ರಾಜ್ಯ

ಕನ್ನಡ ಕಡ್ಡಾಯಕ್ಕೆ ಕಾನೂನು ಸ್ವರೂಪ

ರಾಜ್ಯದಲ್ಲಿ ಕನ್ನಡವೇ ಅಗ್ರಮಾನ್ಯ. ಕನ್ನಡದ ಕಡ್ಡಾಯ ಬಳಕೆಗೆ ಕಾನೂನಿನ ಬಲ ನೀಡಲು ಹೊಸ ಕಾಯ್ದೆಯನ್ನು ಜಾರಿ ಮಾಡುತ್ತಿರುವುದಾಗಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ವಿಧಾನಸಭೆಯಲ್ಲಿಂದು ಘೋಷಿಸಿದರು.

ವಿಧಾನಸಭೆಯಲ್ಲಿಂದು ಜೆಡಿಎಸ್‌ನ ಸದಸ್ಯರುಗಳು ಹಿಂದಿ ದಿವಸ್ ಆಚರಣೆ ಹಾಗೂ ಹಿಂದಿ ಹೇರಿಕೆ ಬಗ್ಗೆ ಪ್ರಸ್ತಾಪಿಸಿದ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಕನ್ನಡ ನೆಲ, ಜಲ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ರಾಜ್ಯದಲ್ಲಿ ಕನ್ನಡವನ್ನು ಅತ್ಯಂತ ಅಗ್ರಮಾನ್ಯವಾಗಿ ಬಳಕೆ ಮಾಡುತ್ತಿದ್ದೇವೆ. ಕನ್ನಡ ಕಡ್ಡಾಯ ಎಂದು ಇದುವರೆಗೂ ಮಾತನಾಡಿದ್ದೇವೆ.

ಇನ್ನು ಮುಂದೆ ಕನ್ನಡ ಕಡ್ಡಾಯ ಮಾಡುವ ನಿಟ್ಟಿನಲ್ಲಿ ಹೊಸ ಕಾನೂನನ್ನೇ ಜಾರಿ ಮಾಡುತ್ತೇವೆ. ಈ ಅಧಿವೇಶನದ್ಲಲೇ ಈ ವಿಧೇಯಕವನ್ನು ಮಂಡಿಸಿ, ಕಾನೂನನ್ನು ಜಾರಿ ಮಾಡುತ್ತೇವೆ ಎಂದರು.ಇದುವರೆಗೂ ಕನ್ನಡ ಜಾರಿ ಮಾಡುವ ವಿಚಾರದಲ್ಲಿ ವಿವಿಧ ಪ್ರಾಧಿಕಾರ ಸಮಿತಿಗಳಿವೆ. ಅವುಗಳಿಗೆ ಒಂದು ಶಾಸನಬದ್ಧ ಅಧಿಕಾರಿಗಳಿಲ್ಲ. ಹಾಗಾಗಿ ಕನ್ನಡ ಕಡ್ಡಾಯಕ್ಕೆ ಕಾನೂನಾತ್ಮಕವಾಗಿ ರಕ್ಷಣೆ ನೀಡಲು ಕನ್ನಡ ಬಳಕೆ ಕಡ್ಡಾಯ ಕಾನೂನನ್ನು ಜಾರಿ ಮಾಡುತ್ತಿದ್ದೇವೆ.

ಪ್ರಥಮ ಬಾರಿಗೆ ಇಂತಹ ಒಂದು ಕಾನೂನನ್ನು ಜಾರಿ ಮಾಡಲಾಗುತ್ತಿದೆ ಎಂದರು.ಕನ್ನಡದ ರಕ್ಷಣೆ ವಿಚಾರದಲ್ಲಿ ಯಾವುದೇ ರಾಜಿ, ಪ್ರಶ್ನೆಯೇ ಇಲ್ಲ. ಯಾರೂ ಆತಂಕಪಡುವ ಅಗತ್ಯವಿಲ್ಲ. ಕನ್ನಡ ರಕ್ಷಣೆ ಮಾತ್ರವಲ್ಲ ಕನ್ನಡ ಬೆಳೆಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.ನೆಲ-ಜಲ- ಭಾಷೆ ವಿಚಾರದಲ್ಲಿ ರಾಜಕೀಯ ಮೀರಿ ನಿರ್ಣಯ ತೆಗೆದುಕೊಂಡಿದ್ದೇವೆ.

ಈಗಲೂ ಕನ್ನಡದ ವಿಚಾರದಲ್ಲಿ ನಮ್ಮ ಬದ್ಧತೆ ಪ್ರಶ್ನಾತೀತ. ಕನ್ನಡವನ್ನು ಉಳಿಸಿ, ಬೆಳೆಸಲು ಏನೆಲ್ಲಾ ಮಾಡಲು ಸಾಧ್ಯವೋ ಅದನ್ನೆಲ್ಲಾ ಮಾಡುತ್ತಿದ್ದೇವೆ. ಇಲ್ಲಿರುವ ಅನ್ಯ ಭಾಷೆಯವರಿಗೂ ಕನ್ನಡ ಕಲಿಸಿ, ಕನ್ನಡವನ್ನು ಬೆಳೆಸುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದರುಹೊಸ ಶಿಕ್ಷಣ ನೀತಿಯಲ್ಲಿ ಕನ್ನಡಕ್ಕೆ ಒತ್ತು ನೀಡಿದ್ದೇವೆ.

ವೃತ್ತಿಪರ ಕಾಲೇಜುಗಳಲ್ಲಿ ಕನ್ನಡದಲ್ಲೇ ಕಲಿಕೆ ಮತ್ತು ಪರೀಕ್ಷೆ ಬರೆಯಲು ಅವಕಾಶ ನೀಡಿದ್ದೇವೆ. ಇದನ್ನು ಯಾರೂ ಹಿಂದೆ ಮಾಡಿರಲಿಲ್ಲ. ಪ್ರಥಮ ಬಾರಿಗೆ ನಮ್ಮ ಸರ್ಕಾರ ಇಂಜಿನಿಯರಿಂಗ್‌ನಲ್ಲಿ ಕನ್ನಡ ಬೋಧನೆ, ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದೆ. ಒಂದು ಸೆಮಿಸ್ಟಾರ್ ಸಹ ಮುಗಿದಿದೆ. ಕನ್ನಡದಲ್ಲೇ ಪಠ್ಯ ಕ್ರಮವನ್ನು ರೂಪಿಸಿದ್ದೇವೆ.

ಹೀಗೆ ಇಂಜಿನಿಯರ್‌ನ್ನು ಕನ್ನಡದಲ್ಲೇ ಕಲಿಯಬಹುದಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರುಭಾರತ ವಿವಿಧ ಭಾಷೆ, ಸಂಸ್ಕೃತ ಇರುವ ದೇಶ. ಯಾವುದೇ ಒಂದು ಭಾಷೆಯನ್ನು ಹೇರಲು ಇಲ್ಲಿ ಅವಕಾಶ ಇಲ್ಲ. ಪ್ರಧಾನಿ ಮೋದಿ ಅವರು ಸಹ ಎಲ್ಲ ಪ್ರಾದೇಶಿಕ ಭಾಷೆಗಳು ರಾಷ್ಟ್ರೀಯ ಭಾಷೆ ಎಂದು ಹೇಳಿದ್ದಾರೆ. ಕನ್ನಡ ರಕ್ಷಣೆ ಮಾತ್ರವಲ್ಲ, ಬೆಳೆಸಲು ನಮ್ಮ ಪಕ್ಷ ಬದ್ಧವಾಗಿದೆ. ಅದರಲ್ಲಿ ಆತಂಕಪಡುವ ಅಗತ್ಯವಿಲ್ಲ.

ಯಾವುದಕ್ಕೂ ರಾಜೀಯಾಗುವ ಪ್ರಶ್ನೆಯೂ ಇಲ್ಲ ಎಂದು ಹೇಳಿದರು.ಇದಕ್ಕೂ ಮೊದಲು ಪ್ರಶ್ನೋತ್ತರ ಅವಧಿ ಮುಗಿಯುತ್ತಿದ್ದಂತೆಯೇ ಜೆಡಿಎಸ್‌ನ ಸದಸ್ಯರುಗಳು ಒಮ್ಮೆಗೆ ಎದ್ದು ನಿಂತು ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿ, ಸದನದಲ್ಲಿ ಪ್ರತಿಭಟನೆಗೆ ಮುಂದಾದಾಗ ಗದ್ದಲದ ವಾತಾವರಣ ನಿರ್ಮಾಣವಾಯಿತು.

ಈ ಸಂದರ್ಭದಲ್ಲಿ ಸಭಾಧ್ಯಕ್ಷರಾದ ವಿಶ್ವೇಶ್ವರಹೆಗಡೆ ಕಾಗೇರಿ ಅವರು, ಹೀಗೆ ಯಾವುದೇ ನೋಟಿಸ್ ನೀಡದೆ ಏಕಾಏಕಿ ಎದ್ದು ನಿಲ್ಲುವುದು ಸರಿಯಲ್ಲ ಎಂದು ಹೇಳಿದಾಗ, ಜೆಡಿಎಸ್ ಕುಮಾರಸ್ವಾಮಿ ಅವರು ಎದ್ದು ನಿಂತು ಹಿಂದಿ ದಿವಸ್ ಆಚರಣೆಯಿಂದ ಕನ್ನಡದ ಭಾಷೆಗೆ ತೊಂದರೆಯಾಗುತ್ತಿದೆ ಎಂಬ ಆತಂಕದಿಂದ ತಮ್ಮ ಸದಸ್ಯರು ಸರ್ಕಾರದ ಗಮನ ಸೆಳೆದಿದ್ದಾರೆ.

ಇಂದು ಜೆಡಿಎಸ್ ಸದಸ್ಯರು ಸದನದ ಹೊರಗೆ ಹಿಂದಿ ದಿವಸ್ ಆಚರಣೆಗೆ ವಿರೋಧ ವ್ಯಕ್ತಪಡಿಸಿದ ಧರಣಿ ಮಾಡಿದ್ದಾರೆ. ನಮ್ಮ ಭಾಷೆಗೆ ಧಕ್ಕೆ ಬರಬಾರದು ಅಷ್ಟೆ. ಸದನ ಸಮಯ ಹಾಳು ಮಾಡುವುದು ನಮ್ಮ ಉದ್ದೇಶ ಅಲ್ಲ.

ಹಿಂದಿ ಒಂದು ಭಾಷೆ ಅದನ್ನು ರಾಷ್ಟ್ರ ಭಾಷೆ ಮಾಡಲು ಹೊರಟಿದ್ದಾರೆ. ಎಲ್ಲ ಭಾಷೆಗಳಿಗೂ ಅದರದ್ದೇ ಆದ ಐತಿಹಾಸಿಕ ಇತಿಹಾಸ ಇದೆ. ಆ ದೃಷ್ಟಿಯಿಂದ ಬಲವಂತದಿಂದ ಕತ್ತುಹಿಸುಕುವ ಕೆಲಸ ಆಗಬಾರದು. ಯಾವುದೇ ಭಾಷೆಯನ್ನು ಹೇರಬಾರದು ಎಂಬುದನ್ನು ನಮ್ಮ ಪಕ್ಷದ ನಿಲುವು ಎಂದು ಹೇಳಿದ್ದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button