
ಮೈಸೂರು: ರಕ್ತದ ಮಡುವಿನಲ್ಲಿ ಬಿದ್ದಿರುವ ಯುವಕ. ನೀರಿನಂತೆ ಹರಿಯುತ್ತಿರುವ ನೆತ್ತರು. ಮೈಸೂರಿನ ಹೃದಯ ಭಾಗ ದೇವರಾಜ ಮಾರುಕಟ್ಟೆ ಬಳಿ ದುಷ್ಕರ್ಮಿಗಳು ಯುವಕನೊಬ್ಬನನಿಗೆ ಬ್ಲೇಡ್ ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಕಳ್ಳತನ, ಪಾರ್ಟಿ ಮಾಡೊದೇ ಜೀವನ ಎಂದುಕೊಂಡಿದ್ದ ಯುವಕ ಬೀದಿ ಹೆಣವಾದ ಕಥೆಯಿದು.
ಮೈಸೂರಿನ ಕುಂಬಾರಕೊಪ್ಪಲಿನ ನಿವಾಸಿ ಸುನೀಲ್ ಕೊಲೆಯಾದ ಯುವಕ. ಸಣ್ಣ ಪುಟ್ಟ ಕಳ್ಳತನ ಮಾಡಿಕೊಂಡು ಜೀವನ ನಡೆಸುತ್ತಿದ್ದ ಈತನ ವಿರುದ್ದ ಮೈಸೂರಿನ ದೇವರಾಜ ಪೊಲೀಸ್ ಠಾಣೆ ಸೇರಿದಂತೆ ಬೇರೆ ಬೇರೆ ಠಾಣೆಯಲ್ಲಿ ಕಳ್ಳತನ ಸುಲಿಗೆ ಪ್ರಕರಣ ದಾಖಲಾಗಿದೆ.
ಬುಧವಾರ (ಅಕ್ಟೋಬರ್ 12) ರಾತ್ರಿ ಈತನನ್ನ ದೇವರಾಜ ಮಾರುಕಟ್ಟೆ ಬಳಿ ಭೀಕರವಾಗಿ ಕೊಲೆ ಮಾಡಲಾಗಿದೆ.
ವಾಸ್ತವವಾಗಿ, ಸುನೀಲ್ ಮನೆಗೆ ಬರ್ತಾ ಇರಲಿಲ್ಲಾ. ಯಾವಗಲೂ ಸ್ನೇಹಿತರು ಪಾರ್ಟಿ ಅಂಥ ಸುತಾಡ್ತಿದ್ದ. ಕಳ್ಳತನ ಮಾಡಿದ ವಸ್ತುವಿನಿಂದ ಬಂದ ಹಣದಲ್ಲಿ ಕುಡಿದು ಸುತ್ತಾಡಿಕೊಂಡು ಇರುತ್ತಿದ್ದ. ಮನೆಯಲ್ಲೇ ಇರ್ತಿಲಿಲ್ಲಾ.
ಬುಧವಾರ ರಾತ್ರಿ ಮಗ ಕೊಲೆಯಾಗಿರುವ ಬಗ್ಗೆ ಫೋನ್ ಬಂದಿತ್ತು. ತಕ್ಷಣ ಸ್ಥಳಕ್ಕೆ ಬಂದು ನೋಡಿದಾಗ ಸುನೀಲ್ ರಕ್ತದ ಮಡುವಿನಲ್ಲಿ ಬಿದ್ದಿದ್ದ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗನನ್ನು ಕಂಡ ಪೋಷಕರು, ನನ್ನ ಮಗನನ್ನ ಯಾರು ಕೊಲೆ ಮಾಡಿದ್ದಾರೆ ಗೊತ್ತಿಲ್ಲಾ. ಮಗನನ್ನು ಕೊಲೆ ಮಾಡಿದವರಿಗೆ ಶಿಕ್ಷೆಯಾಗಲೇ ಬೇಕೆಂದು ಒತ್ತಾಯಿಸಿದ್ದಾರೆ.
ಒಟ್ಟಾರೆ ಕಳ್ಳತನ, ಪಾರ್ಟಿ ಮಾಡೊದೇ ಜೀವನ ಎಂದುಕೊಂಡಿದ್ದ ಸುನೀಲ್ ಬೀದಿ ಹೆಣ ಆಗಿರೊದು ದುರಂತವೇ ಸರಿ.