ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ : ಬಂಧಿತರ ಸಂಖ್ಯೆ 12ಕ್ಕೆ ಏರಿಕೆ

ಕೆಪಿಟಿಸಿಎಲ್ ಕಿರಿಯ ಸಹಾಯಕರ ಹುದ್ದೆಗೆ ನಡೆದ ಪರೀಕ್ಷೆಗೆ ಪತ್ರಿಕೆ ಲೀಕ್ ಮಾಡಿದ ಮೂಲಸ್ಥಾನ ಗದಗ ಮೂಲದ ಮುನ್ಸಿಪಲ್ ಕಾಲೇಜು ಉಪಪ್ರಾಂಶುಪಾಲ ಮಾರುತಿ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದು, ಸುಮಾರು 3ರಿಂದ 8 ಲಕ್ಷದವರೆಗೂ ಡೀಲ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಮಾರುತಿ ಜೊತೆ ಮತ್ತೊಬ್ಬ ಕಿಂಗ್ ಪಿನ್ ಸಂಜುಬಂಡಾರಿ ಈ ದಂಧೆ ಪ್ರಮುಖ ಆರೋಪಿ ಎಂದು ತಿಳಿಸಿದ್ದಾರೆ. ಅಭ್ಯರ್ಥಿಗಳನ್ನು ಮೊದಲೇ ಸಂಪರ್ಕಿಸಿ ಅವರನ್ನು ಪರೀಕ್ಷೆಯಲ್ಲಿ ಪಾಸ್ ಮಾಡಲು ಡೀಲ್ ಕುದುರಿಸಿ ಕೋಟ್ಯಾಂತರ ರೂ.
ಪಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಕಳೆದ ವರ್ಷ ನಡೆದಿದ್ದ ಪೊಲೀಸ್ ಕಾನ್ಸ್‍ಟೇಬಲ್ ಪರೀಕ್ಷೆ ವೇಳೆಯಲ್ಲೂ, ಪ್ರಶ್ನೆ ಪತ್ರಿಕೆ ಬಹಿರಂಗ ಪ್ರಕರಣದಲ್ಲಿ ಇದೇ ಸಂಜು ಬಂಡಾರಿಯನ್ನು ಪೊಲೀಸರು ಬಂಧಿಸಿದ್ದರು.
ಜಾಮೀನು ಮೇಲೆ ಹೊರ ಬಂದಿದ್ದ ಈತ ಕೆಪಿಟಿಸಿಎಲ್ ಪರೀಕ್ಷೆ ಈತ ಅಕ್ರಮ ದಂಧೆಯಲ್ಲಿ ಭಾಗಿದ್ದಾನೆ. ಈತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ.ಈಗಾಗಲೇ ಬಂಧಿಯಾಗಿರುವ ಉಪಪ್ರಾಂಶುಪಾಲ ಮಾರುತಿ ಹಾಗೂ ಆತನ ಪುತ್ರ ರೂಮ್ ಸುಪ್ರವೈಸರ್ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಪ್ರಶ್ನೆ ಪತ್ರಿಕೆಯ ಫೋಟೋ ತೆಗೆದು ಅದು ಸ್ಕ್ಯಾನ್ ಮಾಡಿ ಕಿಂಗ್‍ಪಿನ್ ಸಂಜುಬಂಡಾರಿಗೆ ಮೊಬೈಲ್ ಕಳಿಸಲಾಗಿತ್ತು ಎಂದು ತನಿಖೆ ವೇಳೆ ಗೊತ್ತಾಗಿದೆ.
ಈಗಾಗಲೇ 12 ಜನರನ್ನು ಬಂಧಿಸಲಾಗಿದ್ದು, ಇನ್ನು ಹಲವರ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಗೋಕಾಕ್ ಡಿವೈಎಸ್‍ಪಿ ಮನೋಜ್ ಕುಮಾರ್ ನಾಯಕ್ ತಿಳಿಸಿದ್ದಾರೆ.ಬೆಳಗಾವಿ, ಗದಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ಸ್ಮಾರ್ಟ್ ವ್ಯಾಚ್, ಬ್ಲೂಟೂತ್‍ಗಳನ್ನು ಬಳಸಿ ಕೆಲವೆಡೆ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ಇಂತಹ ಅಕ್ರಮಗಳಲ್ಲಿ ಭಾಗಿಯಾಗಿದ್ದ ಸಿದ್ದಪ್ಪ ಮದೀಹಳ್ಳಿ ಎಂಬುವವನನ್ನು ಎಂಬ ಪರೀಕ್ಷಾರ್ಥಿಗಳನ್ನು ಬಂಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈತ ವಿಚಾರಣೆ ವೇಳೆ ಬಾಯ್ಬಿಟ್ಟಿರುವ ಮಾಹಿತಿ ಅನ್ವಯ ತನಿಖೆ ಮುಂದುವರೆದಿದ್ದು, ಇನ್ನು ಪ್ರಮುಖ ಮೂವರಿಗಾಗಿ ಶೋಧ ಕಾರ್ಯ ನಡೆದಿದೆ. ಎಸ್‍ಪಿ ಸಂಜುಪಾಟೀಲ್ ಅವರು ಪ್ರಕರಣದ ಬಗ್ಗೆ ಇಂಚಿಂಚು ಜಾಲಾಡುತ್ತಿದ್ದು, ಒಟ್ಟು ಮೂರು ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಅದರಲ್ಲಿ ಯಾರ್ಯಾರು ನಕಲು ಮಾಡುತ್ತಿದ್ದಾರೆ ಎಂಬುದು ಪತ್ತೆ ಹಚ್ಚುವುದು ದೊಡ್ಡ ಸವಾಲಾಗಿದೆ.