
ನಟ ಶರಣ್ -ನಿಶ್ವಿಕಾ ನಾಯ್ಡು ಅಭಿನಯದ ಗುರು-ಶಿಷ್ಯರು ಸಿನಿಮಾ ಒಟಿಟಿ ಫ್ಲಾಟ್ ಫಾರಂಗೆ ಬರುತ್ತಿದೆ.
ಖೊ ಖೊ ಆಟದ ಕಥಾಹಂದರ ಇರುವ ಚಿತ್ರದ ಕುರಿತು ಉತ್ತಮ ವಿಮರ್ಶೆ ಕೇಳಿ ಬಂದಿತ್ತು ಜತೆಗೆ ಕನ್ನಡದಲ್ಲಿ ಕ್ರೀಡೆಯ ಕಥೆ ಇಟ್ಟುಕೊಂಡು ಬಂದ ಸಿನಿಮಾಗಳ ಸಂಖ್ಯೆ ವಿರಳ.
ಹೀಗಾಗಿ ಸಿನಿಮಾ ಕುರಿತು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಂಡ ಈ ಸಿನಿಮಾ ಈಗ ಒಟಿಟಿಗೆ ಕಾಲಿಡುತ್ತಿದೆ.
ಜೀ2 (Zee5) ಒಟಿಟಿ ಮೂಲಕ ವೀಕ್ಷಣೆಗೆ ಲಭ್ಯವಾಗುತ್ತಿದೆ.‘ಗುರು ಶಿಷ್ಯರು’ ಸಿನಿಮಾದ ಸ್ಟ್ರೀಮಿಂಗ್ ನವೆಂಬರ್ 11ರಂದು ಜೀ5 ಒಟಿಟಿಯಲ್ಲಿ ಆರಂಭ ಆಗಲಿದೆ.
ಸೆಪ್ಟೆಂಬರ್ 23ರಂದು ರಾಜ್ಯಾದ್ಯಂತ ತೆರೆಕಂಡ ಈ ಸಿನಿಮಾದಲ್ಲಿ ದತ್ತಣ್ಣ, ಅಪೂರ್ವ ಕಾಸರವಳ್ಳಿ ಕೂಡ ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ.
ಅಂದಹಾಗೆ ಎಲ್ಲ ವಯೋಮಾನದ ಪ್ರೇಕ್ಷಕರಿಗೂ ಇಷ್ಟ ಆಗುವಂತಹ ಸಿನಿಮಾ ‘ಗುರು ಶಿಷ್ಯರು’. ಅದರಲ್ಲೂ ವಿಶೇಷವಾಗಿ ಶಾಲಾ ಮಕ್ಕಳಿಗೆ ಹೆಚ್ಚು ಆಪ್ತ ಎನಿಸುತ್ತದೆ.