
ಮನರಂಜನೆಯ, ವಿಚಿತ್ರ ಮತ್ತು ತಮಾಷೆಯ ವಿಡಿಯೋಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇದು ಬಳಕೆದಾರರ ಗಮನವನ್ನು ಸೆಳೆಯುತ್ತದೆ.
ಬೆಂಗಳೂರಿನ ಕಾಲೇಜೊಂದರಲ್ಲಿ ಇಬ್ಬರು ಹುಡುಗಿಯರ ನಡುವಿನ ಜಗಳದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜೊಂದರ ಕ್ಯಾಂಟೀನ್ ನಲ್ಲಿ ಈ ಘಟನೆ ನಡೆದಿದೆ.
ಮೊದಲಿಗೆ ಇಬ್ಬರ ನಡುವೆ ವಾಗ್ವಾದ ಶುರುವಾಗಿ ಅದು ಜಗಳಕ್ಕೆ ತಿರುಗುತ್ತದೆ. ವಾಗ್ವಾದ ನಡೆದ ಸಮಯದಲ್ಲಿ ಹುಡುಗಿಯರು ಒಬ್ಬರಿಗೊಬ್ಬರು ಕಪಾಳಮೋಕ್ಷ ಮಾಡಿಕೊಳ್ಳುತ್ತಾರೆ. ಪರಸ್ಪರ ತಳ್ಳಾಡಿಕೊಳ್ಳುತ್ತಾರೆ. ಹೀಗೆ ಶುರುವಾದ ಜಗಳ ತಾರಕಕ್ಕೇರುತ್ತದೆ.
ಆದರೆ ಇವರಿಬ್ಬರ ನಡುವೆ ನಡೆದ ಈ ಜಗಳಕ್ಕೆ ಕಾರಣ ಮಾತ್ರ ಸ್ಪಷ್ಟವಾಗಿಲ್ಲ. ಇದೇ ವೇಳೆ ಉಳಿದ ವಿದ್ಯಾರ್ಥಿಗಳು ಜಗಳ ನಿಲ್ಲಿಸುವ ಬದಲು ಕೇಕೆ ಹಾಕಿ ಸಂಭ್ರಮಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇತ್ತೀಚೆಗಷ್ಟೇ ಇದೇ ರೀತಿಯ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತೂಕದ ಯಂತ್ರಕ್ಕಾಗಿ ಇಬ್ಬರು ಮಹಿಳೆಯರು ತೀವ್ರ ಜಗಳವಾಡುತ್ತಿರುವ ದೃಶ್ಯ ವೈರಲ್ ಆಗಿತ್ತು.
ವಿಡಿಯೋದಲ್ಲಿ, ಗುಲಾಬಿ ಬಣ್ಣದ ಬಟ್ಟೆ ಧರಿಸಿದ ಮಹಿಳೆ ತೂಕದ ಯಂತ್ರವನ್ನು ಬಳಸಲು ತನ್ನ ಸರದಿಗಾಗಿ ಕಾಯುತ್ತಿದ್ದಳು. ಅಷ್ಟರಲ್ಲಿ ಹಸಿರು ಬಣ್ಣದ ಟೀ ಶರ್ಟ್ ತೊಟ್ಟ ಮತ್ತೊಬ್ಬ ಮಹಿಳೆ ಓಡಿ ಬಂದಳು.
ಆಗ ಇಬ್ಬರು ಹೆಂಗಸರು ಜಗಳವಾಡುತ್ತಾ ಒಬ್ಬರಿಗೊಬ್ಬರು ಕಪಾಳಮೋಕ್ಷ ಮಾಡಿಕೊಳ್ಳುತ್ತಾರೆ. ಇದೀಗ ಈ ವಿದ್ಯಾರ್ಥಿನಿಯರ ಜಗಳ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.