ರಾಜ್ಯ

ಕನ್ನಡ ರಾಜ್ಯೋತ್ಸವ ಹಿನ್ನೆಲೆ: ನಮ್ಮ ಮೆಟ್ರೋದಿಂದ ಪ್ರಯಾಣಿಕರಿಗೆ ಗುಡ್ ನ್ಯೂಸ್

ಕನ್ನಡ ರಾಜ್ಯೋತ್ಸವ ಅಂಗವಾಗಿ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​ ನೀಡಿದ್ದು, ಇನ್ಮುಂದೆ ಪ್ರಯಾಣಿಕರು ಮೊಬೈಲ್ ನಲ್ಲೇ ಮೆಟ್ರೋ ಪ್ರಯಾಣದ ಟಿಕೆಟ್​ ಖರೀದಿಸಲು ಅವಕಾಶ ನೀಡಲಾಗಿದೆ.

ಹೌದು ನಾಳೆಯಿಂದ ನಮ್ಮ ಮೆಟ್ರೋ ಮತ್ತಷ್ಟು ಹೈಟೆಕ್ ಆಗಲಿದ್ದು, ಸಮಯ ಉಳಿತಾಯ, ಚಿಲ್ಲರೆ ಸಮಸ್ಯೆ ಬಗೆಹರಿಸಲು ನಾಳೆ (ನ.1) ರಿಂದ ಕ್ಯೂಆರ್​ ಕೋಡ್​ ಬಳಸಿ ಪ್ರವೇಶ, ನಿರ್ಗಮನಕ್ಕೆ ಅವಕಾಶ ಕಲ್ಪಿಸಲಾಗಿದೆ.ಮೊಬೈಲ್ ಮೂಲಕ ಟಿಕಟ್ ಖರೀದಿಗೆ ಅವಕಾಶ ನೀಡಲಾಗಿದೆ.

ಪ್ರಯಾಣ ಮಾರ್ಗ ನಮೂದಿಸಿ ಟಿಕೆಟ್ ಪಡೆಯಬಹುದು ನಾಳೆಯಿಂದ ಈ ಸೇವೆ ಆರಂಭಿಸಲು ಬಿಎಂಆರ್ ಸಿಎಲ್ ಮುಂದಾಗಿದೆ. ಟೋಕನ್, ಕಾರ್ಡ್ ಬದಲು ಕ್ಯೂಆರ್ ಕೋಡ್ ವ್ಯವಸ್ಥೆ ಬಳಸಲು ಮುಂದಾಗಿದೆ ಎನ್ನಲಾಗಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button