ರಾಷ್ಟ್ರಿಯಸಿನಿಮಾ

ಕಾನ್ಸರ್ಟ್ ವೇಳೆ ಹೃದಯಾಘಾತದಿಂದ ಗಾಯಕ ಕೃಷ್ಣಕುಮಾರ್ ಕುನ್ನತ್ ನಿಧನ

ಕನ್ನಡ, ಹಿಂದಿ, ಮಲಯಾಳಂ ಸೇರಿದಂತೆ ಅನೇಕ ಭಾಷೆಗಳ ಸಿನಿಮಾಗಳಲ್ಲಿ ಗಾನಸುಧೆ ಹರಿಸಿದ್ದ ಗಾಯಕ ಕೆಕೆ ಎಂದೇ ಜನಪ್ರಿಯರಾಗಿದ್ದ ಕೃಷ್ಣಕುಮಾರ್ ಕುನ್ನತ್ ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ಕೆ.ಕೆ ಕೊನೆಯುಸಿರೆಳೆದಿದ್ದಾರೆ. ಕೃಷ್ಣಕುಮಾರ್ ಕುನ್ನತ್ ಅವರಿಗೆ 53 ವರ್ಷ ವಯಸ್ಸಾಗಿತ್ತು.

ಕಾನ್ಸರ್ಟ್‌ನಲ್ಲಿ ಪಾಲ್ಗೊಂಡಿದ್ದ ಕೃಷ್ಣಕುಮಾರ್ ಕುನ್ನತ್ಮೇ 31 ರಂದು ಕೋಲ್ಕತ್ತಾದ ನಜ್ರುಲ್ ಮಂಚ ಆಡಿಟೋರಿಯಂನಲ್ಲಿ ನಡೆದ ಕಾನ್ಸರ್ಟ್‌ನಲ್ಲಿ ಗಾಯಕ ಕೃಷ್ಣಕುಮಾರ್ ಕುನ್ನತ್ ಲೈವ್ ಪರ್ಫಾಮೆನ್ಸ್ ನೀಡಿದ್ದರು. ಉತ್ಸಹದಿಂದಲೇ ಕಾನ್ಸರ್ಟ್‌ನಲ್ಲಿ ಪಾಲ್ಗೊಂಡಿದ್ದ ಕೃಷ್ಣ ಕುಮಾರ್ ಕುನ್ನತ್ ತಮ್ಮ ಲೈಫ್ ಪರ್ಫಾಮೆನ್ಸ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಕಾನ್ಸರ್ಟ್‌ನಲ್ಲೇ ಅನಾರೋಗ್ಯವರದಿಗಳ ಪ್ರಕಾರ, ಕಾನ್ಸರ್ಟ್‌ನಲ್ಲಿ ಪಾಲ್ಗೊಂಡಿದ್ದಾಗಲೇ ಗಾಯಕ ಕೃಷ್ಣಕುಮಾರ್ ಕುನ್ನತ್ ಅವರಿಗೆ ಅನಾರೋಗ್ಯ ಕಾಡುತ್ತಿತ್ತು. ತೀರಾ ಸುಸ್ತು ಕಾಣಿಸಿಕೊಂಡ ಪರಿಣಾಮ ಕಾನ್ಸರ್ಟ್‌ನಿಂದ ಕೃಷ್ಣಕುಮಾರ್ ಕುನ್ನತ್ ತಮ್ಮ ಹೋಟೆಲ್ ರೂಮ್‌ಗೆ ಹಿಂದಿರುಗಿದರು. ಹೋಟೆಲ್‌ನಲ್ಲಿನ ಮೆಟ್ಟಿಲುಗಳನ್ನು ಹತ್ತುವಾಗ ಕೃಷ್ಣಕುಮಾರ್ ಕುನ್ನತ್ ಕುಸಿದುಬಿದ್ದರು ಎಂದು ವರದಿಯಾಗಿದೆ.ಕೂಡಲೆ ಕೃಷ್ಣಕುಮಾರ್ ಕುನ್ನತ್ ಅವರನ್ನು ಸಿಎಂಆರ್‌ಐ (ಕೋಲ್ಕತ್ತಾ ಮೆಡಿಕಲ್ ರಿಸರ್ಚ್ ಇನ್ಸ್‌ಟಿಟ್ಯೂಟ್‌)ಗೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆಗೆ ಬರುವ ಮುನ್ನವೇ ಕೃಷ್ಣಕುಮಾರ್ ಕುನ್ನತ್ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ಪ್ರಧಾನಿ ನರೇಂದ್ರ ಮೋದಿ ಸಂತಾಪ

‘’ಗಾಯಕ ಕೃಷ್ಣಕುಮಾರ್ ಕುನ್ನತ್ ಅವರ ಅಕಾಲಿಕ ನಿಧನವಾರ್ತೆ ಮನಸ್ಸಿಗೆ ನೋವು ತರಿಸಿದೆ. ಕೃಷ್ಣಕುಮಾರ್ ಕುನ್ನತ್ ‘ಕೆಕೆ’ ಅಂತಲೇ ಜನಪ್ರಿಯತೆ ಪಡೆದಿದ್ದರು. ಕೆಕೆ ಅವರ ಹಾಡುಗಳಲ್ಲಿ ಎಲ್ಲಾ ರೀತಿಯ ಭಾವನೆಗಳು ಇರುತ್ತಿದ್ದವು. ಎಲ್ಲಾ ವಯೋಮಾನದವರನ್ನ ತಮ್ಮ ಹಾಡುಗಳ ಮೂಲಕ ಕೆಕೆ ರಂಜಿಸಿದ್ದರು. ಕೆಕೆ ಅವರ ಹಾಡುಗಳ ಮೂಲಕ ಅವರನ್ನು ಸದಾ ನೆನಪಿಸಿಕೊಳ್ಳುತ್ತೇನೆ’’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಕಂಬನಿ ಮಿಡಿದ ಅಕ್ಷಯ್ ಕುಮಾರ್

‘’ಕೆಕೆ ನಿಧನವಾರ್ತೆ ಕೇಳಿ ತೀವ್ರ ನೋವು ಹಾಗೂ ಆಘಾತ ಉಂಟಾಗಿದೆ. ಇದು ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಓಂ ಶಾಂತಿ’’ ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಕೃಷ್ಣಕುಮಾರ್ ಕುನ್ನತ್

ಆಗಸ್ಟ್ 23, 1968 ರಂದು ದೆಹಲಿಯಲ್ಲಿ ಜನಿಸಿದವರು ಕೃಷ್ಣಕುಮಾರ್ ಕುನ್ನತ್. ಇವರ ತಂದೆ ಸಿ.ಎಸ್.ಮೆನನ್ ಹಾಗೂ ತಾಯಿ ಕುನ್ನತ್ ಕನಕವಲ್ಲಿ ಮೂಲತಃ ಮಲಯಾಳಿ. ನವದೆಹಲಿಯಲ್ಲೇ ಬೆಳೆದ ಕೃಷ್ಣಕುಮಾರ್ ಕುನ್ನತ್ ಬಾಲಿವುಡ್‌ಗೆ ಕಾಲಿಡುವ ಮುನ್ನ ಸುಮಾರು 3500 ಜಿಂಗಲ್‌ಗಳನ್ನು ಹಾಡಿದ್ದರು.ಕೃಷ್ಣಕುಮಾರ್ ಕುನ್ನತ್ ಅವರನ್ನ ಎ.ಆರ್.ರೆಹಮಾನ್ ಚಿತ್ರರಂಗಕ್ಕೆ ಪರಿಚಯಿಸಿದರು. ‘ಕಾದಲ್ ದೇಸಂ’ ಚಿತ್ರದ ಹಾಡಿಗೆ ಕೃಷ್ಣಕುಮಾರ್ ಕುನ್ನತ್ ದನಿಯಾದರು. ಹಿಂದಿಯ ‘ಹಮ್ ದಿಲ್ ದೇ ಚುಕೇ ಸನಂ’ ಸಿನಿಮಾದ ‘ತಡಪ್ ತಡಪ್’ ಹಾಡಿನ ಮೂಲಕ ಬಾಲಿವುಡ್‌ನಲ್ಲಿ ಕೃಷ್ಣಕುಮಾರ್ ಕುನ್ನತ್ ಗುರುತಿಸಿಕೊಂಡರು. ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಮರಾಠಿ, ಬೆಂಗಾಲಿ, ಗುಜರಾತಿ ಸಿನಿಮಾಗಳಲ್ಲಿ ಕೆಕೆ ಹಾಡಿದ್ದಾರೆ.

ಕೃಷ್ಣಕುಮಾರ್ ಕುನ್ನತ್ ಹಾಡಿರುವ ಜನಪ್ರಿಯ ಹಾಡುಗಳು

*ಹಮ್ ದಿಲ್ ದೇ ಚುಕೇ ಸನಂ – ತಡಪ್ ತಡಪ್

*ದಸ್ – ದಸ್ ಬಹಾನೆ

*ಓಂ ಶಾಂತಿ ಓಂ – ಆಂಕೋ ಮೇ ತೇರಿ

*ಜನ್ನತ್ – ಝರಾ ಸಾ

*ಬಚ್ನಾ ಏ ಹಸೀನೋ – ಖುದಾ ಜಾನೇ

*ಗ್ಯಾಂಗ್‌ಸ್ಟರ್ – ತು ಹಿ ಮೇರಿ ಶಬ್ ಹೇ

*ರೆಹ್ನಾ ಹೇ ತೇರಿ ದಿಲ್ ಮೇ – ಸಚ್ ಕೆಹರಾ ಹೇ ದಿವಾನಾ

*ಬಿಲ್ಲು – ಮರ್ಜಾನಿಕೃಷ್ಣಕುಮಾರ್ ಕುನ್ನತ್ ಹಾಡಿರುವ

ಕನ್ನಡ ಹಾಡುಗಳು

*ಲವ್ – ಏಳು ಬಣ್ಣದ ಪ್ರೀತಿಯಿದು

*ಸಾರ್ವಭೌಮ – ಸೆಲ್ಫಿಶು

*ನ್ಯೂಸ್ – ಗಿರ ಗಿರ

*ಮನಸಾರೆ – ಕಣ್ಣ ಹನಿಯೊಂದಿಗೆ

*ಆರ್ಯನ್ – ಒಂದು ಹಾಡು

Related Articles

Leave a Reply

Your email address will not be published. Required fields are marked *

Back to top button