ಕಡ್ಡಾಯ ಗಲ್ಲು ಶಿಕ್ಷೆ ರದ್ದುಗೊಳಿಸಲು ಮುಂದಾದ ಮಲೇಶಿಯಾ

ನವದೆಹಲಿ: ಮಲೇಷ್ಯಾ ಸರ್ಕಾರವು ಶುಕ್ರವಾರದಂದು ತನ್ನ ಆಶ್ವಾಸನೆಯ ಭಾಗವಾಗಿ ಕಡ್ಡಾಯ ಮರಣದಂಡನೆಯನ್ನು ರದ್ದುಗೊಳಿಸಲು ಒಪ್ಪಿಕೊಂಡಿದೆ, ಈಗ ಜಗತ್ತಿನಾಧ್ಯಂತ ಇರುವ ಮಾನವ ಹಕ್ಕುಗಳ ಹೋರಾಟಗಾರರು ಸರ್ಕಾರದ ನಡೆಯನ್ನು ಸ್ವಾಗತಿಸಿದ್ದಾರೆ, ಅಷ್ಟೇ ಅಲ್ಲದೆ ಜೊತೆಗೆ ಇದನ್ನು ಪ್ರಾಯೋಗಿಕವಾಗಿ ಜಾರಿಗೆ ತರಬೇಕೆಂದು ಅವರು ಒತ್ತಾಯಿಸಿದ್ದಾರೆ.
ಈಗಾಗಲೇ ಹಲವಾರು ಬಾರಿ ಸರ್ಕಾರಗಳು ಮರಣದಂಡನೆಯನ್ನು ರದ್ದುಗೊಳಿಸುವುದಾಗಿ ಆಶ್ವಾಸನೆಯನ್ನು ನೀಡಿದ್ದರೂ ಕೂಡ ಅದನ್ನು ಜಾರಿಗೆ ಗೊಳಿಸಲು ವಿಫಲವಾಗಿದ್ದವು, ಈಗ ಮತ್ತೆ ಮಲೇಶಿಯಾ ಸರ್ಕಾರವು ಈಗ ಈ ಉಲ್ಲೇಖ ಮಾಡಿರುವ ಹಿನ್ನೆಲೆಯಲ್ಲಿ ಹೋರಾಟಗಾರರ ಪ್ರತಿಕ್ರಿಯೆ ಬಂದಿದೆ.ಇನ್ನೊಂದೆಡೆಗೆ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಹ್ಯೂಮನ್ ರೈಟ್ಸ್ ವಾಚ್‌ನ ಉಪ ಏಷ್ಯಾ ನಿರ್ದೇಶಕ ಫಿಲ್ ರಾಬರ್ಟ್‌ಸನ್ “ಕಡ್ಡಾಯ ಮರಣದಂಡನೆಯನ್ನು ತೆಗೆದುಹಾಕುವುದಾಗಿ ಮಲೇಷ್ಯಾದ ಸಾರ್ವಜನಿಕ ಘೋಷಣೆಯು ಒಂದು ಪ್ರಮುಖ ಹೆಜ್ಜೆಯಾಗಿದೆ.ಆದರೆ ಈ ಪ್ರತಿಜ್ಞೆಯನ್ನು ಜಾರಿಗೆ ತರಲು ಮಲೇಷ್ಯಾ ನಿಜವಾದ ಶಾಸಕಾಂಗ ತಿದ್ದುಪಡಿಗಳನ್ನು ಅಂಗೀಕರಿಸುವುದನ್ನು ನಾವು ನೋಡಬೇಕಾಗಿದೆ.ಸಾಮಾನ್ಯವಾಗಿ ಬಹುತೇಕ ಸರ್ಕಾರಗಳು ಹೆಚ್ಚಿನ ಭರವಸೆಯನ್ನು ನೀಡುತ್ತವೆ, ಆದರೆ ಅದನ್ನು ಜಾರಿಗೆ ತರುವಲ್ಲಿ ವಿಫಲವಾಗುತ್ತವೆ ಎಂದು ಅವರು ಹೇಳಿದರು.