ಕರಾವಳಿ ಕರ್ನಾಟಕ & ಮಲೆನಾಡು ಭಾಗದಲ್ಲಿ ಮತ್ತೆ ಮೂರು ದಿನ ಆರೆಂಜ್ ಅಲರ್ಟ್

: ರಾಜ್ಯದಲ್ಲಿ ಮುಂಗಾರು ಅಬ್ಬರ ಜೋರಾಗಿದೆ. ಈ ಮಧ್ಯೆ ಹವಾಮಾನ ಇಲಾಖೆಯು ಕರಾವಳಿ ಕರ್ನಾಟಕ ಮತ್ತು ಮಲೆನಾಡು ಭಾಗಗಳಲ್ಲಿ ಇನ್ನೂ ಮೂರು ದಿನ ಆರೆಂಜ್ ಅಲರ್ಟ್ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಐಎಂಡಿ ಈ ಐದು ಜಿಲ್ಲೆಗಳಲ್ಲಿ ಆಗಸ್ಟ್ 8, ಆಗಸ್ಟ್ 9, ಆಗಸ್ಟ್ 10 ರಂದು ಆರೆಂಜ್ ಅಲರ್ಟ್ ನೀಡಿದೆ.
ಹವಾಮಾನ ಇಲಾಖೆ ಪ್ರಕಾರ, ಈ ಭಾಗಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು ಮಿಂಚಿನ ಸಹಿತ ಭಾರೀ ಮಳೆಯಾಗಲಿದೆ. ಐದು ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ 115 mm ರಿಂದ 204 mm ನಷ್ಟು ಮಳೆಯಾಗುವ ಸಾಧ್ಯತೆ ಇದೇ ಎನ್ನಲಾಗಿದೆ.
ಇದಲ್ಲದೆ, ಆಗಸ್ಟ್ 11 ಮತ್ತು ಆಗಸ್ಟ್ 12ರಂದು ಎಂಟು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಎಲ್ಲೆಲ್ಲಿ ಆರೆಂಜ್ ಅಲರ್ಟ್?- ಉಡುಪಿ- ದಕ್ಷಿಣ ಕನ್ನಡ- ಉತ್ತರ ಕನ್ನಡ- ಕೊಡಗು- ಚಿಕ್ಕಮಗಳೂರುಎಲ್ಲೆಲ್ಲಿ ಯೆಲ್ಲೋ ಅಲರ್ಟ್?- ಬಾಗಲಕೋಟೆ- ಬೆಳಗಾವಿ- ಬೀದರ್- ಕಲಬುರಗಿ- ವಿಜಯಪುರ- ಯಾದಗಿರಿ- ಹಾಸನ- ಶಿವಮೊಗ್ಗ