ಕಳೆದ 8 ತಿಂಗಳಲ್ಲಿ ತಿಮ್ಮಪ್ಪನ ಹುಂಡಿಗೆ ಹರಿದುಬಂದ ಕಾಣಿಕೆ ಎಷ್ಟು ಗೊತ್ತೇ..?

ತಿರುಪತಿ ತಿಮ್ಮಪ್ಪನ ಹುಂಡಿಗೆ ದಾಖಲೆ ಪ್ರಮಾಣದಲ್ಲಿ ಕಾಣಿಕೆ ಸಂಗ್ರಹವಾಗಿದೆ. ಕಳೆದ ಎಂಟು ತಿಂಗಳಲ್ಲಿ ಬರೋಬ್ಬರಿ 1033 ಕೋಟಿ ರೂ. ಕಾಣಿಕೆ ರೂಪದಲ್ಲಿ ಹರಿದು ಬಂದಿದೆ.ಕೊರೊನಾ ತೆರವಿನ ನಂತರ ಇದು ಅತ್ಯಂತ ದೊಡ್ಡ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ ಎಂದು ಟಿಟಿಡಿ ಹೇಳಿದೆ.ಕಳೆದ ಏಪ್ರಿಲ್ ನಂತರ ಪ್ರತಿದಿನ ತಿಮ್ಮಪ್ಪನ ಹುಂಡಿಗೆ ಸರಾಸರಿ 4 ಕೋಟಿ ರೂ.
ಕಾಣಿಕೆ ಸಂಗ್ರಹವಾಗುತ್ತಿದೆ. 2022ರ ಮಾರ್ಚ್ ನಂತರ ತಿರುಪತಿಗೆ ಭಕ್ತರು ಭಾರೀ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.ಮುಂದಿನ ಎರಡು ತಿಂಗಳಲ್ಲಿ ಸಂಗ್ರಹವಾಗುವ ಕಾಣಿಕೆಯೂ ಸೇರಿದರೆ ಇದು ದಾಖಲೆ ಸಂಗ್ರಹ ಆಗಬಹುದು ಎಂದು ಅಂದಾಜಿಸಲಾಗಿದೆ. 2019-20ರಲ್ಲಿ 1150 ಕೋಟಿ ಸಂಗ್ರಹವಾಗಿತ್ತು. ಈ ವರ್ಷ ನವೆಂಬರ್ ವರೆಗೆ 1033 ಕೋಟಿ ರೂ.
ಸಂಗ್ರಹವಾಗಿದೆ. ಕಳೆದ ಎಂಟು ತಿಂಗಳಿನಿಂದ ಪ್ರತಿ ತಿಂಗಳು ತಲಾ 100 ಕೋಟಿ ರೂ. ಕಾಣಿಕೆ ಹುಂಡಿಗೆ ಹರಿದುಬಂದಿದೆ.ಡಿ.21ರ ವರೆಗೆ 88 ಕೋಟಿ ಸಂಗ್ರಹವಾಗಿದೆ. ಏಪ್ರಿಲ್‍ನಲ್ಲಿ 139, ಆಗಸ್ಟ್‍ನಲ್ಲಿ 140, ಸೆಪ್ಟೆಂಬರ್‍ನಲ್ಲಿ 122, ಅಕ್ಟೋಬರ್‍ನಲ್ಲಿ 122 ಕೋಟಿ, ನವೆಂಬರ್‍ನಲ್ಲಿ 127 ಕೋಟಿ ಸಂಗ್ರಹವಾಗಿದೆ. 1950ರಲ್ಲಿ ತಿಮ್ಮಪ್ಪನ ಹುಂಡಿಗೆ ಒಂದು ದಿನಕ್ಕೆ ಒಂದು ಲಕ್ಷ ಕಾಣಿಕೆ ಬರುತ್ತಿತ್ತು.
1958ರಲ್ಲಿ ದಿನಕ್ಕೆ 1 ಕೋಟಿ, 1990ರಲ್ಲಿ 3 ಕೋಟಿ ಸಂಗ್ರಹವಾಗುತ್ತಿತ್ತು.ಈ ವರ್ಷ 1500 ಕೋಟಿ ರೂ. ಸಂಗ್ರಹವಾಗಬಹುದು ಎಂದು ಟಿಟಿಡಿ ಅಂದಾಜಿಸಿದೆ. ವಿವಿಧ ಬ್ಯಾಂಕ್‍ಗಳಲ್ಲಿ ಟಿಟಿಡಿ 16 ಸಾವಿರ ಕೋಟಿ ರೂ.ಗಳನ್ನು ನಿಗದಿತ ಠೇವಣಿಯಲ್ಲಿ ಇರಿಸಿದೆ.