ಕಾನೂನು ಸುವ್ಯವಸ್ಥೆ ಕಾಪಾಡಿ ಅಪರಾಧ ನಿಯಂತ್ರಿಸಿ: ಪ್ರತಾಪ್‍ರೆಡ್ಡಿ
pratap reddy commissioner bangalore

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿ ಅಪರಾಧಗಳನ್ನು ನಿಯಂತ್ರಿಸಿ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸೂಚಿಸಿದರು. ನಗರದ ಮೈಸೂರು ರಸ್ತೆಯಲ್ಲಿರುವ ಸಿಎಆರ್ ಕೇಂದ್ರ ಸ್ಥಾನದಲ್ಲಿ ಆಯೋಜಿಸಿದ್ದ ಮೊದಲ ಸೇವಾ ಕವಾಯತಿನಲ್ಲಿ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಯಾವುದೇ ಸಂದರ್ಭದಲ್ಲೂ ಸಹ ಕಠಿಣ ಕ್ರಮ ಕೈಗೊಳ್ಳಬೇಕು. ಅಪರಾಧ ನಿಯಂತ್ರಿಸಬೇಕು. ನಗರ ಪೊಲೀಸರು ಒಂದು ತಂಡವಾಗಿ ಕೆಲಸ ಮಾಡಬೇಕು. ಎಲ್ಲರೂ ಒಟ್ಟಾಗಿ ಉತ್ತಮ ಕೆಲಸ ಮಾಡುವ ಮೂಲಕ ಇಲಾಖೆಗೆ ಒಳ್ಳೆಯ ಹೆಸರು ತರಬೇಕು ಎಂದು ಕಿವಿಮಾತು ಹೇಳಿದರು.
ಠಾಣೆಗೆ ದೂರು ಕೊಡಲು ಬರುವ ದೂರುದಾರರೊಂದಿಗೆ ಸ್ಪಂದಿಸಿ. ಅವರನ್ನು ಅಲೆದಾಡಿಸಬೇಡಿ. ಅವರ ದೂರುಗಳನ್ನು ದಾಖಲಿಸಿಕೊಂಡು ನ್ಯಾಯ ಒದಗಿಸಿ ಎಂದು ಸಲಹೆ ಮಾಡಿದರು.
ಕೋವಿಡ್ ಸಂದರ್ಭದಲ್ಲೂ ಒಳ್ಳೆಯ ಕೆಲಸ ಮಾಡಿದ್ದೀರಿ. ನಿಮ್ಮ ಕುಟುಂಬದವರನ್ನು ಸಹ ಉತ್ತಮವಾಗಿ ನೋಡಿಕೊಂಡಿದ್ದೀರಿ. ಇದೇ ರೀತಿ ಮುಂದೆಯೂ ಸಹ ಎಲ್ಲರು ಮೆಚ್ಚುವಂತಹ ಕೆಲಸ ಮಾಡಿ. ಇಲಾಖೆಗೆ ಹೆಸರು ತನ್ನಿ ಎಂದು ಪ್ರತಾಪ್ ರೆಡ್ಡಿ ಅವರು ತಿಳಿಸಿದರು.