ರಾಜ್ಯ

ಕುಸ್ತಿಪಟು ಲಕ್ಷ್ಮೀ ಪಾಟೀಲ್ ಗೆ ಶುಭ ಹಾರೈಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ

ಆಗಸ್ಟ್ 24 ರಿಂದ 27 ರವರೆಗೆ ಹರಿಯಾಣದಲ್ಲಿ ನಡೆಯಲಿರುವ ಫೆಡರೇಷನ್ ಕಪ್ – ಹರಿಯಾಣ ರೋತಕ್ 2022 ರ 54 ಕೆಜಿ ವಿಭಾಗದ ಕುಸ್ತಿ ಪಂದ್ಯಾವಳಿಗಳಲ್ಲಿ ಭಾಗವಹಿಸಲು ತೆರಳುತ್ತಿರುವ ಹಲಗಾ ಬಸ್ತವಾಡ ಗ್ರಾಮದ ಲಕ್ಷ್ಮೀ ಸಂಜಯ ಪಾಟೀಲಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಶುಭ ಹಾರೈಸಿ ಬೀಳ್ಕೊಟ್ಟರು.ಲಕ್ಷ್ಮೀಯ ಸಾಹಸ, ಧೈರ್ಯವನ್ನು ಮೆಚ್ಚಿ ಶಾಸಕಿ ಹೆಬ್ಬಾಳಕರ್ ಶುಭ ಹಾರೈಸಿದರು.

ಗ್ರಾಮೀಣ ಭಾಗದ ಈ ಹುಡುಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ತನ್ನ ಕ್ರೀಡಾ ಸ್ಫೂರ್ತಿಯನ್ನು ಮೆರೆದು, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಬೆಳಗಾವಿ ಜಿಲ್ಲೆಗೆ ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು.

ಲಕ್ಷ್ಮೀ ಪಾಟೀಲ ಕುಟುಂಬದವರು, ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button