ರಾಜ್ಯ

ಕೃಷಿ ವಿ.ವಿ. ಘಟಿಕೋತ್ಸವ ಟೈಲರ್ ಮಗಳಿಗೆ ೧೬ ಚಿನ್ನದ ಪದಕ : ಮಾದರಿ ರೈತನಿಗೆ ಗೌರವ ಡಾಕ್ಟರೇಟ್

ತುಮಕೂರು ಮೂಲದ ಟೈಲರ್ ಮಗಳು ಚಂದನ ಎಂಬ ವಿದ್ಯಾರ್ಥಿನಿ ಕೃಷಿ ವಿಭಾಗದಲ್ಲಿ ಬಿಎಸ್ಸಿ ಪದವಿ ಪಡೆದು ೧೧ ಚಿನ್ನದ ಪದಕ ಹಾಗೂ ೫ ಚಿನ್ನದ ಪದಕ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ.

ಇನ್ನು ಮಾದರಿ ರೈತ ಎನ್.ಸಿ.ಪಟೇಲ್ ಅವರಿಗೆ ಪ್ರಥಮಬಾರಿಗೆ ಬೆಂ.ಕೃ.ವಿ.ವಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿದ್ದು ಈ ಬಾರಿ ಘಟಿಕೋತ್ಸವಕ್ಕೆ ಹೆಚ್ಚಿನ ಮೆರಗು ಮೂಡಿಸಿತು.ನಗರದ ಜಿಕೆವಿಕೆಯ ಬಾಬುರಾಜೇಂದ್ರಪ್ರಸಾದ್ ಸಭಾಂಗಣದಲ್ಲಿ ಆಯೋಜಿಸಿದ್ದ ಕೃಷಿ ವಿಶ್ವವಿದ್ಯಾಲಯದ ೫೬ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪದವಿ ಹಾಗೂ ಚಿನ್ನದ ಪದಕ ಪ್ರದಾನ ಮಾಡಿದರು.

ಈ ವೇಳೆ ಕೃಷಿ ವಿಜ್ಞಾನ ಪ್ರಗತಿ ಟ್ರಸ್ಟ್ ಅಧ್ಯಕ್ಷ ಹಾಗೂ ಕೃಷಿ ಅನುಸಂದಾನ ಪರಿಷತ್‌ನ ಮಹಾ ನಿರ್ದೇಶಕ ಡಾ.ಆರ್.ಎಸ್ ಪರೋಡ ಮಾತನಾಡಿ, ದೇಶಕ್ಕೆಸ್ವಾತಂತ್ರ ದೊರೆತ ಸಂದರ್ಭದಲ್ಲಿ ಆಹಾರಕ್ಕೆ ವಿದೇಶಗಳ ಮೇಲೆ ಅವಲಂಬಿತರಾಗಿ ಆಮದು ಮಾಡಿಕೊಳ್ಳುತ್ತಿತ್ತು. ಈಗ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಭಿತರಾಗಿದ್ದೇವೆ. ಇದಕ್ಕೆ ರೈತರು ಕಾರಣ ಹೊಸ ತಂತ್ರಜ್ಞಾನಗಳನ್ನು ತಲುಪಿಸುವ ಕೆಲಸ ಮಾಡಬೇಕಿದೆ. ಇದರಿಂದ ಆಹಾರ ಉತ್ಪಾದನೆ ದ್ವಿಗುಣಗೊಂಡು ರಫ್ತು ಮಾಡಬಹುದು.

ಇದರತ್ತ ಕೃಷಿವಿವಿಗಳು ಗಮನ ಹರಿಸಬೇಕಿದೆ ಎಂದರು.ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಕಳೆದ ವರ್ಷ ೧೧೦ಮೆಟ್ರಿಲ್‌ಟನ್ ಉತ್ಪಾದನೆ ಗುರಿ ಇತ್ತು. ಅದನ್ನು೧೧೪ ಮೆಟ್ರಿಕ್ ಟನ್ ಗುರಿ ಸಾಧಿಸಿದ್ದೇವೆ. ವಿದ್ಯಾನಿಧಿ ಯೋಜನೆ ಮೂಲಕ ಕಳೆದ ಸಾಲಿನಲ್ಲಿ ೧೦ಲಕ್ಷ ವಿದ್ಯಾರ್ಥಿಗಳಿಗೆ ೪೬೯ಕೋಟಿ.ರೂ ಮೊತ್ತದ ಸ್ಕಾಲರ್‌ಶಿಪ್ ನೀಡಿದ್ದೇವೆ.

ಕೃಷಿ ಕಾರ್ಮಿಕರ ಮಕ್ಕಳಿಗೂ ಈ ಯೋಜನೆ ತರಲಾಗುವುದು ಎಂದರು.ಪದವಿ ಪಡೆದ ವಿದ್ಯಾರ್ಥಿಗಳು ಉದ್ಯೋಗಕ್ಕೆ ಸೀಮಿತರಾಗದೆ, ಅಗ್ರಿಕ್ಲಿನಿಕ್ ಸ್ಥಾಪಿಸಿ ರೈತರಲ್ಲಿ ಹೆಚ್ಚು ಜಾಗೃತಿ ಮೂಡಿಸಿ ಉದ್ಯೋಗದಾತರಾಗಬೇಕು ಎಂದು ಹೇಳಿದರು.ಯಾರು ಯಾರಿಗೆ ಎಷ್ಟು ಚಿನ್ನದ ಪದಕ:ಬಿಎಸ್ಸಿ ಪದವಿ ವಿಭಾಗದಿಂದ ರೂಪ ೮ಚಿನ್ನದ ಪದಕ, ಲಾವಣ್ಯ ೬ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾರೆ.

ಡಾಕ್ಟರ್ ಆಫ್ ಫಿಲಾಸೋಫಿ ವಿಭಾಗದಿಂದ ಡಿ.ವಿ.ಕುಸುಮಲತಾ ೩ಚಿನ್ನದ ಪದಕ,೧ಪ್ರಮಾಣಪತ್ರ, ಗಣೇಶ್ ಪ್ರಸಾದ ೧ಚಿನ್ನದ ಪದಕ, ೨ಚಿನ್ನದ ಪದಕ ಪ್ರಮಾಣಪತ್ರ,ಭವ್ಯ ಎನ್.೧ಚಿನ್ನದಪದಕ, ೨ದಾನಿಗಳ ಚಿನ್ನದ ಪದಕ, ಕೊಮ್ಮಿರೆಡ್ಡಿ ಪೂಜಿತ ೧ಚಿನ್ನದ ಪದಕ, ೧ಚಿನ್ನದಪದಕ, ೨ದಾನಿಗಳ ಚಿನ್ನದ ಪದಕ, ಮಾಸ್ಟರ್ ಪದವಿ ವಿಭಾಗದಲ್ಲಿ ಪ್ರವಳಿಕ ಕೆ.ಎಂ. ೫ಚಿನ್ನದ ಪದಕ, ೨ಚಿನ್ನದ ಪದಕ ಪ್ರಮಾಣ ಪತ್ರ, ವಿನುತ ಜಿ. ೫ಚಿನ್ನದ ಪದಕ, ೨ಚಿನ್ನದ ಪದಕ ಪ್ರಮಾಣ ಪತ್ರ, ಬೀರ ಭವ್ಯ ೩ಚಿನ್ನದ ಪದಕ, ೧ಚಿನ್ನದ ಪದಕ ಪ್ರಮಾಣಪತ್ರ, ಅಪೂರ್ವ ರಾಜ್ ೩ಚಿನ್ನದ ಪದಕ ಹಾಗೂ ೧ಪ್ರಮಾಣಪತ್ರ ಪಡೆದುಕೊಂಡಿದ್ದಾರೆ.

ಬಿಎಸ್ಸಿ (ಹಾನರ್ಸ್)ಕೃಷಿ ಮಾರಾಟ ಮತ್ತು ಸಹಕಾರ ವಿಭಾಗದಿಂದ ಬಿಂದು ರಾಜಶೇಖರ ೬ಚಿನ್ನದ ಪದಕ, ಅಶ್ವಿತ ಎ.ಎಸ್.ಗೌಡ, ೨ಚಿನ್ನದಪದಕ ಬಿಟೆಕ್ ಇಂಜಿನಿಯರಿಂಗ್ ವಿಭಾಗದಿಂದ ಚೇತನ್.ವಿ.ವಿ.೩ಚಿನ್ನದ ಪದಕ, ಜೈವಿಕ ತಂತ್ರಜ್ಞಾನದಿಂದ ಉಷಾ.ಎಂ.ಎಸ್೨ಚಿನ್ನದ ಪದಕ,ಆಹಾರ ತಂತ್ರಜ್ಞಾನ ವಿಭಾಗದಿಂದ ಸೌಮ್ಯಾ ೧ಚಿನ್ನದ ಪದಕ, ರೇಷ್ಮೆ ಕೃಷಿಯಿಂದ ೧ಚಿನ್ನದ ಪದಕ ಪಡೆದುಕೊಂಡರು.

ಒಟ್ಟಾರೆಯಾಗಿ ೨೦೨೦-೨೧ನೇ ಸಾಲಿನಲ್ಲಿ ಹೆಣ್ಣುಮಕ್ಕಳು ಮೇಲುಗೈ ೧೧೪೪ ಸ್ನಾತಕ,ಸ್ನಾತಕೋತ್ತರ ಪದವಿ, ಮಾಸ್ಟರ್ ಪದವಿ ವಿಭಾಗಕ್ಕೆ ೫೪ ಚಿನ್ನದ ಪದಕ, ಸ್ನಾತಕ ಪದವಿ ವಿಭಾಗಕ್ಕೆ ೫೪ ಚಿನ್ನದ ಪದಕ ಸೇರಿ ಒಟ್ಟು ೧೩೩ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ಚಿನ್ನದ ಪದಕ, ೨೩ ದಾನಿಗಳ ಚಿನ್ನದ ಪದಕ ಹಾಗೂ ಪ್ರಶಸ್ತಿಪತ್ರ ಪ್ರದಾನ ಮಾಡಲಾಯಿತು.

ಈ ವೇಳೆ ಕೃಷಿ ವಿವಿ ಕುಲಪತಿ ಡಾ.ರಾಜೇಂದ್ರಪ್ರಸಾದ್, ಕುಲಸಚಿವ ಡಾ.ಬಸವೇಗೌಡ, ಶಿಕ್ಷಣ ನಿರ್ದೇಶಕ ಡಾ.ಕೆ.ಸಿ.ನಾರಾಯಣಸ್ವಾಮಿ ಸೇರಿ ಇನ್ನಿತರರು ಉಪಸ್ಥಿತರಿದ್ದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button