ರಾಜ್ಯ

ಕಾಲೇಜುಗಳಲ್ಲಿ ಎನ್.ಸಿ.ಸಿ ಬಲವರ್ಧನೆಗೆ ತ್ವರಿತ ಕ್ರಮ: ಅಶ್ವತ್ಥನಾರಾಯಣ

ಬೆಂಗಳೂರು: ರಾಜ್ಯದ ಪದವಿ ಕಾಲೇಜುಗಳಲ್ಲಿ ಎನ್.ಸಿ.ಸಿ ಬಲವರ್ಧನೆಗೆ ಸರಕಾರ ಬದ್ಧವಾಗಿದೆ. ಇದಕ್ಕೆ ಅಗತ್ಯವಿರುವ ಪ್ರಸ್ತಾವನೆಗಳನ್ನು ಎನ್ ಸಿ ಸಿ ವಿಭಾಗದ ಮುಖ್ಯಸ್ಥರು ಸಲ್ಲಿಸಿದರೆ ತಕ್ಷಣ ಕ್ರಮ ಜರುಗಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಸೂಚಿಸಿದ್ದಾರೆ.

ಗುರುವಾರ ನಡೆದ ರಾಜ್ಯ ಎನ್.ಸಿ.ಸಿ. ಸಲಹಾ ಸಮಿತಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಎನ್.ಸಿ.ಸಿ ಕರ್ನಾಟಕ ಮತ್ತು ಗೋವಾ ವಿಭಾಗದ ಡೆಪ್ಯುಟಿ ಜನರಲ್ ಆರ್.ಎಸ್. ಕನ್ವರ್ ಅವರು ಮಾಹಿತಿಯನ್ನು ಹಂಚಿಕೊಂಡರು.ರಾಜ್ಯದ ಹಲವೆಡೆಗಳಲ್ಲಿ ಪೊಲೀಸ್ ಮೈದಾನಗಳು, ಈಜುಕೊಳಗಳು, ಪರ್ವತ ಶ್ರೇಣಿಗಳು, ಬೆಟ್ಟಗುಡ್ಡಗಳು, ನೌಕಾ ಮತ್ತು ವಾಯು ನೆಲೆಗಳಿವೆ.

ಇವೆಲ್ಲವನ್ನೂ ಎನ್.ಸಿ.ಸಿ. ಚಟುವಟಿಕೆಗಳಿಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಅವರು ನುಡಿದರು.ಎನ್ಇಪಿಯಲ್ಲಿ ಪಠ್ಯೇತರ ಕಲಿಕೆಗೆ ಆದ್ಯತೆ ಇದೆ. ಎನ್.ಸಿ.ಸಿ.ಯನ್ನು ಓಪನ್ ಎಲೆಕ್ಟೀವ್ ಆಗಿ ಆರಿಸಿಕೊಳ್ಳಲು ಅವಕಾಶ ಕೊಡಲಾಗಿದ್ದು, ಇದಕ್ಕೆ 20 ಶ್ರೇಯಾಂಕ ನಿಗದಿ ಪಡಿಸಲಾಗಿದೆ. ಆದ್ದರಿಂದ ಎನ್.ಸಿ.ಸಿ.ಯನ್ನು ಸಮಾಜಮುಖಿಯಾಗಿ ಬೆಳೆಸಬೇಕಾದ ಅಗತ್ಯವಿದೆ.

ಇವರಿಗೆ ಸೂಕ್ತ ತರಬೇತಿ ನೀಡಿದರೆ ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ಕೂಡ ಕರ್ತವ್ಯಕ್ಕೆ ನಿಯೋಜಿಸಬಹುದು ಎಂದು ಅವರು ಹೇಳಿದರು.ಎನ್.ಸಿ.ಸಿ ವಿದ್ಯಾರ್ಥಿಗಳಿಗೆ ಸೈಕ್ಲಿಂಗ್, ಟ್ರೆಕ್ಕಿಂಗ್, ಮ್ಯಾರಥಾನ್, ಕೆರೆಗಳ ಶುದ್ಧೀಕರಣ, ಗಿಡ ನೆಡುವಿಕೆ ತರಹದ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು.

ವಿ.ವಿ.ಗಳು ಇತ್ತ ಗಮನ ಹರಿಸಬೇಕು ಎಂದು ಅವರು ಸೂಚಿಸಿದರು.ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ ಸೇರಿದಂತೆ ರಾಜ್ಯದ ಎಲ್ಲಾ ಸರಕಾರಿ ವಿಶ್ವವಿದ್ಯಾಲಯಗಳ ಕುಲಪತಿಗಳು ಪಾಲ್ಗೊಂಡಿದ್ದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button