
ಅಕೌಂಟೆಂಟ್‍ರೊಬ್ಬರನ್ನು ಮನೆಯಲ್ಲೇ ಇರಿದು ಕೊಲೆ ಮಾಡಿರುವ ಘಟನೆ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಎಂಕೆ ನಗರದ ಶಂಕರ್ ರೆಡ್ಡಿ (35) ಕೊಲೆಯಾಗಿರುವ ಅಕೌಂಟೆಂಡ್.ಖಾಸಗಿ ಕಂಪೆನಿಯೊಂದರಲ್ಲಿ ಅಕೌಂಟೆಂಟ್ ಆಗಿರುವ ಶಂಕರ್ ರೆಡ್ಡಿ ಅವರಿಗೆ ಪತ್ನಿ ಹಾಗೂ 6 ಮತ್ತು 4 ವರ್ಷದ ಇಬ್ಬರು ಮಕ್ಕಳಿದ್ದಾರೆ.ನಿನ್ನೆ ಮಧ್ಯರಾತ್ರಿ 12 ಗಂಟೆ ಸುಮಾರಿನಲ್ಲಿ ಶಂಕರ್‍ರೆಡ್ಡಿ ಅವರನ್ನು ಮನೆಯಲ್ಲೇ ಚಾಕುವಿನಿಂದ ಕುತ್ತಿಗೆ ಇರಿದು ಕೊಲೆ ಮಾಡಲಾಗಿದೆ. ಇವರ ಪತ್ನಿ ಹೇಳಿಕೆ ಪ್ರಕಾರ ರಾತ್ರಿ ಮನೆಗೆ ಯಾರೋ ಒಬ್ಬ ಬಂದು ನನ್ನ ಮೇಲೆ ಹಲ್ಲೆ ಮಾಡಿದ. ನಾನು ಮೂರ್ಛೆ ಹೋದೆ. ಪ್ರಜ್ಞೆ ಬಂದು ನೋಡಿದಾಗ ನನ್ನ ಪತಿ ಕೊಲೆಯಾಗಿರುವುದು ಕಂಡು ಬಂದಿದೆ ಎಂದು ಹೇಳಿದ್ದಾರೆ.
ಯಶವಂತಪುರ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಕೊಲೆ ಮಾಡಿ ಪರಾರಿಯಾಗಿರುವ ವ್ಯಕ್ತಿ ಯಾರು ಎಂಬ ಬಗ್ಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.