ಕನ್ನಡ ರಾಜ್ಯೋತ್ಸವ – ಕನ್ನಡಿಗರ ಹೆಮ್ಮೆಯ ಹಬ್ಬ

ಚಿಕ್ಕಮಗಳೂರು : ದಿನಾಂಕ – 01/11/2022 ರ ಮಂಗಳವಾರ ಬೆಳ್ಳಿಗ್ಗೆ 8:30 ಕ್ಕೆ ಕರ್ನಾಟಕ ಕ್ರಿಶ್ಚಿಯನ್ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವ ಏರ್ಪಡಿಸಲಾಗಿದ್ದು ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಶ್ರೀಯುತ ಜೋಸೆಫ್ ರವರು ಧ್ವಜಾರೋಹಣ ನೆರವೇರಿಸಿದರು.
ಅವರು ಕನ್ನಡ ರಾಜ್ಯೋತ್ಸವ ಕರ್ನಾಟಕ ಜನತೆಯ ಹೆಮ್ಮೆಯ ಹಬ್ಬವಾಗಿರಬೇಕು, ಪ್ರತಿಯೊಬ್ಬರ ಮನದಲ್ಲಿ ಮತ್ತು ಮನೆಯ ಮೇಲೆ ಕನ್ನಡ ಬಾವುಟ ಹಾರಬೇಕು ಕ್ರೈಸ್ತರು ಕನ್ನಡ ಬಾಷೆಯ ಉಳಿವಿಗಾಗಿ, ಕರ್ನಾಟಕದ ಅಭಿವೃದ್ಧಿಗಾಗಿ,
ಈ ನಾಡಿನ ಸಾಹಿತಿಗಳ, ಕವಿಗಳ ಮತ್ತು ಬರಹಗಾರರ ಏಳಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು, ರಾಜ್ಯ ಯುವ ಘಟಕದ ಉಪಾಧ್ಯಕ್ಷರಾದ ರಿವ್ .
ಫಾ. ಶ್ರೀಧರ್ ಸ್ಯಾಮುವೇಲ್ ಕನ್ನಡ ಬಾಷೆಯ ಮಹತ್ವ, ಕನ್ನಡ ಸಾಹಿತ್ಯ ಮತ್ತು ಕಾವ್ಯಗಳಿಗೆ ದೊರಕಿರುವ ಜಾನಪೀಠ ಪ್ರಶಸ್ತಿಯನ್ನು ಕುರಿತು ಮಾತಾನಾಡಿದರು.
ಜಿಲ್ಲಾಧ್ಯಕ್ಷರಾದ ಶ್ರೀಯುತ ಟಿ.ಆರ್. ಕಾರ್ತಿಕ್ ರವರು ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವ ಶುಭಾಶಯ ಕೋರಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಲಾಗಿರುವ ರಕ್ತದಾನ ಶಿಬಿರ ಮತ್ತು ವೈದ್ಯಕೀಯ ಶಿಬಿರವನ್ನು ಕುರಿತು ಮಾಹಿತಿಯನ್ನು ನೀಡಿದರು.
ಸಂಘಟನೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಪುನೀತ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು ಇದೇ `ಸಂದರ್ಭದಲ್ಲಿ ಬೆಳ್ಳಗಿನ ಉಪಹಾರದೊಂದಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಅನೇಕ ಕಾರ್ಯಕರ್ತರು, ಸಿ.ಸಿ.ಎ. ಪ್ರಧಾನ ಕಾರ್ಯದರ್ಶಿಗಳಾದ ರವಾ, ರವಿಏಂಜೋಲಸ್, ಕ್ರೈಸ್ತ ಪಾದ್ರಿಗಳು, ಕ್ರೈಸ್ತ ಸಮುದಾಯದ ಮುಖಂಡರುಗಳು ಮತ್ತು ಸ್ಥಳೀಯರು ಭಾಗವಹಿಸಿದ್ದರು.
ವರದಿ : ಸುಂದರ್ ಬಾಬು ಚಿಕ್ಕಮಗಳೂರು ಜಿಲ್ಲೆ.