ಕಾಮುಕ ಪ್ರಿಯಕರನಿಗಾಗಿ ಅಪ್ರಾಪ್ತ ಮಗಳನ್ನೇ ಮಂಚಕ್ಕೆ ಕಳಿಸಿದ ಪಾಪಿ ತಾಯಿ:

ಚೆನ್ನೈ: ಕೆಟ್ಟ ಮಕ್ಕಳು ಇರಬಹುದು, ಆದರೆ ಕೆಟ್ಟ ತಾಯಿ ಇರುವುದಿಲ್ಲ ಎನ್ನುವ ನಾಣ್ಣುಡಿ ಇದೆ. ಆದರೆ ಇಲ್ಲೊಂದು ಭಯಾನಕ ಹಾಗೂ ಮಾನವ ಕುಲವೇ ತಲೆತಗ್ಗಿಸುವ ಘಟನೆಯೊಂದು ವರದಿಯಾಗಿದೆ. ಹೆತ್ತಾಕೆಯೇ ತನ್ನ ಮಗಳನ್ನು ಪ್ರಿಯಕರನಿಗೆ ಒಪ್ಪಿಸಿ, ಅತ್ಯಾಚಾರ ಮಾಡಲು ಅವಕಾಶ ಕೊಟ್ಟಿದ್ದಾಳೆ!
ಇದೀಗ ಆ ಬಾಲಕಿ ತಾಯಿಯ ಪ್ರಿಯಕರನಿಂದ ಗರ್ಭ ಧರಿಸಿ ಮಗು ಹೆತ್ತಿದ್ದಾಳೆ!
ತಮಿಳುನಾಡಿನಲ್ಲಿ ಈ ಘಟನೆ ನಡೆದಿದೆ. ಚೆನ್ನೈನ ಒಟ್ಟೇರಿ ಪ್ರದೇಶದ 40 ವರ್ಷದ ಮಹಿಳೆ ವಿಕೃತಿ ಮೆರೆದವಳು. ಈಕೆ ಗಂಡನಿಂದ ಬೇರೆಯಾಗಿ 17 ವರ್ಷದ ಮಗಳ ಜತೆ ಇದ್ದಳು. ಅಲ್ಲಿಯೇ ಪುಲಿಯಂತೋಪೆಯ ಮುತ್ತುಕುಮಾರ್ ಎಂಬ 50 ವರ್ಷದ ವ್ಯಕ್ತಿಯ ಪರಿಚಯವಾಗಿ ಇಬ್ಬರ ನಡುವೆ ಕಾಮದಾಟ ಶುರುವಾಗಿದೆ. ಈ ಕಾಮುಕನ ಕಣ್ಣು ಮಹಿಳೆಯ ಮಗಳ ಮೇಲೆ ಬಿದ್ದಿದೆ.
ತನ್ನ ಪ್ರಿಯಕರನ ಆಸೆಯನ್ನು ಯಾವುದೇ ಅಂಜಿಕೆ ಇಲ್ಲದೇ ಈಡೇರಿಸಿದ್ದಾಳೆ ಈ ಪಾಪಿ ತಾಯಿ. ಕಳೆದೊಂದು ವರ್ಷದಿದ ಬಾಲಕಿಯ ಮೇಲೆ ಈತ ಅತ್ಯಾಚಾರ ಮಾಡುತ್ತಲೇ ಬಂದಿದ್ದಾನೆ. ಇದರಿಂದ ಬಾಲಕಿ ಗರ್ಭ ಧರಿಸಿದ್ದಳು. ಆಸ್ಪತ್ರೆಗೆ ಹೋದರೆ ಪೊಲೀಸರಿಗೆ ಸಿಕ್ಕಿಬೀಳುವ ಭಯದಿಂದ ಈ ತಾಯಿ ಬಾಲಕಿಗೆ ಮನೆಯಲ್ಲೇ ಚಿಕಿತ್ಸೆ ನೀಡುತ್ತಿದ್ದಳು. ಈಗ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಮಗುವಿಗೆ ಹುಷಾರಿಲ್ಲದ ಕಾರಣ ಚಿಕಿತ್ಸೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಆಧಾರ್ ಕಾರ್ಡ್ ಕಡ್ಡಾಯವಾದ್ದರಿಂದ ಬಾಲಕಿ ಇನ್ನೂ ಅಪ್ರಾಪ್ತಳು ಎಂದು ತಿಳಿದಾಗ, ಮಕ್ಕಳ ಕಲ್ಯಾಣ ಸಂಸ್ಥೆಗೆ ಆಸ್ಪತ್ರೆ ಸಿಬ್ಬಂದಿ ದೂರು ನೀಡಿದ್ದಾರೆ. ದೂರಿನ ತನಿಖೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ.