
ಇಥಿಯೋಪಿಯಾದ ಅಡಿಸ್ ಅಬಾಬಾ ಸಿಟಿಯಿಂದ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ತೆಲಂಗಾಣ ಮೂಲದ 45 ವರ್ಷದ ವ್ಯಕ್ತಿಯನ್ನು ಮಾದಕ ವಸ್ತು ಕಳ್ಳಸಾಗಾಣಿಕೆ ಜಾಲ ಭೇದಿಸುವ ಪ್ರಯತ್ನದಲ್ಲಿದ್ದ ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದು ತಪಾಸಣೆ ನಡೆಸಿದ್ದಾರೆ. ಆತನ ಬ್ಯಾಗ್‌ನಲ್ಲಿ 14 ಕೆಜಿ ಹೆರಾಯಿನ್ ದೊರೆತಿದೆ.
ಆರೋಪಿ ದೆಹಲಿ ಮೂಲದ ಮತ್ತೊಬ್ಬ ವ್ಯಕ್ತಿಗೆ ಈ ಹೆರಾಯಿನ್ ಹಸ್ತಾಂತರಿಸುವ ಕಾರ್ಯದಲ್ಲಿದ್ದ. ಈತನಿಗೆ ಪ್ರಯಾಣದ ಟಿಕೆಟ್ ಜತೆ ಹಣ ಮತ್ತು ಸ್ಟಾರ್ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡುವ ವ್ಯವಸ್ಥೆ ಸಹ ಮಾಡಲಾಗಿತ್ತು ಎನ್ನಲಾಗಿದೆ.
ಇದೇ ಜುಲೈ 15ರಿಂದ ಡಿಆರ್‌ಐ ಅಧಿಕಾರಿಗಳು ಪತ್ತೆ ಮಾಡಿರುವ 8ನೇ ಪ್ರಕರಣ ಇದಾಗಿದೆ. ಒಟ್ಟಾರೆ ಇದುವರೆಗೆ 250 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ವಶಕ್ಕೆ ಪಡೆಯಲಾಗಿದೆ.
ಡಿವೈಎಸ್‌ಪಿ ಮನೋಜ್ ಕುಮಾರ್ ಮಾರ್ಗದರ್ಶನದಲ್ಲಿ ಸಿಪಿಐ ಗೋಪಾಲ ರಾಠೋಡ ನೇತೃತ್ವದಲ್ಲಿ ಪಿಎಸ್‌ಐ ಎಂ.ಡಿ. ಘೋರಿ, ಸಿಬ್ಬಂದಿಗಳಾದ ಬಿ.ವಿ. ನೇರಲೆ, ಸುರೇಶ ಈರಗಾರ, ಮಲ್ಲಪ್ಪ ಗಿಡ್ಡಗೋಳ, ಸಚಿನ್, ವಿಠ್ಠಲ ನಾಯಕ, ರಮೇಶ ಮುರನಾಳೆ, ಪ್ರವೀಣ ಹೆಬ್ಬಾರ ಕಾರ್ಯಾಚರಣೆಯಲ್ಲಿದ್ದರು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.