ಕಾಮನ್‌ವೆಲ್ತ್‌ನಲ್ಲಿ ಭಾರತಕ್ಕೆ ಪದಕಗಳ ಮಾಲೆ: ಹೀಗಿದೆ ಸಾಧಕರ ಪಟ್ಟಿ

ಕಾಮನ್‌ವೆಲ್ತ್ ಗೇಮ್ಸ್ 2022 ಅಧಿಕೃತವಾಗಿ ಜುಲೈ 29ರಂದು ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಭವ್ಯವಾದ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಯಿತು.
ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್ 12-ದಿನಗಳ ಕ್ರೀಡಾ ಸಂಭ್ರಮವಾಗಿದ್ದು, ಇದು ಔಪಚಾರಿಕವಾಗಿ ಆಗಸ್ಟ್ 8ರಂದು ಕೊನೆಗೊಳ್ಳಲಿದೆ. ಇನ್ನು ಪ್ರಪಂಚದಾದ್ಯಂತದ ಪ್ರತಿ ದಿನ ವೀಕ್ಷಕರು ಕಾಮನ್‌ವೆಲ್ತ್ ಗೇಮ್ಸ್ 2022 ಮೆಡಲ್ ಟ್ಯಾಲಿಯನ್ನು ನೋಡಲು ಕಾಯುತ್ತಿದ್ದಾರೆ.
ಆಗಸ್ಟ್ 5ರಂದು ಕಾಮನ್‌ವೆಲ್ತ್ ಗೇಮ್ಸ್ 2022 8 ನೇ ದಿನವಾಗಿದ್ದು, ಭಾರತ ಪದಕ ಬೇಟೆ ಮುಂದುವರೆಸಿದೆ. ಕಾಮನ್‌ವೆಲ್ತ್ ಗೇಮ್ಸ್ 2022ರ ಪದಕ ಪಟ್ಟಿಯಲ್ಲಿ ಭಾರತೀಯರ ಸ್ಥಾನವು ದಿನೇ ದಿನೇ ಮೇಲಕ್ಕೇರುತ್ತಿದೆ. ಕಳೆದ ಒಂದೇ ದಿನ ಮೂರು ಚಿನ್ನದ ಪದಕ, ಒಂದು ಬೆಳ್ಳಿ, ಒಂದು ಕಂಚಿನ ಪದಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಸದ್ಯ ಭಾರತದ ಬತ್ತಳಿಕೆಯಲ್ಲಿ ಒಂಬತ್ತು ಚಿನ್ನ, ಎಂಟು ಬೆಳ್ಳಿ, ಎಂಟು ಕಂಚು ಸೇರಿ ಒಟ್ಟು 26 ಪದಕಗಳಿವೆ.
ಸಂಕೇತ್ ಸರ್ಗರ್ ಕಾಮನ್‌ವೆಲ್ತ್ ಗೇಮ್ಸ್ 2022 ಪದಕ ಗೆದ್ದ ಮೊದಲ ಭಾರತೀಯ ಕ್ರೀಡಾಪಟು. 2022 ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮೀರಾಬಾಯಿ ಚಾನು ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದಿದ್ದಾರೆ.
ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಭಾರತದ ವಿಜೇತರ ಪಟ್ಟಿ: ಮೀರಾಬಾಯಿ ಚಾನು: ಚಿನ್ನ; ಮಹಿಳೆಯರ ವೇಟ್‌ಲಿಫ್ಟಿಂಗ್ (49 ಕೆಜಿ)ಜೆರೆಮಿ ಲಾಲ್ರಿನ್ನುಂಗ: ಚಿನ್ನ; ಪುರುಷರ ವೇಟ್‌ಲಿಫ್ಟಿಂಗ್ (67 ಕೆಜಿ)ಅಚಿಂತ ಶೆಯುಲಿ: ಚಿನ್ನ; ಪುರುಷರ ವೇಟ್‌ಲಿಫ್ಟಿಂಗ್ (73 ಕೆಜಿ)ಹರ್ಮೀತ್ ದೇಸಾಯಿ, ಸತ್ಯನ್ ಜ್ಞಾನಶೇಖರನ್, ಸನಿಲ್ ಶೆಟ್ಟಿ ಮತ್ತು ಶರತ್ ಅಚಂತ: ಚಿನ್ನ; ಪುರುಷರ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್ಚೌಬೆ, ಪಿಂಕಿ, ನಯನ್ಮೋನಿ ಸೈಕಿಯಾ ಮತ್ತು ರೂಪಾ ರಾಣಿ ಟಿರ್ಕಿ: ಚಿನ್ನ; ವುಮೆನ್ ಫೋರ್ಸ್- ಲಾನ್ ಬೌಲ್ಸ್‌ಸುಧೀರ್: ಚಿನ್ನ, ಪುರುಷರ ಹೆವಿವೇಟ್ ಪ್ಯಾರಾ ಪವರ್‌ಲಿಫ್ಟಿಂಗ್ಸಂಕೇತ್ ಸರ್ಗರ್: ಬೆಳ್ಳಿ; ಪುರುಷರ ವೇಟ್ ಲಿಫ್ಟಿಂಗ್ (55 ಕೆಜಿ)ಬಿಂದ್ಯಾರಾಣಿ ಸೊರೊಖೈಬಂ: ಬೆಳ್ಳಿ; ಮಹಿಳೆಯರ ವೇಟ್‌ಲಿಫ್ಟಿಂಗ್ (55 ಕೆಜಿ)ಸುಶೀಲಾ ಲಿಕ್ಮಾಬಮ್: ಬೆಳ್ಳಿ; ಮಹಿಳೆಯರ ಜೂಡೋ ಚಾಂಪಿಯನ್‌ಶಿಪ್ (48 ಕೆಜಿ)ಬ್ಯಾಡ್ಮಿಂಟನ್ ಮಿಶ್ರ ತಂಡ: ಬೆಳ್ಳಿತುಲಿಕಾ ಮಾನ್: ಬೆಳ್ಳಿ, ಮಹಿಳೆಯರ ಜೂಡೋ (78 ಕೆಜಿ)ಮುರಳಿ ಶ್ರೀಶಂಕರ್: ಬೆಳ್ಳಿ, ಪುರುಷರ ಲಾಂಗ್ ಜಂಪ್ಗುರುರಾಜ ಪೂಜಾರಿ: ಕಂಚು; ಪುರುಷರ ವೇಟ್‌ಲಿಫ್ಟಿಂಗ್ (61 ಕೆಜಿ)ವಿಜಯ್ ಕುಮಾರ್ ಯಾದವ್: ಕಂಚು; ಪುರುಷರ ಜೂಡೋಹರ್ಜಿಂದರ್ ಕೌರ್: ಕಂಚು; ಮಹಿಳೆಯರ ವೇಟ್ ಲಿಫ್ಟಿಂಗ್ (71 ಕೆಜಿ)ಲವ್ಪ್ರೀತ್ ಸಿಂಗ್: ಕಂಚು; ಪುರುಷರ ವೇಟ್‌ಲಿಫ್ಟಿಂಗ್ (109 ಕೆಜಿ)ಸೌರವ್ ಘೋಸಲ್: ಕಂಚು, ಪುರುಷರ ಸಿಂಗಲ್ಸ್ ಸ್ಕ್ವಾಷ್ಗುರುದೀಪ್ ಸಿಂಗ್: ಕಂಚು, ವೇಟ್‌ಲಿಫ್ಟಿಂಗ್ (109 ಕೆಜಿ)ತೇಜಸ್ವಿನ್ ಶಂಕರ್: ಕಂಚು, ಪುರುಷರ ಹೈ ಜಂಪ್ ಅಥ್ಲೆಟಿಕ್ಸ್ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್, ಮತ್ತು ದೀಪಕ್ ಪುನಿಯಾ: ಚಿನ್ನ; ಕುಸ್ತಿ.ಅಂಶು ಮಲಿಕ್: ಬೆಳ್ಳಿ;
ಕುಸ್ತಿ (ಮಹಿಳೆಯರ 57 ಕೆಜಿ).ದಿವ್ಯಾ ಕಕ್ರಾನ್: ಕಂಚು; ಕುಸ್ತಿ (ಮಹಿಳೆಯರ 68 ಕೆಜಿ).ಮೋಹಿತ್ ಗ್ರೆವಾಲ್: ಕಂಚು; ಕುಸ್ತಿ (ಪುರುಷರ 125 ಕೆಜಿ)ಸದ್ಯ ಭಾರತ ಪದಕಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
ಇನ್ನುಳಿದಂತೆ ಆಸ್ಟ್ರೇಲಿಯಾ ಕಾಮನ್‌ವೆಲ್ತ್ ಗೇಮ್ಸ್ 2022 ರ ಪದಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದು, ನಂತರದ ಸ್ಥಾನಗಳನ್ನು ಕ್ರಮವಾಗಿ ಇಂಗ್ಲೆಂಡ್ ಮತ್ತು ಕೆನಡಾ ಪಡೆದುಕೊಂಡಿದೆ.