
ನೋಯ್ಡಾ ಮೂಲದ ಬಿಪಿಒವೊಂದರ ಮಾಜಿ ಉದ್ಯೋಗಿಯೊಬ್ಬರು ತನ್ನನ್ನು ಕೆಲಸದಿಂದ ವಜಾಗೊಳಿಸಿದ ಮ್ಯಾನೇಜರ್‌ಗೆ ಗುಂಡು ಹಾರಿಸಿರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಮ್ಯಾನೇಜರ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯ ಐಸಿಯುನಲ್ಲಿ ಇರಿಸಲಾಗಿದೆ.
ದೆಹಲಿಯ ಅಶೋಕ್ ನಗರದ ನಿವಾಸಿ ಅನೂಪ್ ಸಿಂಗ್ ನೋಯ್ಡಾ ಸೆಕ್ಟರ್ 2 ರಲ್ಲಿ ಬಿಪಿಒ ಎನ್ಎಸ್ಬಿಯಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು.
ಆರು ತಿಂಗಳ ಹಿಂದೆ ಕಂಪನಿಯ ಸರ್ಕಲ್ ಹೆಡ್ ಸದ್ರುಲ್ ಇಸ್ಲಾಂ ಸಿಂಗ್ ಅವರನ್ನು ವಜಾಗೊಳಿಸಿದ್ದರು. ಒಂದು ತಿಂಗಳ ಹಿಂದೆ ಸಿಂಗ್ ಕೆಲಸ ಕೇಳಿ ಇಸ್ಲಾಂ ಅವರನ್ನು ಸಂಪರ್ಕಿಸಿದ್ದರು ಆದರೆ ಅವರ ಮನವಿ ತಿರಸ್ಕರಿಸಲಾಗಿತ್ತು.
ಇದರಿಂದ ಆಕ್ರೋಶಗೊಂಡಿದ್ದ ಅನೂಪ್ ಇಸ್ಲಾಂ ಕಚೇರಿಗೆ ಪ್ರವೇಶಿಸಿದ್ದ, ಇಬ್ಬರ ನಡುವೆ ವಾಗ್ವಾದ ನಡೆದು ಅನೂಪ್ ಬಂದೂಕು ಹೊರತೆಗೆದು ಇಸ್ಲಾಂ ಮೇಲೆ ಗುಂಡು ಹಾರಿಸಿದ್ದಾನೆ.
ಇಸ್ಲಾಂ ಎದೆಗೆ ತೀವ್ರ ಗಾಯಗಳಾಗಿದ್ದು, ಕೈಲಾಶ್ ಆಸ್ಪತ್ರೆಗೆ ದಾಖಲಿಸಿದ್ದು ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಪತ್ತೆಯಾಗಿರುವಆರೋಪಿ ಅನೂಪ್ ಗಾಗಿ ಪೊಲೀಸ್ ತಂಡಗಳು ಹುಡುಕಾಟ ನಡೆಸುತ್ತಿವೆ.