
ನವದೆಹಲಿ: ಕರ್ನಾಟಕದ ಅಪರಾಧ ವಿಧೇಯಕಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ.
ಅಪರಾಧ ಪ್ರಕರಣಗಳಲ್ಲಿ ಆರೋಪಿ ತಪ್ಪಿಸಿಕೊಂಡಿದ್ದರೂ ವಿದ್ಯುನ್ಮಾನ ಸಾಧನ ಬಳಸಿ, ಸಾಕ್ಷಿಗಳ ಹೇಳಿಕೆಗಳನ್ನು ಆಡಿಯೋ ಮತ್ತು ವಿಡಿಯೋ ಮಾರ್ಗವಾಗಿಯೂ ಪಡೆದುಕೊಳ್ಳಬಹುದು. ಈ ವೇಳೆ ಆರೋಪಿ ಪರ ವಕೀಲರು ಹಾಜರಿದ್ದರೆ ಸಾಕು.
ಇದಲ್ಲದೇ ಆರೋಪಿಯ ಗೈರಿನಲ್ಲೇ ವಿಚಾರಣೆ ನಡೆಸಿ, ಶಿಕ್ಷೆಯನ್ನೂ ಪ್ರಕಟಿಸಬಹುದು. ಈ ಕುರಿತ ಕರ್ನಾಟಕದ ತಿದ್ದುಪಡಿ ಮಸೂದೆ ‘ದ ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್-2021’(The Code of Criminal Procedure (Amendment) Bill, 2021)ಗೆ ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗಿತ್ತು.
ಇಲ್ಲಿಯವರೆಗೆ ನ್ಯಾಯಾಲಯದ ಕಲಾಪ ನಡೆಯುತ್ತಿರುವ ವೇಳೆಯಲ್ಲಿ ಮಾತ್ರ ಸಾಕ್ಷಿಗಳ ವಿಚಾರಣೆ ನಡೆಸಿ, ಅವರ ಹೇಳಿಕೆ ದಾಖಲಿಸಿಕೊಳ್ಳಬಹುದಾಗಿತ್ತು. ಇದೂ ಸಹ ಆರೋಪಿ ಬಂಧನಕ್ಕೊಳಗಾಗಿದ್ದರೆ ಮಾತ್ರ ಸಾಧ್ಯವಿತ್ತು.