ರಾಜ್ಯ
ಒಕ್ಕಲಿಗ ಮತ್ತು ಪಂಚಮಸಾಲಿ ಮೀಸಲಾತಿಗೆ ಎರಡು ಕ್ಯಾಟಗರಿ ಸೃಷ್ಠಿ ಕೇವಲ ಕಣ್ಣೋರೆಸುವ ತಂತ್ರ- ಸಿದ್ಧರಾಮಯ್ಯ ಟೀಕೆ.

ಒಕ್ಕಲಿಗ ಮತ್ತು ಪಂಚಮಸಾಲಿ ಮೀಸಲಾತಿಗೆ ಎರಡು ಹೊಸ ಕ್ಯಾಟಗರಿ ಸೃಷ್ಟಿಸಿರುವುದು ಕೇವಲ ಕಣ್ಣೋರೆಸುವ ತಂತ್ರ. ಇದಕ್ಕೆ ಸಂವಿಧಾನ ಮಾನ್ಯತೆ ಇಲ್ಲ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಟೀಕಿಸಿದರು.
ಈ ಕುರಿತು ಇಂದು ಮಾತನಾಡಿದ ಸಿದ್ಧರಾಮಯ್ಯ, ಮೀಶಲಾತಿ 2ಸಿ 2ಡಿ ಬಗ್ಗೆ ಮಾತನಾಡಲು ನಾನು ಅಧ್ಯಯನ ಮಾಡಬೇಕು. 3ಎ 3ಬಿ ಎಲ್ಲಾ ಜಾತಿಗಳು 2ಸಿ 2ಡಿಗೆ ಬರುತ್ತವೆಯೇ..? ಇದೊಂದು ಕಣ್ಣೊರೆಸುವ ತಂತ್ರವಷ್ಟೆ ಎಂದು ಕಿಡಿಕಾರಿದರು.
ಕೆಂಪಣ್ಣ ರೀತಿಯಲ್ಲೇ ಸಿದ್ಧರಾಮಯ್ಯ ಕೂಡ ಅರೆಸ್ಟ್ ಆಗುತ್ತಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆ ಖಂಡಿಸಿದ ಸಿದ್ಧರಾಮಯ್ಯ, ಕಟೀಲು ಒಬ್ಬ ವಿದೂಷಕ,ವಿದೂಷಕನ ಮಾತಿಗೆ ಉತ್ತರ ಕೊಡಲ್ಲ ಎಂದು ತಿಳಿಸಿದರು.