ರಾಜ್ಯ

ಕನ್ನಡವೇ ನಮ್ಮ ತಾಯಿ, ಇಂಗ್ಲಿಷ್‌ ವ್ಯವಹಾರಿಕ ಭಾಷೆ: ಸುಧಾಮೂರ್ತಿ

ರಾಣೇಬೆನ್ನೂರ: ಜೀವನದಲ್ಲಿ ಮಕ್ಕಳಿಗೆ ಶಿಕ್ಷಣ ಮುಖ್ಯವಾಗಿದೆ. ಸಮಯಕ್ಕೆ ಮಹತ್ವ ನೀಡಿ ಮುನ್ನಡೆದರೆ ಜೀವನದಲ್ಲಿ ಸುಖವಾಗಿರಬಹುದು ಎಂದು ಬೆಂಗಳೂರಿನ ಇನ್ಪೋಸಿಸ್‌ ಪ್ರತಿಷ್ಠಾನ ಸಂಸ್ಥಾಪಕಿ ಸುಧಾಮೂರ್ತಿ (Sudha Murty) ಹೇಳಿದರು.

ನಗರದ ಸಿದ್ದೇಶ್ವರ ಸಭಾ ಭವನದಲ್ಲಿ ಸ್ಥಳೀಯ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ ಶನಿವಾರ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇ ಉತ್ತಮ ವ್ಯಕಿತ್ವ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು.

ಇದರಿಂದ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ರೂಪಗೊಳ್ಳಲು ಸಾಧ್ಯವಾಗುತ್ತದೆ ಎಂದರು.ಸಮಯ ಶಿಸ್ತು ಪಾಲನೆ ಅತ್ಯಂತ ಮಹತ್ವವಾಗಿದೆ. ಸಮಾಜದಲ್ಲಿ ಶಿಕ್ಷಣದಿಂದ ಮಾತ್ರ ಬದಲಾವಣೆ ಕಾಣಬಹುದಾಗಿದೆ.

ಹೀಗಾಗಿ ಪ್ರತಿಯೊಬ್ಬರೂ ಶಿಕ್ಷಣದ ಬಗ್ಗೆ ಹೆಚ್ಚು ಗಮನಹರಿಸಬೇಕು. ಜೀವನದಲ್ಲಿ ಮುಂದೆ ಬರಬೇಕಾದರೇ ಕಠಿಣ ಪರಿಶ್ರಮ, ಮಾಡುವ ಕೆಲಸ ಮೇಲೆ ಶ್ರದ್ಧೆ ಹಾಗೂ ಉತ್ತಮ ಮಾತು ಬಲ್ಲವರಾಗಬೇಕು. ಪ್ರತಿ ನಿಮಿಷದಲ್ಲಿ ಹೊಸ ಕಲಿಕೆ ಮುಖ್ಯವಾಗಿದೆ ಎಂದರು. ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಥೆ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಪ್ರಕಾಶ ಬುರಡಿಕಟ್ಟಿ, ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ತಿಳವಳ್ಳಿ, ಡಾ.ಬಸವರಾಜ ಕೇಲಗಾರ, ಸದಸ್ಯರಾದ ಕವಿತಾ ಹೆದ್ದೇರಿ, ಜಯ ಪಿಸೆ, ಹನುಮಂತಪ್ಪ ಹೆದ್ದೇರಿ, ಡಾ. ಪ್ರಮೋದ ನಲವಾಗಲ, ವೀರೇಶ ಹೆದ್ದೇರಿ, ಕಿರಣ ತೋಟಪ್ಪನವರ, ಪ್ರಮೋದ ಯಲವಟ್ಟಿ, ಜಗದೀಶ ಗೌಡಶಿವಣ್ಣನವರ, ಹನುಮಂತಪ್ಪ ಹೆದ್ದೇರಿ ಸೇರಿದಂತೆ ಇತರರಿದ್ದರು.* ಕನ್ನಡವೇ ನಮ್ಮ ತಾಯಿ.

ಮೊದಲು ಮಾತೃಭಾಷೆ ಗೌರವಿಸಬೇಕು. ಇಂಗ್ಲಿಷ್‌ ಭಾಷೆ ವ್ಯವಹಾರಿಕ ಭಾಷೆಯಾಗಿದೆ. ಕೃಷ್ಣನಿಗೆ ಇಬ್ಬರ ಅಮ್ಮನಂತೆ ನಮಗೂ ಕೂಡ ಕನ್ನಡ ಹಾಗೂ ಇಂಗ್ಲೀಷ್‌ ಭಾಷೆಬೇಕು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button