ರಾಜ್ಯ

ಓಲಾ, ಉಬರ್‌ ಆಟೊ ಕನಿಷ್ಠ ದರ 100 ರೂ.ಗೆ ಏರಿಕೆ; ದುಬಾರಿ ದರಕ್ಕೆ ಸಾರ್ವಜನಿಕರ ಅಸಮಾಧಾನ

ಬೆಂಗಳೂರು: ರಾಜ್ಯ ಸರಕಾರವು ನಗರದಲ್ಲಿ ಆಟೊರಿಕ್ಷಾಗಳಿಗೆ ಮೊದಲ ಎರಡು ಕಿ.ಮೀ.ಗೆ ಕನಿಷ್ಠ ಪ್ರಯಾಣ ದರವನ್ನು 30 ರೂ. ನಿಗದಿಪಡಿಸಿದೆ. ಆದರೆ, ಓಲಾ, ಉಬರ್‌ನಂತಹ ಅಗ್ರಿಗೇಟರ್‌ ಟ್ಯಾಕ್ಸಿ ಕಂಪೆನಿಗಳು ಕನಿಷ್ಠ ದರವನ್ನು 100 ರೂ.

ಗೆ ಹೆಚ್ಚಿಸಿದ್ದು, ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.ಓಲಾ, ಊಬರ್‌, ರ್‍ಯಾಪಿಡೋದಲ್ಲಿ ಪ್ರತಿ ಒಂದು ಕಿ.ಮೀ.ಗೆ (ನಾನ್‌ ಪೀಕ್‌ ಅವರ್‌) ಪ್ರಯಾಣ ದರ ಎಷ್ಟಿದೆ ಎಂದು ಬುಧವಾರ ಮಧ್ಯಾಹ್ನ 1 ಗಂಟೆಗೆ ಪರಿಶೀಲಿಸಿದಾಗ ದರ ಹೆಚ್ಚಳ ಮಾಡಿರುವುದು ದೃಢಪಟ್ಟಿದೆ. ಓಲಾದಲ್ಲಿ 104 ರೂ.

ತೋರಿಸಿದರೆ, ಊಬರ್‌ನಲ್ಲಿ 103 ರೂ. ಇತ್ತು. ರ್‍ಯಾಪಿಡೋದಲ್ಲಿ 89 ರೂ. ದರ ನಿಗದಿಪಡಿಸಲಾಗಿದೆ.ರ್‍ಯಾಪಿಡೋ ಸಂಸ್ಥೆ 3.5 ಕಿ.ಮೀ.ವರೆಗೆ 55 ರೂ. ಚಾರ್ಜ್ ಮಾಡುತ್ತದೆ. ”ಡ್ರೈವರ್‌ ನಿಗದಿತ ಸ್ಥಳಕ್ಕೆ ಬಂದ 3 ನಿಮಿಷ ಬಳಿಕ ಪ್ರತಿ ನಿಮಿಷಕ್ಕೆ 1.50 ರೂ.

ನಂತೆ ಕಾಯುವ ದರ ಕೊಡಬೇಕಾಗುತ್ತದೆ,” ಎಂದು ರ್‍ಯಾಪಿಡೋ ವೆಬ್‌ಸೈಟ್‌ ಹೇಳುತ್ತಿದೆ. ”ನಾವು ಕನಿಷ್ಠ ದರವನ್ನು 100 ರೂ.ಗೆ ಹೆಚ್ಚಿಸಿಲ್ಲ. ಪೀಕ್‌ ಅವರ್‌ಗಳಲ್ಲಿ ‘ಡೈನಾಮಿಕ್‌ ಸರ್ಚ್ ಪ್ರೈಸಿಂಗ್‌’ ವ್ಯವಸ್ಥೆ ಇರುವುದರಿಂದ ದರ ಹೆಚ್ಚಾಗುತ್ತದೆ,” ಎಂದು ರ್‍ಯಾಪಿಡೋ ವಕ್ತಾರರು ಹೇಳಿದ್ದಾರೆ. ಈ ಬಗ್ಗೆ ಓಲಾ ಮತ್ತು ಊಬರ್‌ ಪ್ರತಿಕ್ರಿಯೆಗೆ ಸಿಗಲಿಲ್ಲ.

ಸರಕಾರ ನಿಗದಿಪಡಿಸಿದ ದರ ಎಷ್ಟು?ಆಟೋರಿಕ್ಷಾಗಳಿಗೆ ಮೊದಲ 2 ಕಿ.ಮೀ.ಗಳಿಗೆ 30 ರೂ. ಹಾಗೂ ಬಳಿಕ ಪ್ರತಿ ಕಿ.ಮೀ.ಗೆ 15 ರೂ. ನಿಗದಿಪಡಿಸಲಾಗಿದೆ. ರಾತ್ರಿ ಪ್ರಯಾಣಕ್ಕೆ (ರಾತ್ರಿ 10ರಿಂದ ಬೆಳಗಿನ ಜಾವ 5ರವರೆಗೆ)ಸಾಮಾನ್ಯ ಅವಧಿಯ ಬಾಡಿಗೆ ಮೊತ್ತದ ಜತೆಗೆ ಶೇ 50ರಷ್ಟನ್ನು ಹೆಚ್ಚು ಪಡೆಯಬಹುದು. ಮೊದಲ 5 ನಿಮಿಷಗಳಿಗೆ ಕಾಯುವ ದರ ಇಲ್ಲ. ಬಳಿಕ ಪ್ರತಿ 15 ನಿಮಿಷಕ್ಕೆ 5 ರೂ.

ಪಡೆಯಬಹುದು ಎಂದು ಸರಕಾರ ಆದೇಶಿಸಿದೆ. ಆದರೆ, ಈ ಯಾವ ನಿಯಮಗಳೂ ಅಗ್ರಿಗೇಟರ್‌ ಟ್ಯಾಕ್ಸಿ ಕಂಪೆನಿಗಳಿಗೆ ಅನ್ವಯವಾಗುತ್ತಿಲ್ಲ. ಹೀಗಾಗಿ, ಅಗ್ರಿಗೇಟರ್‌ಗಳು ವಿಧಿಸಿದ್ದೇ ದರ ಎಂಬಂತಾಗಿದೆ.”ಹೈಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆಯಲ್ಲಿರುವ ಕಾರಣ ಅಗ್ರಿಗೇಟರ್‌ಗಳ ವಿರುದ್ಧ ನಾವು ಕ್ರಮ ಕೈಗೊಳ್ಳಲಾಗುತ್ತಿಲ್ಲ,” ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.ಟ್ಯಾಕ್ಸಿಗಳು ಕನಿಷ್ಠ 100 ರೂ.

ದರ ವಿಧಿಸುತ್ತಿರುವುದು ಹಗಲು ದರೋಡೆ, ಎಂದು ಅಗ್ರಿಗೇಟರ್‌ಗಳ ವಿರುದ್ಧ ಸಾರ್ವಜನಿಕರು ಕಿಡಿ ಕಾರಿದ್ದಾರೆ. ”100 ರೂ. ವಸೂಲಿ ಮಾಡುತ್ತಿದ್ದರೂ ಅಗ್ರಿಗೇಟರ್‌ಗಳ ವಿರುದ್ಧ ಕ್ರಮ ಏಕಿಲ್ಲ,” ಎಂದು ಕೋರಮಂಗಲದ ಎಸ್‌.

ವಿನಯ ಎಂಬುವವರು ಪ್ರಶ್ನಿಸಿದ್ದಾರೆ. ”ಅಗ್ರಿಗೇಟರ್‌ಗಳು ಹೆಚ್ಚಿನ ದರ ವಿಧಿಸಿದಲ್ಲಿ ಸಾಮಾನ್ಯ ಆಟೊ ಚಾಲಕರು ಕೂಡ ಇದೇ ದರವನ್ನು ಕೇಳುತ್ತಾರೆ,” ಎಂದು ಅವರು ಹೇಳಿದ್ದಾರೆ.ದಿನ ಕಳೆದಂತೆ ಬದಲಾಯ್ತುಆರಂಭದಲ್ಲಿ ಅಗ್ರಿಗೇಟರ್‌ಗಳು ನಗರ ಪ್ರಯಾಣಿಕರಿಗೆ ಏನು ಬಯಸುತ್ತಾರೋ ಅದೇ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಿದ್ದರು.

ಮನೆ ಬಾಗಿಲಿಗೇ ಆಟೊಗಳು ಬರುತ್ತಿರುವುದು, ಜಿಪಿಎಸ್‌ ಟ್ರ್ಯಾಕಿಂಗ್‌ನಂತಹ ಸೌಲಭ್ಯ, ಚರ್ಚೆಗೆ ಅವಕಾಶವಿಲ್ಲದಂತಹ ವ್ಯವಸ್ಥೆ ಗ್ರಾಹಕರನ್ನು ಸೆಳೆದಿತ್ತು. ದಿನ ಕಳೆದಂತೆ ಚಾಲಕರಿಗೆ ಕೊಡುತ್ತಿದ್ದ ಇನ್ಸೆಂಟೀವ್‌ಗೆ ಕತ್ತರಿ ಬಿದ್ದಿದೆ.

ಇದೀಗ ಗ್ರಾಹಕರಿಗೂ ಹೊರೆಯಾಗುತ್ತಿದೆ.ಸರಕಾರ ನಿಗದಿಪಡಿಸಿದ ಆಟೊ ಪ್ರಯಾಣ ದರಮೊದಲ 2 ಕಿ.ಮೀ.ಗಳಿಗೆ 30 ರೂ., ಬಳಿಕ ಪ್ರತಿ ಕಿ.ಮೀ.ಗೆ 15 ರೂ.ಮೊದಲ 5 ನಿಮಿಷಗಳಿಗೆ ವೇಟಿಂಗ್‌ ಚಾಜ್‌ರ್‍ ಇಲ್ಲ. ಬಳಿಕ ಪ್ರತಿ 15 ನಿಮಿಷಕ್ಕೆ 5 ರೂ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button