ಕರ್ನಾಟಕ ದೇಶದಲ್ಲೇ ಮಾದರಿ ರಾಜ್ಯ :ಸಿಎಂ ಬಣ್ಣನೆ

ಕರ್ನಾಟಕ ದೇಶದಲ್ಲಿ ಹೆಚ್ಚು ಪ್ರಗತಿ ಸಾಧಿಸಿರುವ ಮಾದರಿ ರಾಜ್ಯವಾಗಿ ಮುನ್ನೆಡೆಯುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಹೇಳಿದ್ದಾರೆ.ಕೆಲವು ವರ್ಷಗಳಲ್ಲಿ ರಾಜ್ಯಕ್ಕೆ ಅತಿ ಹೆಚ್ಚು ವಿದೇಶಿ ಬಂಡವಾಳ ಹರಿದು ಬಂದಿದೆ. ದೇಶಕ್ಕೆ ಹರಿದುಬಂದ ಒಟ್ಟು ಬಂಡವಾಳದ ಪೈಕಿ ಶೇ. ೩೮ ರಷ್ಡು ರಾಜ್ಯಕ್ಕೆ ಹರಿದುಬಂದಿದೆ ಎಂದು ಅವರು ತಿಳಿಸಿದ್ದಾರೆ.
ಅಮೇರಿಕಾದ ನ್ಯೂಯಾರ್ಕ್‌ನಲ್ಲಿ ಆಯೋಜಿಸಿದ್ದ ಲೋಕದ ದೊಡ್ಡ ಭಾರತೀಯ ಪರೇಡ್ ಕಾರ್ಯಕ್ರಮವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ಐಟಿ-ಬಿಟಿಯಲ್ಲಿ ಅಂತಾರಾಷ್ಟ್ರೀಯ ಕೇಂದ್ರವಾಗಿದೆ. ಇದಕ್ಕೆ ಅನೇಕರ ಕೊಡುಗೆ ಇದೆ ಎಂದು ಅವರು ತಿಳಿಸಿದ್ದಾರೆ.ದೇಶದ ಒಟ್ಟಾರೆ ರಫ್ತು ಪ್ರಮಾಣದಲ್ಲಿ ಶೇ. ೬೦ರಷ್ಟು ಬೆಂಗಳೂರು ಒಂದರಲ್ಲೇ ಆಗುತ್ತಿರುವುದು ಹೆಮ್ಮೆಯ ಸಂಗತಿ.
ಹೊಸಹೊಸ ನವೋದ್ಯಮಗಳು ತಲೆಎತ್ತುತ್ತಿವೆ. ೧೩೦ ಯೂನಿಕಾರ್ನ್‌ಗಳಲ್ಲಿ ೨೪ ಬೆಂಗಳೂರಿನಲ್ಲಿವೆ. ಇದರಿಂದ ಅಭಿವೃದ್ಧಿಗೆ ಮತ್ತಷ್ಟು ಸುಲಭವಾಗಿದೆ. ಕರ್ನಾಟಕದ ಸಾಮರ್ಥ್ಯ ಇದರಿಂದ ಅರ್ಥವಾಗಲಿದೆ ಎಂದು ಅವರು ಹೇಳಿದ್ದಾರೆ.ದೂರದ ವಿದೇಶಗಳಲ್ಲಿ ಕನ್ನಡದ ಕಂಪನ್ನು ನಿರಂತರವಾಗಿ ಪಸರಿಸುತ್ತಿರುವ ಕನ್ನಡಿಗರ ಕೆಲಸ ಶ್ಲಾಘನೀಯ. ನಿಮ್ಮ ಮತ್ತು ನಿಮ್ಮ ಕುಟುಂಬದ ಬೇರುಗಳು ಮತ್ತಷ್ಟು ಬಲಪಡಿಸಿ ಅಮೆರಿಕದಲ್ಲಿ ಕನ್ನಡದ ಕಂಪನ್ನು ಪಸರಿಸಿ ಎಂದು ಹೇಳಿದ್ದಾರೆ.
ದೂರದ ವಿದೇಶಗಳಲ್ಲಿ ಕನ್ನಡದ ಕಂಪನ್ನು ನಿರಂತರವಾಗಿ ಪಸರಿಸುತ್ತಿರುವ ಕನ್ನಡಿಗರ ಕೆಲಸ ಶ್ಲಾಘನೀಯ. ನಿಮ್ಮ ಮತ್ತು ನಿಮ್ಮ ಕುಟುಂಬದ ಬೇರುಗಳು ಮತ್ತಷ್ಟು ಬಲಪಡಿಸಿ ಅಮೆರಿಕದಲ್ಲಿ ಕನ್ನಡದ ಕಂಪನ್ನು ಪಸರಿಸಿ ಎಂದು ಹೇಳಿದ್ದಾರೆ.ವಿದೇಶಗಳಿಗೆ ಹೋದಾಗ ಬದುಕು ಮತ್ತು ಭವಿಷ್ಯದ ಬಗ್ಗೆ ಚಿಂತನೆ ಮಾಡುವುದು ಸಹಜ.
ಇಂತಹುದರ ನಡುವೆ ಕನ್ನಡ ಕಟ್ಟುವ ಮತ್ತು ಕನ್ನಡದ ಕಂಪನ್ನು ಪಸರಿಸುವ ಕೆಲಸ ಮಾಡುತ್ತಿರುವ ಎಲ್ಲಾ ಕನ್ನಡಿಗರಿಗೆ ಅಭಿನಂದನೆಗಳು ಎಂದು ಅವರು ಹೇಳಿದ್ದಾರೆ.ಎಲ್ಲರ ಕೊಡುಗೆ ಅಪಾರ:ಪ್ರಗತಿಶೀಲ ದೇಶ ನಮ್ಮದು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ, ಆಸ್ತಿಪಾಸ್ತಿಗೆ ಹಾನಿಯಾಗಿದೆ.
ಯಾವುದನ್ನೂ ಲೆಕ್ಕಿಸದೆ ದೇಶ ಮೊದಲು ಎನ್ನುವ ನೀತಿಯನ್ನು ಅನುಸರಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ, ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಅನೇಕರನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ಅಗತ್ಯ ಎಂದು ಅವರು ತಿಳಿಸಿದ್ದಾರೆ.ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ನಾಯಕರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ.
ಮಹಾತ್ಮ ಗಾಂಧೀಜಿ, ಸೇರಿದಂತೆ ಅನೇಕ ನಾಯಕರ ಕೊಡುಗೆ ಸ್ಮರಣೀಯ ಎಂದು ಅವರು ಹೇಳಿದ್ದಾರೆ.ಭಾರತ ಸ್ವಾತಂತ್ರ್ಯ ಬಂದಾಗಲೂ ೩೩ ಕೋಟಿ ಜನರಿದ್ದರು. ಆ ಸಮಯದಲ್ಲಿ ಆಹಾರದ ಕೊರತೆ ಎದುರಾಗಿದೆ. ಹೀಗಾದಲ್ಲಿ ೧೩೦ ಕೋಟಿ ಜನರಿದ್ದಾರೆ, ಎಲ್ಲರಿಗೂ ಆಹಾರ ಸುರಕ್ಷತೆ ಮತ್ತು ಭದ್ರತೆ ಒದಗಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಇದಕ್ಕೆ ಕಾರಣ ರೈತರ ಪರಿಶ್ರಮವೇ ಕಾರಣ ಎಂದು ರೈತರನ್ನು ಇದೇ ಸಂದರ್ಭದಲ್ಲಿ ಸ್ಮರಿಸಿದ ಅವರು ದೇಶದ ಗಡಿಯಲ್ಲಿ ನಿರಂತರವಾಗಿ ಸುರಕ್ಷರನ್ನಾಗಿ ಮಾಡುತ್ತಿರುವ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರಿಗೆ ನಮನ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.ಅದೇ ರೀತಿ ದೇಶ ಕಟ್ಟುವ ಕೆಲಸದಲ್ಲಿ ವೈದ್ಯರು, ವಿಜ್ಞಾನಿಗಳು, ವಿದ್ಯಾರ್ಥಿಗಳು ನಿರಂತರವಾಗಿ ಶ್ರಮಿಸಿದ್ದಾರೆ.
ಅವರೆಲ್ಲರ ಪರಿಶ್ರಮ, ಹೋರಾಟದ ಫಲವಾಗಿ ಭಾರತ ಇಂದು ಸ್ವಾವಲಂಬನೆ ಸಾಧಿಸಿದೆ. ಅಲ್ಲದೆ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿ ಸಾಧಿಸಲು ಹೆಜ್ಜೆ ಹಾಕುತ್ತಿದೆ ಎಂದು ಅವರು ಹೇಳಿದ್ದಾರೆ.ಅಮೆರಿಕದ ನ್ಯೂಯಾರ್ಕ್‌ನಲ್ಲಿ ಭಾರತದ ಧ್ವಜವನ್ನು ಎತ್ತಿ ಹಿಡಿಯುವ ಜೊತೆಗೆ ಕನ್ನಡದ ಕಂಪನ್ನು ಪಸರಿಸುತ್ತಿರುವ ಕೆಲಸ ಅತ್ಯಂತ ಶ್ಲಾಘನೀಯ .
ಜನಸಂಖ್ಯೆ ಮಾರಮ್ಮ ಸ್ಪೂರ್ತಿಯ ಮತ್ತು ಆತ್ಮವಿಶ್ವಾಸಕ್ಕೆ ನಾವು ತಲೆಬಾಗುತ್ತೇವೆ ಎಂದು ಅವರು ಹೇಳಿದ್ದಾರೆ.ಆಜಾದಿ ಕಾ ಅಮೃತ ಮಹೋತ್ಸವ ಸಂದರ್ಭದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ . ಕನ್ನಡದ ಧ್ವಜದ ಹೆಸರಲ್ಲಿ ಹೊರಡಿಸಲಿಲ್ಲ ಕನ್ನಡಿಗರು ಒಂದಾಗಿರುವುದು ಶ್ಲಾಘನೀಯ ಎಂದಿದ್ದಾರೆ.