ಅಪಘಾತ

ಕಾರು ಹತ್ತಿಸಿ ನಾಯಿ ಸಾಯಿಸಿದ್ದ ಚಾಲಕನಿಗಾಗಿ ಪೊಲೀಸರ ಶೋಧ

ಬೆಂಗಳೂರು,ಮೇ 30- ರಸ್ತೆಯಲ್ಲಿ ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿ ಪರಾರಿಯಾಗಿರುವ ಚಾಲಕನಿಗಾಗಿ ತಿಲಕ್‍ನಗರ ಠಾಣೆ ಪೊಲೀಸರು ಶೋಧ ಕೈಗೊಂಡಿದ್ದಾರೆ.

ಜಯನಗರ 9ನೇ ಬ್ಲಾಕ್‍ನಲ್ಲಿ ಮೇ 27ರಂದು ಈ ಘಟನೆ ನಡೆದಿದ್ದು, ಚಾಲಕನ ಬೇಜಾವಬ್ದಾರಿತನ ಚಾಲನೆ ಯಿಂದಾಗಿ ಮೃತಪಟ್ಟಿರುವ ಮೂಕಪ್ರಾಣಿ ನಾಯಿಯ ಅಂತ್ಯಕ್ರಿಯೆಯನ್ನು ಶ್ವಾನ ಪ್ರಿಯರು ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಘಟನೆ ಸಂಬಂಧ ನಾಗರಾಜ್ ಮತ್ತು ಬದ್ರಿಪ್ರಸಾದ್ ಎಂಬುವರು ತಿಲಕ್‍ನಗರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಒಘಟನಾ ಸುತ್ತಮುತ್ತಲಿನ ರಸ್ತೆಗಳ ಸಿಸಿಟಿವಿಗಳನ್ನು ಪೊಲೀಸರು ಪರಿಶೀಲಿಸಿ ಕಾರು ಚಾಲಕನ ಬಂಧನಕ್ಕೆ ಬಲೆ ಬೀಸಿದ್ದಾರೆ.

ಇತ್ತೀಚೆಗೆ ನಗರದಲ್ಲಿ ಲಾರಾ ಎಂಬ ಶ್ವಾನದ ಮೇಲೆ ಕಾರು ಹತ್ತಿಸಿದ ಪ್ರಕರಣ ಮಾಸುವ ಮುನ್ನವೇ ಮತ್ತೊಮ್ಮೆ ಇಂತಹ ಘಟನೆ ನಡೆದಿರುವುದು ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

ವಾಹನ ಚಾಲಕರು ಚಾಲನೆ ವೇಳೆ ರಸ್ತೆಯಲ್ಲಿ ನಾಯಿಗಳು ಮಲಗಿದ್ದರೆ ಜಾಗರೂಕರಾಗಿ ಅವುಗಳ ಪ್ರಾಣ ಮತ್ತು ತಮ್ಮ ಪ್ರಾಣಕ್ಕೆ ಧಕ್ಕೆಯಾಗದಂತೆ ಚಾಲನೆ ಮಾಡಬೇಕಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button