
ಇಂದು ‘ಸಾಹಸ ಸಿಂಹ’ ವಿಷ್ಣುವರ್ಧನ್ ಜನ್ಮದಿನ ಕರುನಾಡಿನ ‘ಸಾಹಸ ಸಿಂಹ’ ಎಂದು ಖ್ಯಾತರಾಗಿರುವ ನಟ ವಿಷ್ಣುವರ್ಧನ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.
ಇವರ ಮೂಲ ಹೆಸರು ಸಂಪತ್ ಕುಮಾರ್. ‘ಶಿವಶರಣ ನಂಬೆಯಕ್ಕ’ ಸಿನಿಮಾದಲ್ಲಿ ಬಾಲನಟನಾಗಿದ್ದ ಇವರು, ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಸಿನಿಮಾದಲ್ಲಿ ನಾಯಕ ನಟನಾಗಿ ಹೊರಹೊಮ್ಮಿದರು.
ಬಳಿಕ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಹಿಂದಿ, ತೆಲುಗು, ತಮಿಳು, ಮಲೆಯಾಳಂ ಚಿತ್ರಗಳಲ್ಲೂ ಹವಾ ಸೃಷ್ಟಿಸಿದ್ದರು. ಅಸಂಖ್ಯಾತ ಅಭಿಮಾನಿಗಳ ಪಾಲಿಗೆ ಇವರು ಇಂದಿಗೂ ‘ವಿಷ್ಣುದಾದಾ’.
‘ಸಾಹಸಸಿಂಹ’ ವಿಷ್ಣುಗೆ ನಮನಇಂದು ಸಾಹಸಸಿಂಹ ಡಾ.ವಿಷ್ಣುವರ್ಧನ್ ಜನ್ಮದಿನ. ಈ ಹಿನ್ನೆಲೆ ವಿಷ್ಣುದಾದನಿಗೆ ನಮನ ಸಲ್ಲಿಸಲು ಸಮಾಧಿ ಸ್ಥಳಕ್ಕೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ.
ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿಯನ್ನು ಬಗೆ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿದೆ. ಹುಟ್ಟುಹಬ್ಬದ ಅಂಗವಾಗಿ ವಿಷ್ಣುವರ್ಧನ್ ಅವರ ಸಮಾಧಿ ಮುಂಭಾಗ ಬೃಹತ್ ಕಟೌಟ್‌ಗಳನ್ನು ಹಾಕಲಾಗಿದ್ದು, ಗಮನ ಸೆಳೆಯುತ್ತಿದೆ.
ಹ್ಯಾಪಿ ಬರ್ತ್ ಡೇ ಶ್ರುತಿ
ಇಂದು ನಟಿ ಶ್ರುತಿ ಜನ್ಮದಿನ. ಇವರು 1977ರ ಸೆ.18ರಂದು ಹಾಸನದಲ್ಲಿ ಹುಟ್ಟಿದರು. ಇವರ ಮೂಲ ಹೆಸರು ಗಿರಿಜಾ. ‘ವೀರ ಸಿಂಧೂರ’ ಸಿನಿಮಾದಲ್ಲಿ 1 ವರ್ಷದ ಮಗುವಾಗಿದ್ದಾಗಲೇ ಪರದೆಯ ಮೇಲೆ ಕಾಣಿಸಿಕೊಂಡಿದ್ದರು.
ಆ ಬಳಿಕ ಕೆಲವೊಂದು ಸಣ್ಣ ಪುಟ್ಟ ಪಾತ್ರನಿರ್ವಹಿಸಿದ ಇವರು, 1990ರಲ್ಲಿ ತೆರೆಕಂಡ ”ಶ್ರುತಿ’ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆಗ ಅವರಿಗೆ 15 ವರ್ಷ.
ಬಳಿಕ ಹಿಂದಿರುಗಿ ನೋಡದ ಶ್ರುತಿ ರಾಷ್ಟ್ರಪ್ರಶಸ್ತಿ ಸೇರಿ ಹಲವು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ರಿಯಲ್ ಸ್ಟಾರ್ ‘ಉಪ್ಪಿ’ಗೆ ಜನ್ಮದಿನದ ಸಂಭ್ರಮ ಇಂದು ಸ್ಯಾಂಡಲ್‌ವುಡ್‌ನ ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬ.
ತಮ್ಮ ವಿಭಿನ್ನ ನಟನೆ, ನಿರ್ದೇಶನದಿಂದ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿರುವ ಇವರು, ಅಭಿಮಾನಿಗಳ ಪಾಲಿಗೆ ಪ್ರೀತಿಯ ‘ಉಪ್ಪಿ’, ‘ತರ್ಲೆ ನನ್ಮಗ’ ಚಿತ್ರದಿಂದ ನಿರ್ದೇಶಕರಾಗಿ ಪಾದಾರ್ಪಣೆ,
1998ರಲ್ಲಿ ತೆರೆಗೆ ಬಂದ ‘ಎ’ ಚಿತ್ರವನ್ನು ಸ್ವತಃ ನಿರ್ದೇಶಿಸಿ, ತಾವೇ ನಟಿಸಿದರು. ಬಳಿಕ ನಟಿ ಪ್ರಿಯಾಂಕ ಅವರನ್ನು ಮದುವೆಯಾಗಿ, ಸದ್ಯ ‘ಪ್ರಜಾಕೀಯ’ದಿಂದ ರಾಜಕೀಯವಾಗಿಯೂ ಸಕ್ರಿಯರಾಗಿದ್ದಾರೆ.
ಡಾಕ್ಟರ್ ಸಾಹಸಸಿಂಹ ವಿಷ್ಣುವರ್ಧನ್, ನಟಿ ಶೃತಿ, ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ನಮ್ಮ ncibtimesmedia ತಂಡದಿಂದ.