ಒಂದು ತಿಂಗಳಲ್ಲಿ ಕಳಸಾ ಬಂಡೂರಿ ಕಾಮಗಾರಿ

ಕಳಸಾ ಬಂಡೂರಿ ಯೋಜನೆಗೆ ಇನ್ನೊಂದು ತಿಂಗಳಲ್ಲಿ ಡಿಪಿಆರ್ ಅನುಮೋದನೆ ಪಡೆದು ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಜಲ ಆಯೋಗ ನೀಡಿರುವ ಅನುಮತಿ ಪತ್ರದಲ್ಲಿ ದಿನಾಂಕವೇ ಇಲ್ಲ ಎಂದು ಹೆಚ್.ಕೆ. ಪಾಟೀಲ್ ಹೇಳಿರುವುದು ಸರಿಯಲ್ಲ.
’ಮಹದಾಯಿ ಯೋಜನೆ ವಿಚಾರದಲ್ಲಿ ಜನರಿಗೆ ಮೋಸ ಮಾಡಿದ್ದೇ ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿ ಅಧಿಕೃತ ಆದೇಶದ ಪ್ರತಿಯನ್ನು ತೋರಿಸಿದ ಸಚಿವ ಗೋವಿಂದ ಕಾರಜೋಳ ಅವರು, ಹೆಚ್.ಕೆ. ಪಾಟೀಲ್‌ರವರು ದಿನಾಂಕ ಇಲ್ಲ, ಸಹಿ ಇಲ್ಲ, ಎಕ್ಸ್‌ಪೆರಿಯಾಗಿದೆ ಎಂದು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.ಇನ್ನೊಂದು ತಿಂಗಳಲ್ಲಿ ಡಿಪಿಆರ್‌ಗೆ ಅನುಮೋದನೆ ಪಡೆದು ಭೂಮಿ ಪೂಜೆ ಮಾಡಿದಾಗ ಹೆಚ್.ಕೆ ಪಾಟೀಲ್‌ಗೆ ವಿಶೇಷ ಆಹ್ವಾನ ಕೊಡುತ್ತೇನೆ.
ಆಗ ಅವರು ಮಾತನಾಡಲಿ, ಸುಮ್ಮನೆ ಜನರನ್ನು ದಿಕ್ಕು ತಪ್ಪಿಸುವುದು ಬೇಡ ಎಂದರು.ಕಳಸಾ ಬಂಡೂರಿ ಯೋಜನೆಗೆ ಆಡಳಿತಾತ್ಮಕ ತಾಂತ್ರಿಕ ಅನುಮೋದನೆ ಪಡದು ಟೆಂಡರ್ ಕರೆಯುತ್ತೇವೆ. ಕಾಮಗಾರಿಯನ್ನು ಅನುಷ್ಠಾನ ಮಾಡಿಯೇ ತೀರುತ್ತೇವೆ ಎಂದರು