
ಕಳ್ಳತನ ಮಾಡಿದ್ದ ಒಡವೆಯನ್ನು ರಿಕವರಿ ಮಾಡಲು ಹೋದಾಕ್ಷಣ ಚಿನ್ನಾಭರಣ ಅಡವಿಟ್ಟುಕೊಳ್ಳುವ ಸಂಸ್ಥೆ ಬೀಗ ಜಡಿದುಕೊಂಡು ಪರಾರಿಯಾಗಿರುವ ಘಟನೆ ತುರುವೇಕೆರೆಯಲ್ಲಿ ನಡೆದಿದೆ. ತುರುವೇಕೆರೆ ಪಟ್ಟಣದಲ್ಲಿರುವ ಮಣಪ್ಪುರಂ ಚಿನ್ನಾಭರಣ ಸಂಸ್ಥೆಯಲ್ಲಿ ಗುಬ್ಬಿ ತಾಲ್ಲೂಕು ಸಿಎಸ್ ಪುರದ ಗಿರೀಶ್ ಮತ್ತು ಗೋವಿಂದ್ 80ಕ್ಕೂ ಹೆಚ್ಚು ಕದ್ದ ಒಡವೆಗಳನ್ನು ಅಡವಿಟ್ಟಿದ್ದರು ಎನ್ನಲಾಗಿದೆ.
ಕಳೆದ 20 ದಿನಗಳ ಹಿಂದೆ ಗುಬ್ಬಿ ತಾಲೂಕಿನ ಸಿಎನ್ ಪಾಳ್ಯದಲ್ಲಿ ನಡೆದ ಕಳ್ಳತನ ಪ್ರಕರಣ ಬೆನ್ನತ್ತಿದ್ದ ಪೊಲೀಸರು, ಗಿರೀಶ್ ಹಾಗೂ ಗೋವಿಂದ್ ಎಂಬುವರನ್ನು ಬಂಧಿಸಿದ್ದಾರೆ.
ಕಳ್ಳತನ ಮಾಡಿದ್ದ ಒಡವೆಗಳನ್ನು ಮಣಪ್ಪುರಂನಲ್ಲಿ ಅಡವಿಟ್ಟಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ, ರಿಕವರಿ ಮಾಡಲು ಹೋದ ಪೊಲೀಸರಿಗೆ ಮಣಪ್ಪುರಂ ಸಂಸ್ಥೆ ಶಾಕ್ ನೀಡಿದ್ದು, ಒಡವೆ ನೀಡದೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾರೆ.
ಗುಬ್ಬಿ ಸಿಪಿಐ ನದಾಫ್ ಮಣಪ್ಪುರಂ ಗೋಲ್ಡïಗೆ ತೆರಳಿದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿ ಬೇಜವಾಬ್ದಾರಿ ವರ್ತನೆ ತೋರಿದ್ದು, ರಿಕವರಿ ಇಲ್ಲದೆ ಬರಿಗೈಯಲ್ಲಿ ವಾಪಸಾಗಿದ್ದಾರೆ.