ಸಿನಿಮಾ

ಕೆ ಜಿ ಫ್ ಚಾಪ್ಟರ್ 3  ಚಿತ್ರದಲ್ಲಿ ಹೃತಿಕ್ ರೋಷನ್? ಸ್ಪಷ್ಟನೆ ನೀಡಿದ ವಿಜಯ್ ಕಿರಗಂದೂರು

ರಾಕಿಂಗ್ ಸ್ಟಾರ್ ಯಶ್ (rocking star Yash) ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕಾಂಭಿನೇಷನ್​ ನ ಬ್ಲಾಕ್ ಬಸ್ಟರ್ ಕೆಜಿಎಫ್ ಚಾಪ್ಟರ್ 2 ಸದ್ದು ಮಾಡಿದೆ. ಸರಣಿ ದಾಖಲೆಗಳನ್ನು ಮಾಡುವ ಮೂಲಕ, ಈಗಾಗಲೇ ಇದ್ದ ದಾಖಲೆಗಳನ್ನು ಪುಡಿ ಮಾಡಿದ ಸ್ಯಾಂಡಲ್​ವುಡ್​ (Sandalwood) ಹೆಮ್ಮೆಯ ಚಿತ್ರ ಕೆಜಿಎಫ್ ಎನ್ನಬಹುದು. ಇದರ ನಡುವೆ ಎಲ್ಲಡೆ ಕೆಜಿಎಫ್ 3 ಕುರಿತ ಚರ್ಚೆಗಳು ಆರಂಭವಾಗಿದೆ. ಚಿತ್ರದ ನಿರ್ಮಾಪಕ ವಿಜಯ್ ಕಿರಂಗದೂರು ಕೆಜಿಎಫ್ 3 ಕುರಿತು ಹೇಳಿಕೆ ನಂತರ ಕೆಜಿಎಫ್ 3 ಶೂಟಿಂಗ್ ಸಧ್ಯಕ್ಕಿಲ್ಲ ಎನ್ನುವ ಅಂಶ ಬಹಿರಂಗವಾಗಿದೆ. ಆದರೆ ಹೊಸದೊಂದು ಸುದ್ದಿ ಇದೀಗ ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿಯೂ ಹರಿದಾಡುತ್ತಿದ್ದು, ಇದರ ಕುರಿತು ಕಿರಂಗದೂರು ಸ್ಪಷ್ಟನೆ ನೀಡಿದ್ದಾರೆ.

ಹೌದು, ಇಂತದೊಂದು ಸುದ್ದಿ ಸದ್ಯ ಎಲ್ಲಡೆ ಹರಿದಾಡುತ್ತಿದ್ದು, ಕೆಜಿಎಫ್ 3 ಚಿತ್ರದಲ್ಲಿ ಬಾಲಿವುಡ್ ಹ್ಯಾಂಡ್‌ಸಮ್ ಹಂಕ್ ಹೃತಿಕ್ ರೋಷನ್ ಅವರು ಅಭಿನಯಿಸಲಿದ್ದಾರೆ ಎಂಬ ಮಾಹಿತಿಯೊಂದು ಎಲ್ಲಡೆ ವೈರಲ್ ಆಗುತ್ತಿದೆ. ಇದನ್ನು ಕೇಳಿದ ಸಿನಿ ಪ್ರೇಮಿಗಳು ಸಕತ್ ಥ್ರಿಲ್ ಆಗಿದ್ದು, ಚಿತ್ರವು ಇನ್ನೊಂದು ಲೇವಲ್​ ಗೆ ಹೋಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಲ್ಲದೇ ಈಗಾಗಲೇ ನಿರ್ಮಾಪಕ ವಿಜಯ್ ಕಿರಂಗದೂರು ಅವರು ಹೃತಿಕ್ ರೋಷನ್ ಅವರನ್ನು ಭೆಟಿ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಕಿರಂಗದೂರು ಅವರು ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಸ್ಪಷ್ಟನೆ ನೀಡಿದ ವಿಜಯ್ ಕಿರಂಗದೂರು:


ಇನ್ನು, ಕೆಜಿಎಫ್ 3 ಸಿನಿಮಾದಲ್ಲಿ ಬಾಲಿವುಡ್ ಗ್ರೀಕ್ ಗಾಡ್ ಹೃತಿಕ್ ರೋಷನ್ ನಟಿಸಲಿದ್ದಾರೆ ಎಂಬ ಮಾಹಿತಿ ಎಲ್ಲಡೆ ಹರಿದಾಡುತ್ತಿದ್ದಂತೆ ನಿರ್ಮಾಪಪ ವಿಜಯ್ ಕಿರಂಗದೂರು ಅವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ನಾವಿನ್ನೂ ಕೆಜಿಎಫ್ 3 ಕುರಿತ ಸ್ಟಾರ್‌ಕಾಸ್ಟ್ ಬಗ್ಗೆ ಏನೂ ನಿರ್ಧಾರ ತೆಗೆದುಕೊಂಡಿಲ್ಲ.

Related Articles

Leave a Reply

Your email address will not be published. Required fields are marked *

Back to top button