ರಾಜಕೀಯ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮೌನ ಪ್ರತಿಭಟನೆ ಸತ್ಯಾಗ್ರಹ

E D ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ B J P ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ಸಹ ಗಾಂಧಿ ಪ್ರತಿಮೆ, ಕಾಂಗ್ರೆಸ್ ಭವನ, ರೇಸ್ ಕೋರ್ಸ್ ರಸ್ತೆ, ಬೆಂಗಳೂರು ಇಲ್ಲಿ ಮೌನ ಪ್ರತಿಭಟನೆ ಸತ್ಯಾಗ್ರಹ ಮುಂದುವರೆಸಲಾಯಿತು. ಇಂದಿನ ಸತ್ಯಾಗ್ರಹದಲ್ಲಿ ಮಾಜಿ ಮುಖ್ಯ ಮಂತ್ರಿಗಳಾದ ಶ್ರೀ ವೀರಪ್ಪ ಮೊಯಿಲಿ, ಎ ಐ ಸಿ ಸಿ ಪದಾಧಿಕಾರಿಗಳು, ಮಾಜಿ ಮಂತ್ರಿಗಳಾದ ಶ್ರೀ ರಾಮಲಿಂಗಾರೆಡ್ಡಿ, ಶಾಸಕರಾದ ಶ್ರೀ ಎನ್ ಎ ಹ್ಯಾರಿಸ್, ಮಾಜಿ ಶಾಸಕರಾದ ಶ್ರೀ ಆರ್ ವಿ ದೇವರಾಜ್, ಆರ್ ವಿ ವೆಂಕಟೇಶ್, ನಾರಾಯಣಸ್ವಾಮಿ, ಕೆ ಪಿ ಸಿ ಸಿ ಪದಾಧಿಕಾರಿಗಳು, ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಭಾಗವಹಿಸಿದ್ದರು.