು (ಮೀನು, ಮಾಂಸ, ಒಣಗಿಸಿದ ತರಕಾರಿ, ಜೇನುತುಪ್ಪ, ಬೆಲ್ಲ, ತುಪ್ಪ, ಅಕ್ಕಿ, ಗೋಧಿ ಸೇರಿ ಇತರೆ ಧಾನ್ಯಗಳು)* ಎಲ್ ಇಡಿ ಬಲ್ಬ್, ಎಲ್‌ಇಡಿ ಲ್ಯಾಂಪ್, ಸೋಲಾರ್ ವಾಟರ್ ಹೀಟರ್, ಮುದ್ರಣ ಇಂಕ್, * ನಿತ್ಯ 1000 ರೂಗಿಂತ ಕಡಿಮೆ ಇರೋ ಹೋಟೆಲ್ ರೂಂಗೂ 12% ಜಿಎಸ್ಟಿ ಜಾರಿ* ಚೆಕ್ ಬುಕ್, ಚರ್ಮದ ಉತ್ಪನ್ನ, ಟೈಲರಿಂಗ್, ಜವಳಿ ಸೇವೆ, ಅಂಚೆ ಇಲಾಖೆ ಬುಕ್ ಪೋಸ್ಟ್* ನಿತ್ಯ 5000 ರೂ ಹೆಚ್ಚು ಶುಲ್ಕ ಇರುವ ಆಸ್ಪತ್ರೆಯ ಸ್ಪೆಷಲ್ ವಾರ್ಡ್‌ಗೆ 5% GSt ಜಾರಿ (ಐಸಿಯು ಹೊರತುಪಡಿಸಿ)* ನಿತ್ಯ 5000ಗಿಂತ ಹೆಚ್ಚಿನ ಬಾಡಿಗೆ ವಿಧಿಸುವ ಧಾರ್ಮಿಕ ಕೇಂದ್ರಗಳು, ಮಾಸಿಕ 2500ಕ್ಕೂ ಬಾಡಿಗೆ ವಿಧಿಸುವ ವಾಣಿಜ್ಯ ಕೇಂದ್ರಗಳಿಗೂ ಜಿಎಸ್‌ಟಿ ಜಾರಿ* ಬ್ಲಡ್ ಬ್ಯಾಂಕ್, ವಸತಿ ಉದ್ದೇಶಕ್ಕಾಗಿ ಉದ್ಯಮ ಸಂಸ್ಥೆಗಳು ನೀಡಿದ್ದ ವಸತಿ ಕಟ್ಟಡಗಳಿಗೆ ತೆರಿಗೆ ವಿನಾಯಿತಿ ರದ್ದುಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನ ಸಾಮಾನ್ಯರಿಗೆ ಈ ನೀತಿಯು ನುಂಗಲಾರದ ಬಿಸಿ ತುಪ್ಪವಾಗಲಿದೆ.

ಇವಷ್ಟೇ ಅಲ್ಲದೆ, ಹಾಲು ಉತ್ಪನ್ನಗಳ ಮೇಲೂ ಜಿಎಸ್‌ಟಿ ಜಾರಿಯಾಗಲಿದೆ. ಮೊಸರು, ಮಜ್ಜಿಗೆ ಮತ್ತು ಲಸ್ಸಿ ಮೇಲೆ ಶೇ 5 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ.ಶೇ 5ರಷ್ಟು ಜಿಎಸ್‌ಟಿ ವಿಧಿಸಿದ ಪರಿಣಾಮ ಇಂದಿನಿಂದ ಹೊಸ ದರದಲ್ಲಿ ನಂದಿನಿ ಉತ್ಪನ್ನಗಳ ಮಾರಾಟವಾಗಲಿದೆ.

1 ರಿಂದ 3 ರೂಪಾಯಿವರೆಗೆ ಬೆಲೆ ಏರಿಕೆಯಾಗಲಿದೆ. ಆದರೆ, ಹಾಲಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಮೊಸರು ಲೀಟರ್‌ಗೆ 43 ಇದ್ದದ್ದು ಇನ್ಮುಂದೆ 46 ರೂ. ಆಗಲಿದೆ. ಅದೇ ರೀತಿ ಮಜ್ಜಿಗೆ 200 ಎಂಎಲ್ ಪ್ಯಾಕೆಟ್ ಬೆಲೆ ಮೇಲೆ 1 ರೂ ಏರಿಕೆಯಾಗಿದೆ.

ಜೊತೆಗೆ ಲಸ್ಸಿ ಬೆಲೆಯಲ್ಲಿಯೂ ಸಹ ಒಂದು ರೂ. ಏರಿಕೆ ಕಂಡಿದೆ. ಗ್ರಾಹಕರು ಹೊಸ ದರವನ್ನು ತಿಳಿದುಕೊಳ್ಳಬೇಕೆಂದು ಕೆಎಂಎಫ್‌ ಸೂಚನೆ ನೀಡಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button