ಅಪರಾಧ

ಕರಾವಳಿಯಲ್ಲಿ ಮತ್ತೆ ಕೇಳಿಸಿತು ಸ್ಯಾಟಲೈಟ್ ಫೋನ್ ಸದ್ದು

satellite phone in Karnataka Coastal

ರಾಜ್ಯದ ಕರಾವಳಿ ಭಾಗದಲ್ಲಿ ಉಪಗ್ರಹ ಆಧಾರಿತ ಸ್ಯಾಟ್ಲೈಟ್ ಫೋನ್ ಮತ್ತೆ ಸದ್ದು ಮಾಡಿದೆ. 10 ದಿನಗಳ ಅವಯಲ್ಲಿ ನಾಲ್ಕು ಕಡೆ ಸ್ಯಾಟಲೈಟ್ ಫೋನ್ ಸಿಗ್ನಲ್ ಪತ್ತೆಯಾಗಿರುವುದು ಆತಂಕ ಮೂಡಿಸಿದೆ.

ಈ ಹಿಂದೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸ್ಯಾಟ್ಲೈಟ್ ಫೋನ್ ಬಳಕೆ ಮಾಡಿ ಭಯೋತ್ಪಾದಕ ಹಾಗೂ ದೇಶ ವಿರೋ ಚಟುವಟಿಕೆಗಳು ನಡೆಸುತ್ತಿದುದ್ದಾಗಿ ಆರೋಪಗಳು ಇದ್ದವು. ಕೇಂದ್ರ ತನಿಖಾ ದಳದ ಇದರ ವಿರುದ್ಧ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಭಟ್ಕಳ ಸೇರಿ ಹಲವು ಕಡೆ ಉಗ್ರ ಸಂಘಟನೆಯ ಕಾರ್ಯಕರ್ತರು ಹಾಗೂ ಬೆಂಬಲಿಗರನ್ನು ಬಂಧಿಸಿತ್ತು.

ಇದರಿಂದ ರಾಜ್ಯದಲ್ಲಿ ತಲೆಎತ್ತಿದ್ದ ಭಯೋತ್ಪಾದಕ ಚಟುವಟಿಕೆಗಳು ಒಂದಷ್ಟು ದಿನ ತಣ್ಣಗಾಗಿದ್ದವು. ಇತ್ತೀಚೆಗೆ ಜಮ್ಮುಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳು ಭದ್ರತಾ ವ್ಯವಸ್ಥೆಗೆ ತಲೆನೋವಾಗಿದ್ದು, ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಯುತ್ತಿದೆ.

ತಾಲಿಬಾನ್ ಆಕ್ರಮಿತ ಆಫ್ಘಾನಿಸ್ತಾನದಲ್ಲಿ ಉಗ್ರ ಸಂಘಟನೆಗಳಿಗೆ ಅಡಗುದಾಣ ಒದಗಿಸಲಾಗಿದ್ದು, ಅತ್ಯಾಧುನಿಕ ತರಬೇತಿ ನೀಡುತ್ತಿರುವ ಕುರಿತು ವಿಶ್ವಸಂಸ್ಥೆ ತನ್ನ ವರದಿಯಲ್ಲಿ ಆತಂಕ ವ್ಯಕ್ತಪಡಿಸಿದೆ.ಜಾಗತಿಕ ಉಗ್ರ ಸಂಘಟನೆಯಾಗಿರುವ ಇಸ್ಲಾಮಿಕ್ ಸ್ಟೇಟ್ಸ್ (ಐಸಿಸ್)ಗೆ ಕರಾವಳಿ ಭಾಗದಲ್ಲಿ ಮಿಲೆಂಟನ್ಸ್ಗಳನ್ನು ನೇಮಿಸುತ್ತಿದದ್ದನ್ನು ಎನ್ಐಎ ಪತ್ತೆಹಚ್ಚಿತ್ತು.

ಕೇಂದ್ರ ತನಿಖಾ ಸಂಸ್ಥೆಗಳ ಕ್ರಮದಿಂದ ಸದ್ದಡಗಿದ ಚಟುವಟಿಕೆಗಳು ಮತ್ತೆ ತಲೆ ಎತ್ತಿವೆ ಎಂಬ ಅನುಮಾನಗಳು ಕಾಡಲಾರಂಭಿಸಿದೆ. ನಾಲ್ಕು ಕಡೆಗಳಲ್ಲಿ ಸ್ಯಾಟ್ಲೈಟ್ ಫೋನ್ ಸಂಪರ್ಕ ಸಿಗ್ನಲ್ಗಳು ಪತ್ತೆಯಾಗಿರುವುದು ಇದಕ್ಕೆ ಇಂಬು ನೀಡಿದೆ. ಚಿಕ್ಕಮಗಳೂರಿನ ದಟ್ಟಾರಣ್ಯದಲ್ಲಿ ಮೇ 23ರಿಂದ 29ರ ನಡುವೆ ಸಿಗ್ನಲ್ಗಳು ಪತ್ತೆಯಾಗಿರುವುದಾಗಿ ಮೂಲಗಳು ತಿಳಿಸಿವೆ.ಮಂಗಳೂರಿನಲ್ಲಿ 2 ಕಡೆ, ಚಿಕ್ಕಮಗಳೂರು ಹಾಗೂ ಉತ್ತರಕನ್ನಡ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಸ್ಯಾಟ್ಲೈಟ್ ಫೋನ್ ಸಂಪರ್ಕವಾಗಿರುವ ಮಾಹಿತಿ ಇದೆ. ಮಂಗಳೂರಿನ ನಾಟೇಕಲ್, ಕುಳಾಯಿ, ಚಿಕ್ಕಮಗಳೂರಿನ ಕಡೂರು, ಬಿರೂರು ನಡುವೆ ಉತ್ತರ ಕನ್ನಡದ ಯಲ್ಲಾಪುರ, ಶಿರಸಿ ಮಧ್ಯೆ ಚಟುವಟಿಕೆಗಳು ಕಂಡುಬಂದಿವೆ.

ರಾಜ್ಯ ಆಂತರಿಕ ಭದ್ರತಾ ವಿಭಾಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇದು ಉಗ್ರ ಚಟುವಟಿಕೆಗಳೇ ಅಥವಾ ನಕ್ಸಲ್ ಚಟುವಟಿಕೆಯ ಮುನ್ಸೂಚನೆಗಳೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button