Life Styleಆರೋಗ್ಯ

ಕೆಲವರಲ್ಲಿ ಪದೇ ಪದೇ ಮೂಳೆ ಮುರಿತವಾಗುವುದು ಇದೇ ಕಾರಣಕ್ಕೆ ಎನ್ನುತ್ತಾರೆ ವೈದ್ಯರು

ಆಸ್ಟಿಯೊಪೊರೋಸಿಸ್ ಅಥವಾ ಅಸ್ಥಿ ರಂಧ್ರತೆ ಎನ್ನುವುದು ಮೂಳೆ ಮುರಿತದ ಕಾಯಿಲೆಯಾಗಿದೆ. ಅಸ್ಥಿರಂಧ್ರತೆ ಒಂದೇ ಸಲಕ್ಕೆ ಕಾಣಿಸಿಕೊಳ್ಳುವ ಸಮಸ್ಯೆಯಲ್ಲ. ದೀರ್ಘಕಾಲದ ಸಂಧಿವಾತದ ಸಮಸ್ಯೆಯಿಂದ ಈ ಅಸ್ಥಿ ರಂಧ್ರತೆ ಕಾಣಿಸಿಕೊಳ್ಳುತ್ತದೆ.

ಮೂಳೆ ನಷ್ಟ ಮತ್ತು ಮೂಳೆ ಬೆಳವಣಿಗೆಯು ಯಾವುದೇ ವ್ಯಕ್ತಿಯ ಜೀವನ ಚಕ್ರದ ಭಾಗವಾಗಿದೆ, ಆದರೆ ಮೂಳೆಯ ಬೆಳವಣಿಗೆಗಿಂತ ಮೂಳೆಯ ನಷ್ಟದ ಪ್ರಮಾಣವು ವೇಗವಾಗಿದ್ದಾಗ ಆಸ್ಟಿಯೊಪೊರೋಸಿಸ್ ಸಮಸ್ಯೆ ಉಂಟಾಗುತ್ತದೆ. ಈ ರೀತಿ ಮೂಳೆ ರಂಧ್ರತೆ ಉಂಟಾಗುವುದಕ್ಕೆ ಅನೇಕ ಅಂಶಗಳು ಕಾರಣವಾಗುತ್ತವೆ.

ಹಾಗಾದರೆ ಈ ಅಸ್ಥಿ ರಂಧ್ರತೆ ಕಾಣಿಸಿಕೊಳ್ಳುಲು ಕಾರಣಗಳೇನು ಎನ್ನವ ಬಗ್ಗೆ ಡಾ. ಅತುಲ್‌ ಮಿಶ್ರಾ ಮಾಹಿತಿ ನೀಡಿದ್ದಾರೆ ಇಲ್ಲಿದೆ ನೋಡಿ.

​ಅಸ್ಥಿ ರಂಧ್ರತೆ ಮೂಳೆ ಮುರಿತವುಂಟಾಗುವಾಗ ನೋವು, ಅಂಗವೈಕಲ್ಯ ಉಂಟಾಗಬಹುದು. ಇದು ದೇಹದ ಯಾವುದೇ ಮೂಳೆಯ ಮೇಲೆ ಪರಿಣಾಮ ಬೀರಬಹುದು. ಆದರೆ ಸೊಂಟ ಮತ್ತು ಬೆನ್ನುಮೂಳೆಯ ಮೂಳೆಗಳು ಸಾಮಾನ್ಯವಾಗಿ ಅಸ್ಥಿರಂಧ್ರತೆಗೆ ಒಳಗಾಗುತ್ತವೆ.

ಇದರ ಜೊತೆಗೆ, ಆಸ್ಟಿಯೊಪೊರೋಸಿಸ್ ಕೆಲವು ರೋಗಿಗಳಿಗೆ ಬಾಗಿದ ಬೆನ್ನು, ಕಾಲು ಕುಂಟಾಗುವುದರಿಂದ ಎತ್ತರವನ್ನು ಕಳೆದುಕೊಳ್ಳಲು ಕಾರಣವಾಗುತ್ತದೆ, ಇದರಿಂದ ನಡೆದಾಡಲು ಕಷ್ವವಾಗಬಹುದು ಅಲ್ಲದೆ ಖಿನ್ನತೆಗೆ ದೂಡುವ ಅಪಾಯವೂ ಇರುತ್ತದೆ.

ವಯಸ್ಸು : ಪ್ರತಿಯೊಬ್ಬರಲ್ಲಿ ವಯಸ್ಸಾದಂತೆ ಮೂಳೆಗಳು ಬಲವನ್ನು ಕಳೆದುಕೊಳ್ಳುತ್ತವೆ. 35 ವರ್ಷಗಳ ನಂತರ, ಹಳೆಯ ಮೂಳೆಯ ನಷ್ಟವನ್ನು ತಡೆಯಲು ದೇಹವು ಹೊಸ ಮೂಳೆಯನ್ನು ನಿರ್ಮಿಸುತ್ತದೆ. ಸಾಮಾನ್ಯವಾಗಿ, ವಯಸ್ಸಾದಂತೆ ಒಟ್ಟು ಮೂಳೆ ದ್ರವ್ಯರಾಶಿಯನ್ನು ಕಡಿಮೆ ಮಾಡುತ್ತದೆ ಇದು ಅಸ್ಥಿರಂಧ್ರತೆಯ ಅಪಾಯವನ್ನು ಹೆಚ್ಚಿಸುತ್ತದೆ.

ಅನುವಂಶೀಯತೆ: ಸಣ್ಣ, ತೆಳ್ಳಗಿನ ದೇಹ ರಚನೆ, ತೆಳ್ಳನೆಯ ಚರ್ಮ ಕೆಲವು ಜನಾಂಗೀಯಗಳಲ್ಲಿ ಆಸ್ಟಿಯೊಪೊರೋಸಿಸ್ ಅಪಾಯ ಹೆಚ್ಚಾಗಿರುತ್ತದೆ. ಕೆಲವರಲ್ಲಿ ಅಸ್ಥಿ ರಂಧ್ರತೆ ಕಾಣಿಸಿಕೊಳ್ಳಲು ಈ ಅನುವಂಶೀಯತೆ ಕೂಡ ಕಾರಣವಾಗುತ್ತದೆ.

​ಆಹಾರ ಮತ್ತು ಜೀವನಶೈಲಿ : ಕಡಿಮೆ ಕ್ಯಾಲ್ಸಿಯಂ ಆಹಾರ, ಕಡಿಮೆ ದೇಹದ ತೂಕ ಮತ್ತು ಜೀವನಶೈಲಿಯಲ್ಲಿ ಅಸಮರ್ಪಕತೆ ಸೇರಿದಂತೆ ಕಳಪೆ ಪೋಷಣೆಯು ಆಸ್ಟಿಯೊಪೊರೋಸಿಸ್‌ಗೆ ಸಂಬಂಧಿಸಿದೆ, ಹಾಗೆಯೇ ಧೂಮಪಾನ ಮತ್ತು ಅತಿಯಾದ ಮದ್ಯಪಾನದಿಂದ ಕೂಡ ಮೂಳೆ ಮುರಿತ ಉಂಟಾಗುತ್ತದೆ.ಹೀಗಾಗಿಯೇ ದೇಹವನ್ನು ಸದೃಢವಾಗಿರಿಸಿಕೊಳ್ಳಲು ಆಹಾರ ಸೇವನೆ ಮುಖ್ಯ ಎನ್ನುವುದು.

ಔಷಧಿಗಳು : ಆಸ್ಟಿಯೊಪೊರೋಸಿಸ್ ಅಪಾಯ ಹೆಚ್ಚಿಸಲು ಕೆಲವು ರೋಗಗಳು ಮತ್ತು ಔಷಧಗಳೂ ಕೂಡ ಕಾರಣವಾಗುತ್ತವೆ. ಸ್ಟೀರಾಯ್ಡ್ಗಳು ಸೇರಿದಂತೆ ಕೆಲವು ಔಷಧಿಗಳ ಬಳಕೆ ಮತ್ತು ಕೆಲವು ಥೈರಾಯ್ಡ್ ಸಮಸ್ಯೆಗಳು ಸೇರಿದಂತೆ ಇತರ ಕಾಯಿಲೆಗಳು ಅಸ್ಥಿ ರಂಧ್ರತೆಯ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ವೈದ್ಯರು.

​ಅಸ್ಥಿರಂಧ್ರತೆಯ ಅಪಾಯ ಕಡಿಮೆ ಮಾಡಲು ವೈದ್ಯರ ಸಲಹೆ…

ಸಮತೋಲಿತ ಆಹಾರ ಪದ್ದತಿ. ನಮ್ಮ ಮೂಳೆಗಳ ಆರೋಗ್ಯವಾಗಿ ಬಲವಾಗಿ ಇರಲು ಆಹಾರಶೈಲಿಯು ಮುಖ್ಯವಾಗಿರುತ್ತದೆ. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ, ಕ್ಯಾಲ್ಸಿಯಂ ಆಹಾರ ಅಗತ್ಯವಾಗಿರುತ್ತದೆ.

ನಿಯಮಿತ ವ್ಯಾಯಾಮ ಒಳ್ಳೆಯದು. ವ್ಯಾಯಾಮ ಮಾಡುವಾಗ ನಿಮ್ಮ ಮೂಳೆಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತವೆ. ಇದರಿಂದ ಮೂಳೆಗಳು ಸದೃಢಗೊಳ್ಳುತ್ತವೆ. ಹೀಗಾಗಿ ಪ್ರತಿನಿತ್ಯ ವ್ಯಾಯಾಮದ ಅಭ್ಯಾಸವಿರಲಿ ಎನ್ನುತ್ತಾರೆ ವೈದ್ಯರು.

ಆದಷ್ಟು ಜೋಪಾನವಾಗಿ ನಡೆದಾಡಿ. ಅದರಲ್ಲೂ ವಯಸ್ಸಾದಂತೆ ಮೂಳೆಗಳು ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಹೀಗಾಗಿ ಎಡವಿ ಬೀಳದಂತೆ ನೋಡಿಕೊಳ್ಳಿ. ಇದರಿಂದ ಮೂಳೆಮುರಿತವನ್ನು ತಡೆಯಬಹುದಾಗಿದೆ.ಮೂಳೆಗಳ ಬಲವನ್ನು ಆಗಾಗ ಪರೀಕ್ಷಿಸುತ್ತಿರಿ. ವೈದ್ಯರ ಬಳಿ ತೆರಳಿ ಮೂಳೆಗಳ ಸದೃಢತೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಿ. ಇದಕ್ಕೆ ನೀವು DXA or DEXA ಎನ್ನುವ ಪರೀಕ್ಷೆಯನ್ನು ಮಾಡಿಸಬಹುದಾಗಿದೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button