ರಾಷ್ಟ್ರಿಯ
ಕಟ್ಟಿದ್ದು 12 ರೂ., ಬಂದಿದ್ದು 2 ಲಕ್ಷ ರೂ.! : ಹಾವು ಕಚ್ಚಿ ಮೃತಪಟ್ಟಿದ್ದಕ್ಕೆ ಪಿಎಂಎಸ್‌ಬಿವೈ ವಿಮೆ ಪರಿಹಾರ

ಆಳಂದ(ಕಲಬುರಗಿ): ಭಾರತೀಯ ಸ್ಟೇಟ್ ಬ್ಯಾಂಕ್‌ನ ಸರಸಂಬಾ ಶಾಖೆಯಲ್ಲಿ 12 ರೂ. ಪಾವತಿಸಿ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ವಿಮೆ ಮಾಡಿಸಿದ್ದ ವ್ಯಕ್ತಿಯೊಬ್ಬನ ಕುಟುಂಬಕ್ಕೆ 2 ಲಕ್ಷ ರೂ. ಚೆಕ್ ಬಂದಿದ್ದು, ಸಂಕಷ್ಟದಲ್ಲಿದ್ದ ಕುಟುಂಬಸ್ಥರಿಗೆ ನೆರವಾಗಿದೆ. ಶಿವಕುಮಾರ್ ಮಾಳಿ ಎಂಬುವರು 2019ರ ಡಿಸೆಂಬರ್‌ನಲ್ಲಿ ಎಸ್‌ಬಿಐನಲ್ಲಿ 12 ರೂ. ನೀಡಿ ಪಿಎಂಎಸ್‌ಬಿವೈ ಅಡಿ ವಿಮೆ ಮಾಡಿಸಿದ್ದರು. 2020ರ ಫೆ.20ರಂದು ಶಿವಕುಮಾ ಹೊಲದಲ್ಲಿ ಕೆಲಸ ಮಾಡುವಾಗ ಹಾವು ಕಡಿದು ಮೃತಪಟ್ಟಿದ್ದರು. ಯೋಜನೆ ಕಸ್ಟಮರ್ ಸರ್ವಿಸ್ ಪಾಯಿಂಟ್‌ನವರು ಮೃತನ ಕುಟುಂಬಸ್ಥರಿಗೆ 2 ಲಕ್ಷ ರೂ. ಪರಿಹಾರ ದೊರಕಿಸಿಕೊಟ್ಟಿದ್ದಾರೆ. ಪಿಎಂಎಸ್‌ಬಿವೈ ವಿಭಾಗೀಯ ವ್ಯವಸ್ಥಾಪಕ ನಾಗರಾಚ ಕುಂಚಾ 2 ಲಕ್ಷ ರೂ. ಚೆಕ್ ಅನ್ನು ಕುಟುಂಬಸ್ಥರಿಗೆ ಶುಕ್ರವಾರ ಹಸ್ತಾಂತರಿಸಿದರು.
