ಕೆಲಸ ಹೋಗುತ್ತೆ ಎಂಬ ಭಯಕ್ಕೆ ಬ್ಯಾಂಕ್ ಉದ್ಯೋಗಿ ಕೊಲೆ!

ಬೆಂಗಳೂರು: ಸೆಕ್ಯುರಿಟಿ ಗಾರ್ಡ್ ನಿಯತ್ತಿಗೆ ವ್ಯಕ್ತಿಯ ಜೀವಕ್ಕೆ ಕಸಿದುಕೊಂಡಿರುವ ಪ್ರಸಂಗ ಬೆಂಗಳೂರಿನ ಎಚ್ಎಎಲ್ ಬಳಿ ನಡೆದಿದೆ. ರಾತ್ರೋರಾತ್ರಿ ಅಪಾರ್ಟ್‌ಮೆಂಟ್‌ಗೆ ನುಗ್ಗಿದ ಬ್ಯಾಂಕ್ ಉದ್ಯೋಗಿ ಅಭಿಷೇಕ್ ಎಂಬಾತ ಹೆಣವಾಗಿದ್ದಾನೆ.
ಕಳ್ಳ ಎಂದು ಭಾವಿಸಿ ಬ್ಯಾಂಕ್ ಉದ್ಯೋಗಿ ಹತ್ಯೆ ಮಾಡಿದ ಸೆಕ್ಯುರಿಟಿ ಗಾರ್ಡ್ ಶ್ಯಾಮನಾಥ್ ರೀ ಹೆಚ್‌ಎಎಲ್ ಪೊಲೀಸರ ಅತಿಥಿಯಾಗಿದ್ದಾನೆ. ಕೆಲಸ ಹೋಗುತ್ತೆ ಎಂಬ ಭಯದಲ್ಲಿ ಬ್ಯಾಂಕ್ ಉದ್ಯೋಗಿಯ ಕೊಲೆ ಮಾಡಿರುವುದಾಗಿ ಸೆಕ್ಯುರಿಟಿ ಗಾರ್ಡ್ ಶ್ಯಾಮನಾಥ್ ರೀ ಒಪ್ಪಿಕೊಂಡಿದ್ದಾನೆ.ಇದೇ ತಿಂಗಳ 5ರಂದು ಮಾರತ್ ಹಳ್ಳಿ ಸಮೀಪದ ವನ್ಶಿ ಸಿಟಾಡೆಲ್ ಅಪಾರ್ಟ್‌ಮೆಂಟ್‌ಗೆ ರಾತ್ರಿ ಎರಡು ಗಂಟೆ ಸುಮಾರಿಗೆ ಅಭಿಷೇಕ್ ಕಾಂಪೌಂಡ್ ಹಾರಿ ಎಂಟ್ರಿ ಕೊಟ್ಟಿದ್ದ.
ಅಪರಿಚಿತ ವ್ಯಕ್ತಿ ಅಪಾರ್ಟ್‌ಮೆಂಟ್ ಒಳಗೆ ಬರುತ್ತಿರುವುದನ್ನ ಗಮನಿಸಿದ ಸೆಕ್ಯುರಿಟಿ ಗಾರ್ಡ್ ಆತನನ್ನ ಪ್ರಶ್ನೆ ಮಾಡಿದ್ದಾನೆ.
ಯಾರು ಸೆಕ್ಯುರಿಟಿ ಎಷ್ಟೆ ಕೇಳಿದರು ಬಾಯ್ಬಿಡದೆ ಮನೆಗಳಿಗೆ ನುಗ್ಗಲು ಅಭಿಷೇಕ್ ಯತ್ನಿಸಿದ್ದಾನೆ.ಕೊನೆಗೆ ಜಿಮ್‌ನಲ್ಲಿದ್ದ ರಾಡ್‌ನಿಂದ ಅಭಿಷೇಕ್ ತಲೆಗೆ ಸೆಕ್ಯೂರಿಟಿ ಹೊಡೆದಿದ್ದ.
ಹೊಡೆತದ ರಭಸಕ್ಕೆ ಅಭಿಷೇಕ್ ತಲೆಗೆ ಗಂಭೀರ ಪೆಟ್ಟು ಬಿದ್ದು ಮೃತಪಟ್ಟಿದ್ದ. ಮೃತ ಅಭಿಷೇಕ್ ಛತ್ತೀಸ್‌ಗಢ ಮೂಲದ ಬ್ಯಾಂಕ್ ಉದ್ಯೋಗಿಯಾಗಿದ್ದಾನೆ.ಈತ ಟ್ರೈನಿಂಗ್ ಸಲುವಾಗಿ ಬೆಂಗಳೂರಿಗೆ ಬಂದಿದ್ದ.
ಇದೇ 5 ರಂದು ರಾತ್ರಿ ಸ್ನೇಹಿತರ ಜೊತೆ ಪಾರ್ಟಿ ಮಾಡಿದ್ದ. ಬಳಿಕ ಒಬ್ಬನೇ ನಡೆದುಕೊಂಡು ಸ್ನೇಹಿತನ ಮನೆಗೆ ಮೊಬೈಲ್‌ನಲ್ಲಿ ಅಡ್ರೆಸ್ ಕೇಳುತ್ತಾ ಹೊರಟಿದ್ದ.
ಇದ್ದಕ್ಕಿದ್ದಂತೆ ಮೊಬೈಲ್ ಸ್ವಿಚ್ ಆಫ್ ಆಗಿ ಗೊಂದಲವಾಗಿ ಈ ಅವಘಡ ಸಂಭವಿಸಿದೆ.
ಘಟನೆ ಸಂಬಂಧ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೊಲೆ ಮಾಡಿದ ಸೆಕ್ಯುರಿಟಿ ಶ್ಯಾಮನಾಥ್ ರೀ ಹಾಗೂ ಆತನ ಸ್ನೇಹಿತನ ಬಂಧನವಾಗಿದೆ.